Amitabh Bachchan: ಬಾಕ್ಸ್ ಆಫೀಸ್ ಭರ್ಜರಿ ಹಿಟ್ ನೀಡಿ 40 ಪ್ರಶಸ್ತಿ ಗೆದ್ದ ಅಮಿತಾಭ್ ಚಿತ್ರ ಯಾವುದು ಗೊತ್ತಾ?
ಅಮಿತಾಭ್ ಬಚ್ಚನ್ ಹಿಂದಿ ಚಿತ್ರೋದ್ಯಮದಲ್ಲಿ ಜನಪ್ರಿಯ ನಟ ಎಂದು ಗುರುತಿಸಿಕೊಂಡಿದ್ದಾರೆ. ಹಲವಾರು ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಹಲವಾರು ಯಶಸ್ವಿ ಚಲನಚಿತ್ರಗಳನ್ನು ನೀಡಿರುವ ಬಿಗ್ ಬಿ ಅವರ ಚಿತ್ರವೊಂದು 40 ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.



ಅಮಿತಾಭ್ ಬಚ್ಚನ್ ಬಹಳ ವರ್ಷಗಳಿಂದ ಸಿನಿಮಾ ಜಗತ್ತಿನಲ್ಲಿದ್ದು, ಬಾಲಿವುಡ್ಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಹತ್ತು ವರ್ಷಗಳ ಹಿಂದೆ ಬಿಡುಗಡೆಯಾದ ಅಮಿತಾಬ್ ಬಚ್ಚನ್ ಚಿತ್ರವೊಂದು ಸಿನಿಪ್ರಿಯರ ಮನ ಗೆದ್ದಿತ್ತು.ಈ ಸಿನಿಮಾದ ಇಂಟ್ರಸ್ಟಿಂಗ್ ವಿಚಾರ ವೆಂದರೆ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಹಿಟ್ ಆಗಿರು ವುದಲ್ಲದೆ 40 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಅಮಿತಾಬ್ ಬಚ್ಚನ್ ಹಾಸ್ಯ ಸಿನಿಮಾವೊಂದರಲ್ಲಿ ನಟಿಸಿ ಹೆಚ್ಚು ಖ್ಯಾತಿ ಪಡೆದಿದ್ದರು. ಹೌದು 2015 ರಲ್ಲಿ ಪಿಕು ಚಿತ್ರ ಬಿಡುಗಡೆಯಾಗಿದ್ದು ಈ ಚಿತ್ರ ಸೂಪರ್ ಹಿಟ್ ಕಂಡಿತ್ತು. ಅಮಿತಾಬ್ ಬಚ್ಚನ್, ಇರ್ಫಾನ್ ಖಾನ್ ಮತ್ತು ದೀಪಿಕಾ ಪಡುಕೋಣೆ ಯಂತಹ ತಾರೆಯರು ಇದರಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಇದನ್ನು ಶೂಜಿತ್ ಸರ್ಕಾರ್ ನಿರ್ದೇಶಿಸಿದ್ದಾರೆ.

ಭಾರತೀಯ ಸಿನಿಪ್ರಪಂಚದ ದಿಗ್ಗಜ ಅಮಿತಾಬ್ ಬಚ್ಚನ್ ನಟಿಸಿದ ಚಿತ್ರ ಪಿಕು ಇಂದಿಗೂ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ.. ಶೂಜಿತ್ ಸರ್ಕಾರ್ ನಿರ್ದೇಶನದ ಈ ಹಾಸ್ಯಾತ್ಮಕ-ಭಾವನಾತ್ಮಕ ಸಿನಿಮಾ ಬಿಡುಗಡೆಯಾಗಿ 10 ವರ್ಷವಾದರೂ ಇಂದಿಗೂ ಇತಿಹಾಸ ಸೃಷ್ಟಿಸಿದೆ.

ಪಿಕು ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ್ದಲ್ಲದೆ 40ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಪ್ರಸಿದ್ದಿ ಪಡೆದಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಇರ್ಫಾನ್ ಖಾನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು.

ಪಿಕು' ತಂದೆ ಮತ್ತು ಮಗಳ ನಡುವಿನ ಸಂಬಂಧವನ್ನು ತಿಳಿಸುವಂತಹ ಚಿತ್ರವಾಗಿದೆ.ಇದರಲ್ಲಿ ದೀಪಿಕಾ ಪಡುಕೋಣೆ ತನ್ನ ವಯಸ್ಸಾದ ಮತ್ತು ಹಠಮಾರಿ ತಂದೆ ಭಾಸ್ಕರ್ ಬ್ಯಾನರ್ಜಿ (ಅಮಿತಾಬ್ ಬಚ್ಚನ್) ಅವರನ್ನು ನೋಡಿಕೊಳ್ಳುವ ಪಾತ್ರವನ್ನು ನಿರ್ವಹಿಸಿದ್ದಾರೆ.

ವರದಿಯ ಪ್ರಕಾರ, ಅಮಿತಾಬ್ ಮತ್ತು ದೀಪಿಕಾ ಅವರ ಚಿತ್ರವನ್ನು 40 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗಿದ್ದು ಇದು ಮೂರು ಪಟ್ಟು ಹೆಚ್ಚು ಕಲೆಕ್ಷನ್ ಗಳಿಸಿದೆ.ಚಿತ್ರವು ಭಾರತದಲ್ಲಿ ರೂ 79.42 ಕೋಟಿ ಸಂಗ್ರಹವನ್ನು ಹಳಿಸಿದ್ದು ಅದೇ ಸಮಯದಲ್ಲಿ, ಪಿಕುವಿನ ವಿಶ್ವಾದ್ಯಂತ ಒಟ್ಟು ಗಳಿಕೆ 141.30 ಕೋಟಿ ರೂ. ಗಳಿಸಿದೆ.ಪಿಕು' ಚಿತ್ರಕ್ಕಾಗಿ ಅಮಿತಾಬ್ ಬಚ್ಚನ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದರು. ಈ ಮೂಲಕ ಚಿತ್ರವು ಒಟ್ಟು 40 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.