Amruthadhaare Serial: ಮಿಂಚು, ಅಪ್ಪು ಜೊತೆ ಮಗು ಆದ ಗೌತಮ್ ! ಆಕಾಶ್ಗೆ 'ಅಪ್ಪ' ಅಂದ್ರೆನೇ ಆಕಾಶ
Kannada Serial: ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್ಗೆ ಗೊತ್ತಿಲ್ಲ. ಗೌತಮ್ ಜೊತೆಗೆ ದತ್ತು ಮಗಳು ಮಿಂಚು ಇದ್ದಾಳೆ. ಮಿಂಚು ಭೂಮಿಕಾ ಟೀಚರ್ ಆಗಿರುವ ಸ್ಕೂಲ್ಗೇ ಸೇರಿದ್ದಾಳೆ. ಗೌತಮ್ ಆ ಹುಡುಗಿಯನ್ನ ಕಾಪಾಡಿದ್ದು, ದತ್ತು ತೆಗೆದುಕೊಳ್ಳಲು ಮುಂದಾಗಿರುವ ಬಗ್ಗೆ ಕೇಳಿ ಭೂಮಿಕಾಗೆ ಗೌತಮ್ ಮೇಲಿನ ಗೌರವ-ಪ್ರೀತಿ ಇನ್ನಷ್ಟು ಹೆಚ್ಚಾಗಿದೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಅಪ್ಪ ಮಕ್ಕಳ ಬಾಂಡಿಗ್ ಜೋರಾಗಿದೆ. ಆಕಾಶ್ಗೆ ಯಾವಾಗ ಗೌತಮ್ ಅವರೇ ತನ್ನ ತಂದೆ ಅಂತ ಗೊತ್ತಾಯ್ತೋ, ಅಲ್ಲಿಂದ ಗೌತಮ್ ಹಿಂದೆಯೇ ಇರುತ್ತಿದ್ದಾನೆ. ಇದಕ್ಕೆ ಮಿಂಚು ಸಪೋರ್ಟ್ ಕೂಡ ಇದೆ.
ಮಕ್ಕಳಿಗೆ ಪ್ರಾಜೆಕ್ಟ್ ಮಾಡಲು ಗೌತಮ್ ಸಹಾಯ ಮಾಡ್ತಾ ಇದ್ದಾನೆ. ಆಕಾಶ್ ಕೂಡ ಪ್ರಾಜೆಕ್ಟ್ ಮಾಡಿಸಿಕೊಳ್ಳಲು ಗೌತಮ್ ಬಳಿ ಬಂದಿದ್ದಾನೆ. ಆದರೆ ಗೌತಮ್ ಮೊದಲಿಗೆ, ತಾಯಿಯ ಬಳಿ ಸಹಾಯ ಕೇಳಬಾರದಾ? ಎಂದು ಪ್ರಶ್ನೆ ಇಟ್ಟಾಗ, ಆಕಾಶ್, ನೀನೆ ಮಾಡಿಕೋ ಅಂದರು ಅಮ್ಮ ಎಂದಿದ್ದಾನೆ.
ಮಗಳಿಗೆ ಪ್ರಾಜೆಕ್ಟ್ ಸಹಾಯ ಮಾಡುತ್ತಿರೋ ಗೌತಮ್, ಆಕಾಶ್ಗೂ ಸಹಾಯ ಮಾಡುತ್ತಾನೆ. ಆಕಾಶ್ ಕೂಡ ಥೇಟ್ ಗೌತಮ್ ರೀತಿಯೇ. ಉಪ್ಪಿಟ್ಟು ಮಾಡೋ ನೆಪದಲ್ಲಿ ಗೌತಮ್ ಅವರಿಗೆ ಹತ್ತಿರ ಆಗ್ತಿದ್ದಾನೆ ಆಕಾಶ್.
ಮತ್ತೊಂದು ಕಡೆ ದಿಯಾ, ಶಕುಂತಲಾಳಿಗೆ ಗತಿ ಕಾಣಿಸಲು ಮುಂದಾಗಿದ್ದಾಳೆ. ಈಗಾಗಲೇ ಭೂಮಿಕಾ ಮತ್ತು ಗೌತಮ್ ಒಂದೇ ವಠಾರಕ್ಕೆ ಬಂದು ಸೇರಿದ್ದಾರೆ. ಅವರ ಮನೆಗಳು ಎದುರುಬದುರು ಇವೆ. ಭೂಮಿಕಾ ಜೊತೆಗೆ ಅವರ ಮಗ ಅಪ್ಪು ಮತ್ತು ಮಲ್ಲಿ ಇದ್ದಾರೆ.
ಗೌತಮ್ ಜೊತೆಗೆ ದತ್ತು ಮಗಳು ಮಿಂಚು ಇದ್ದಾಳೆ. ಮಿಂಚು ಭೂಮಿಕಾ ಟೀಚರ್ ಆಗಿರುವ ಸ್ಕೂಲ್ಗೇ ಸೇರಿದ್ದಾಳೆ. ಗೌತಮ್ ಆ ಹುಡುಗಿಯನ್ನ ಕಾಪಾಡಿದ್ದು, ದತ್ತು ತೆಗೆದುಕೊಳ್ಳಲು ಮುಂದಾಗಿರುವ ಬಗ್ಗೆ ಕೇಳಿ ಭೂಮಿಕಾಗೆ ಗೌತಮ್ ಮೇಲಿನ ಗೌರವ-ಪ್ರೀತಿ ಇನ್ನಷ್ಟು ಹೆಚ್ಚಾಗಿದೆ.
ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್ಗೆ ಗೊತ್ತಿಲ್ಲ. ಕಳೆದ ವಾರದ ಎಪಿಸೋಡ್ ಗಳಲ್ಲಿ ಜ್ವರದಿಂದ ಪೂರ್ತಿಯಾಗಿ ಕಂಗಾಲಾಗಿ ಹಾಸಿಗೆ ಹಿಡಿದಿದ್ದ ಗೌತಮ್ ನ ಭೂಮಿ ಆರೈಕೆ ಮಾಡಿ, ಮದ್ದು, ಊಟ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾಳೆ.
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.