Gold price today on 20th November 2025: ಚಿನ್ನದ ದರದಲ್ಲಿ ಮತ್ತೆ ಏರಿಕೆ- ಇಂದಿನ ರೇಟ್ ಚೆಕ್ ಮಾಡಿ
Gold and Silver Rate: ಚಿನ್ನದ ದರ ಇಳಿಕೆಯಾಗುವ ಲಕ್ಷಣ ಕಾಣುತ್ತಿಲ್ಲ. ಇಂದು ಕೂಡ ಚಿನ್ನದ ದರದಲ್ಲಿ ಏರಿಕೆ ಕಂಡಿದ್ದು ಸ್ವರ್ಣಪ್ರಿಯರಿಗೆ ಶಾಕ್ ತಂದಿದೆ. ಇಂದು 22ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 15ರೂ. ಏರಿಕೆ ಕಂಡು ಬಂದಿದ್ದು, 11,430 ರೂ. ಗೆ ತಲುಪಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 17 ರೂ. ಏರಿಕೆಯಾಗಿ, 12,469 ರೂ ಆಗಿದೆ.
ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) -
ಬೆಂಗಳೂರು: ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ (Gold price today on 20th November 2025) ಕಂಡು ಬಂದಿದೆ. ಇಂದು 22ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 15ರೂ. ಏರಿಕೆ ಕಂಡು ಬಂದಿದ್ದು, 11,430 ರೂ. ಗೆ ತಲುಪಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 17 ರೂ. ಏರಿಕೆಯಾಗಿ, 12,469 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 91,440 ರೂ. ಬಾಳಿದರೆ, 10 ಗ್ರಾಂಗೆ ನೀವು 1,14,300 ಹಾಗೂ 100 ಗ್ರಾಂಗೆ 11,43,000 ರೂ., ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 99,752 ರೂ. ಆದರೆ, 10 ಗ್ರಾಂಗೆ ನೀವು 1,24,690 ರೂ. ಹಾಗೂ 100 ಗ್ರಾಂಗೆ 12,46,900 ರೂ. ಪಾವತಿಸಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 11,430 ರೂ. | 12,469 ರೂ |
| ಮುಂಬೈ | 11,430 ರೂ. | 12,469 ರೂ |
| ದಿಲ್ಲಿ | 11,445 ರೂ. | 12,484 ರೂ |
| ಕೋಲ್ಕತಾ | 11,430 ರೂ. | 12,469 ರೂ |
| ಹೈದರಾಬಾದ್ | 11,430 ರೂ. | 12,469 ರೂ |
ಇನ್ನು ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂದು ನೋಡುವುದಾದರೆ ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 22 ಕ್ಯಾರಟ್ (1 ಗ್ರಾಂ) ಚಿನ್ನದ ಬೆಲೆ 11,430 ರೂ. ರಷ್ಟಿದ್ದು, ದಿಲ್ಲಿಯಲ್ಲಿ 11,445 ರೂ.ರಷ್ಟಿದೆ. ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 24 ಕ್ಯಾರಟ್ (1 ಗ್ರಾಂ) ಚಿನ್ನದ ದರ 12,469 ರೂ ರಷ್ಟಿದ್ದು, ದಿಲ್ಲಿಯಲ್ಲಿ 12,484 ರೂ ರಷ್ಟಿದೆ.
ಈ ಸುದ್ದಿಯನ್ನೂ ಓದಿ: ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಈಗ ಚಿನ್ನ-ಬೆಳ್ಳಿ ಖರೀದಿ: ಪ್ರತಿಷ್ಠಿತ ಜ್ಯುವೆಲರಿ ಮಳಿಗೆಯೊಂದಿಗೆ ಇನ್‌ಸ್ಟಾಮಾರ್ಟ್ ಸಹಯೋಗ
ಬೆಳ್ಳಿ ದರ
ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. 1 ಗ್ರಾಂಗೆ 165 ರೂ. ಇದ್ದರೆ, 8 ಗ್ರಾಂಗೆ 1,320 ಹಾಗೂ 10 ಗ್ರಾಂಗೆ 1,650 ರೂ. ಮತ್ತು 1 ಕೆಜಿಗೆ 1,65,000 ರೂ. ಇದೆ. ದೆಹಲಿ ಮತ್ತು ಮುಂಬೈನಲ್ಲೂ ಇದೇ ದರ ಇದೆ. ಆದರೆ ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂಗೆ 1,730 ರೂ. ಮತ್ತು 1 ಕೆಜಿಗೆ 1,73,000 ರೂ. ಇದ