Bigg Boss Kannada 12: ನನ್ನ ತಪ್ಪು ಸಾಬೀತಾದರೆ ಬಿಗ್ ಬಾಸ್ನಿಂದ ಹೊರಗೆ ಹೋಗುವೆ ; ಕಿಚ್ಚನ ಮುಂದೆ ಅಶ್ವಿನಿ ಗೌಡ ಓಪನ್ ಚಾಲೆಂಜ್
ರಕ್ಷಿತಾಗೆ (Rakshitha) ಬೇಕು ಎಂದೇ ಮನೆಯವರ ಪತ್ರ ಸಿಗದಂತೆ ಮಾಡಿದ್ದು ಅಶ್ವಿನಿ ಗೌಡ (Ashwini Gowda). ಈ ಬಗ್ಗೆ ಸ್ವತಃ ಕೊನೆಯಲ್ಲಿ ಅಶ್ವಿನಿ ಗೌಡ ಒಪ್ಪಿಕೊಂಡರು. ಇದೇ ವಿಚಾರವನ್ನ ಸೂರಜ್ (Sooraj) ಮಾತನಾಡಿ, ಅಶ್ವಿನಿ ಗೌಡ ಅವರು ಪರ್ಸನಲ್ ಆಗಿ ತಗೊಂಡರು ಎಂದರು. ಅದರಲ್ಲೂ ಅಶ್ವಿನಿ ಗೌಡ ಅವರ ಮೊದಲ ಟಾರ್ಗೆಟ್ ರಕ್ಷಿತಾ. ಸಾಕಷ್ಟು ಬಾರಿ ಈ ವಿಚಾರ ಪ್ರೂವ್ ಆಗಿದೆ.
ಬಿಗ್ ಬಾಸ್‌ನ (Bigg Boss Kannada 12) ಪ್ರತಿ ವೀಕೆಂಡ್ ಪಂಚಾಯ್ತಿಯಲ್ಲಿ ಅಶ್ವಿನಿ ಗೌಡ ಹಾಗೂ ರಕ್ಷಿತಾ ಅವರ ಟಾಪಿಕ್ ಇದ್ದೇ ಇರುತ್ತದೆ. ಅದರಲ್ಲೂ ಅಶ್ವಿನಿ ಗೌಡ ಅವರ ಮೊದಲ ಟಾರ್ಗೆಟ್ ರಕ್ಷಿತಾ. ಸಾಕಷ್ಟು ಬಾರಿ ಈ ವಿಚಾರ ಪ್ರೂವ್ ಆಗಿದೆ.
ಈ ವಾರ ಕಿಚ್ಚ ಅಂತೂ ಇವರಿಬ್ಬರ ಗಲಾಟೆ ಬಗ್ಗೆ ವಿಶ್ಲೇಷಿಸಿ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ. ಆದರೆ ಅಶ್ವಿನಿ ಗೌಡ ಮಾತ್ರ ತನ್ನದೇ ಸರಿ ಎಂದು ಹಲವು ಬಾರಿ ವಾದ ಕೂಡ ಮಾಡಿದ್ದಾರೆ. ಒಂದು ವಿಚಾರಕ್ಕೆ ತಪ್ಪು ಅಂತ ಪ್ರೂವ್ ಮಾಡಿದ್ರೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗುವೆ ಎಂದೂ ಹೇಳಿದ್ದಾರೆ.
ರಕ್ಷಿತಾಗೆ ಬೇಕು ಎಂದೇ ಮನೆಯವರ ಪತ್ರ ಸಿಗದಂತೆ ಮಾಡಿದ್ದು ಅಶ್ವಿನಿ ಗೌಡ. ಈ ಬಗ್ಗೆ ಸ್ವತಃ ಕೊನೆಯಲ್ಲಿ ಅಶ್ವಿನಿ ಗೌಡ ಒಪ್ಪಿಕೊಂಡರು. ಇದೇ ವಿಚಾರವನ್ನ ಸೂರಜ್ ಮಾತನಾಡಿ, ಅಶ್ವಿನಿ ಗೌಡ ಅವರು ಪರ್ಸನಲ್ ಆಗಿ ತಗೊಂಡರು.
ನನ್ನ ಮುಖಕ್ಕೆ ಮಸಿ ಬಳಿದರು ಎಂದು ಹೇಳಿದರು, ನಮ್ಮ ಅಭಿಪ್ರಾಯವನ್ನು ಹೇಳೋಕೆ ಬಿಡಲಿಲ್ಲ” ಎಂದು ಹೇಳಿದ್ದರು. ಆದರೆ ಈ ಮಾತನ್ನ ಅಶ್ವಿನಿ ಅವರು ಒಪ್ಪಲೇ ಇಲ್ಲ. ಈ ಮೂರು ಮಾತು ನಾನು ಹೇಳಿದ್ದೇ ಹೌದಾದಲ್ಲಿ, ತಪ್ಪನ್ನ ಪ್ರೂವ್ ಮಾಡಿದ್ರೆ ಈಗಲೇ ಬಿಗ್ ಬಾಸ್ ಮನೆಯಿಂದ ಆಚೆ ಹೋಗ್ತಿನಿ ಎಂದರು.
ಬಳಿಕ ಕಿಚ್ಚ ಅವರು ವಿಟಿ ಪ್ಲೇ ಮಾಡಿಸಿದ್ದಾರೆ. ಅದರಲ್ಲಿ ಅಶ್ವಿನಿ ಗೌಡ ಅವರು ಮಾತನಾಡಿದ್ದು ಹೀಗೆ, ʻಈ ಮನೆಯಲ್ಲಿ ಮನಸ್ಥಿತಿಗಳು, ಮನಸ್ಸುಗಳು ಹಾಳಾಗಲು ಮೂಲ ಕಾರಣವೇ ರಕ್ಷಿತಾ. ಅಷ್ಟೇ ಅಲ್ಲ ನನ್ನ ವ್ಯಕ್ತಿತ್ವನ್ನ ಇನ್ನೊಂದು ರೀತಿಯಲ್ಲಿ ತಿರುಚಿ, ಅವಮಾನ ಆಗೋ ರೀತಿ ಮಾಡಿದ್ದು ಕೂಡ ರಕ್ಷಿತಾ. ನನ್ನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ತಿರುಚಿ, ವ್ಯಕ್ತಿತ್ವಕ್ಕೆ ಮಸಿ ಬಳಿದಿದ್ದಾರೆ. ಅವಳು ಆಡಿದ್ದು ನಾಟಕʼಎಂದಿದ್ದರು.
ವೈಯಕ್ತಿಕ ಕಾರಣಕ್ಕೆ ಹೀಗೆ ಮಾಡಿದೆ! ಇನ್ನು ಅಶ್ವಿನಿ ಗೌಡ, ಆ ಬಳಿಕ ರಕ್ಷಿತಾ ಶೆಟ್ಟಿಗೆ ಪತ್ರ ಸಿಗಬಾರದು ಎಂದು ನಾನು ಹೇಳಿದೆ, ಇದನ್ನು ನಾನು ಪರ್ಸನಲ್ ಆಗಿ ತಗೊಂಡೆ. ನನಗೆ ರಕ್ಷಿತಾಳಿಂದ ಬೇಸರ ಆಗಿತ್ತು.
ಇದನ್ನು ನಾನು ಒಪ್ಪಿಕೊಳ್ತೀನಿ. ಆ ಕ್ಷಣದಲ್ಲಿ ಅನಿಸ್ತು, ಹಾಗೆ ಮಾಡಿದೆ. ನಾನು ಉದ್ದೇಶಪೂರ್ವಕವಾಗಿಯೇ ಹಾಗೆ ಮಾಡಿದ್ದು ಎಂದು ಕಿಚ್ಚನ ಮುಂದೆ ಹೇಳಿದ್ದಾರೆ. ಇದನ್ನ ಮೊದಲೇ ಹೇಳಿದ್ದರೆ ನಿಮಗೆ ಚಪ್ಪಾಳೆ ಕೊಡುತ್ತಿದ್ದೆ ಎಂದರು ಕಿಚ್ಚ.
`ಕೆಲವು ಸಲ ಅಶ್ವಿನಿ ಅವರೇ ನೀವೇ ಹೇಳುತ್ತೀರಿ, ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಾರೆ. ರಕ್ಷಿತಾ ಇಂದ ನನ್ನ ವ್ಯಕ್ತಿತ್ವ ಹಾಳಾಗಿದೆ ಅಂದೆಲ್ಲ ಹೇಳಿದ್ದೀರಿ. ಈ ಮೊದಲು ತಮಾಷೆ ಮಾಡುವಾಗ, ಆಗ ರಕ್ಷಿತಾ ಅವರ ವ್ಯಕ್ತಿತ್ವ ನಿಮಗೆ ನೆನಪಿಗೆ ಬರಲಿಲ್ವೆ? ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬರುವಂತೆ ರಕ್ಷಿತಾ ವಿಷಯದಲ್ಲಿ ನೀವೇ ನಡೆದುಕೊಂಡಿದ್ದಲ್ಲವೆ?' ಎಂದು ಸುದೀಪ್ ಹೇಳಿದರು.