Bigg Boss Kannada 12: ರಕ್ಷಿತಾಗೆ ಬೇಕು ಅಂತಲೇ ಪತ್ರ ಸಿಗದಂತೆ ಮಾಡಿದೆ ! ಕಿಚ್ಚನ ಮುಂದೆ ತಪ್ಪು ಒಪ್ಪಿಕೊಂಡ ಅಶ್ವಿನಿ ಗೌಡ
ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶೋನಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಅಶ್ವಿನಿ ಗೌಡ (Ashwini Gowda) ನಡುವಿನ ಮನಸ್ತಾಪ, ಜಗಳ ಆಗುತ್ತಲೇ ಇದೆ. ಈ ಬಾರಿ ರಕ್ಷಿತಾ (Rakshitha Shetty) ಅವರಿಗೆ ಪತ್ರ ಕೂಡ ಸಿಗದಂತೆ ಆಟವನ್ನೂ ಆಡಿದ್ದಾರೆ. ಅಷ್ಟೇ ಅಲ್ಲದೇ ರಕ್ಷಿತಾ ಚಪ್ಪಲಿ ತೋರಿಸಿ ಅವಮಾನ ಮಾಡಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು. ಈ ಎಲ್ಲ ವಿಚಾರಗಳ ಬಗ್ಗೆ ಕಿಚ್ಚ (Kichccha Sudeepa) ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.
Sudeep analyzed and gave justice to Rakshitha -
ಬಿಗ್ ಬಾಸ್ (Bigg Boss Kannada 12) ಶುರುವಾದಾಗಿನಿಂದ ಅಶ್ವಿನಿ ಗೌಡ (Ashwini Gowda) ಅವರ ರಕ್ಷಿತಾರನ್ನ ಟಾರ್ಗೆಟ್ ಮಾಡುತ್ತಲೇ ಇದ್ದಾರೆ. ಈ ಬಾರಿ ರಕ್ಷಿತಾ (Rakshitha Shetty) ಅವರಿಗೆ ಪತ್ರ ಕೂಡ ಸಿಗದಂತೆ ಆಟವನ್ನೂ ಆಡಿದ್ದಾರೆ. ಅಷ್ಟೇ ಅಲ್ಲದೇ ರಕ್ಷಿತಾ ಚಪ್ಪಲಿ ತೋರಿಸಿ ಅವಮಾನ ಮಾಡಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು. ಈ ಎಲ್ಲ ವಿಚಾರಗಳ ಬಗ್ಗೆ ಕಿಚ್ಚ (Sudeep) ಮಾತನಾಡಿ, ವಿಶ್ಲೇಷಿಸಿ ಬುದ್ದಿವಾದ ಹೇಳಿ, ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.
ಪತ್ರದ ವಿಚಾರ!
ಕಿಚ್ಚ ಸುದೀಪ್ ಮೊದಲಿಗೆ ಪತ್ರದ ವಿಚಾರವನ್ನು ಮಾತನಾಡಿದರು. `ರಕ್ಷಿತಾಗೆ ಪತ್ರ ಸಿಗಬಾರದು ಎಂದು ಹೇಳಿದ್ದೀರಿ. ಆದರೆ ನೀವು ರಾಶಿಕಾಗೆ ಏಕೆ ಪತ್ರ ಸಿಗಬೇಕು ಎಂದು ಚರ್ಚಿಸಲೇ ಇಲ್ಲ' ಎಂದು ಹೇಳಿದರು.
ಇದನ್ನೂ ಓದಿ: BBK 12: ಹಾಕೋ ಬನಿಯನ್ ಕೂಡ ಕಂಡವರದ್ದೇ, ಎಲ್ಲರನ್ನ ಗಿಲ್ಲಿ ತುಳಿತಿದ್ರು; ಡಾಗ್ ಸತೀಶ್ ಆರೋಪ
`ಕೆಲವು ಸಲ ಅಶ್ವಿನಿ ಅವರೇ ನೀವೇ ಹೇಳುತ್ತೀರಿ, ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಾರೆ. ರಕ್ಷಿತಾ ಇಂದ ನನ್ನ ವ್ಯಕ್ತಿತ್ವ ಹಾಳಾಗಿದೆ ಅಂದೆಲ್ಲ ಹೇಳಿದ್ದೀರಿ. ಈ ಮೊದಲು ತಮಾಷೆ ಮಾಡುವಾಗ, ಆಗ ರಕ್ಷಿತಾ ಅವರ ವ್ಯಕ್ತಿತ್ವ ನಿಮಗೆ ನೆನಪಿಗೆ ಬರಲಿಲ್ವೆ? ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬರುವಂತೆ ರಕ್ಷಿತಾ ವಿಷಯದಲ್ಲಿ ನೀವೇ ನಡೆದುಕೊಂಡಿದ್ದಲ್ಲವೆ?' ಎಂದು ಸುದೀಪ್ ಹೇಳಿದರು.
ಮಾತು ಎತ್ತಿದ್ದರೆ ಚಿಕ್ಕವರು ಎನ್ನುತ್ತೀರಿ, ಇಲ್ಲಿ ನೀವು ಮಾತನಾಡುವಾಗ ಮೆಚುರಿಟಿ ಕಾಣಿಸಿಲ್ಲವೇ ಎಂದು ಪ್ರಶ್ನೆ ಇಟ್ಟಿದ್ದಾರೆ. ಇದೆಲ್ಲ ಕೇಳಿದ ಬಳಿಕ ವಾದ ಮಾಡಿದ್ದಾರೆ ಅಶ್ವಿನಿ ಗೌಡ. ಅಷ್ಟೇ ಅಲ್ಲ,ನನಗೆ ಹಿಂದೆ ಇದ್ದ ರಕ್ಷಿತಾಳ ಮೇಲೆ ಕೋಪಕ್ಕೆ ನಾನು ಪತ್ರ ಬರದಂತೆ ಮಾಡಿದೆ ಎಂದು ಒಪ್ಪಿಕೊಂಡರು. ಹಾಗೇ ನನ್ನ ವೈಯಕ್ತಿಕ ನಿರ್ಧಾರ ಅದಾಗಿತ್ತು ಎಂದರು.
Instant Karma ಅಂತ ಎಲ್ಲೋ ಕೇಳಿದ ಹಾಗೆ ಇದೆ ಅಲ್ವಾ😂
— Patil Raviraj..! (@raviraj_spatil) November 9, 2025
Ashwini Gowda - Risha Gowda - Rashika shetty
Trios talked about karma
Now🤭🤭
Ashwini Gowda bashed left and right by host
Risha Gowda bashed by host today
Rashika shetty didn't got letter by close friend Ashwini Gowda 😂#bbk12 pic.twitter.com/h5r9TCj85b
ಚಪ್ಪಲಿ ವಿಚಾರ!
ರಕ್ಷಿತಾ ಅವರು ನಾಟಕ ಅಂತ ಹೇಳಿಕೊಂಡು ಚಪ್ಪಲಿ ತೋರಿಸ್ತಾರೆ. ನೀನು ಯಾರಿಗೆ ಅವಮಾನ ಮಾಡ್ತಾ ಇದ್ದೀಯಾ? ಅಂತ ನಾನು ಕೇಳಿದೆʼ ಎಂದು ಅಶ್ವಿನಿ ಗೌಡ ಕಿಚ್ಚನ ಮುಂದೆ ಹೇಳಿದರು.ಅದಕ್ಕೆ ಕಿಚ್ಚ, ʻಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ? ಅಂತ ಕೇಳಿ, ಇಲ್ಲ ಎಂದು ಹೇಳಿದ್ದಾರೆ . ʻನಾವು ಗ್ರಹಿಕೆಯನ್ನ ತಪ್ಪಾಗಿ ಕೊಟ್ಟಾಗ ಏನಾಗತ್ತೆ, ಕಲಾವಿದರಿಗೆ ಹೇಳಿದ್ರಂತೆ ಅಂತೆಲ್ಲ ಆಗತ್ತೆ.
ಯಾಕೆ ಮೇಡಮ್? ಈ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿಕೊಡ್ತಾ ಇರೋದು ನಾನು ಕೂಡ ಕಲಾವಿದನೇ ಅಲ್ವಾ? ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಕಲಾವಿದರಿಗೆ ನಾನು ಉತ್ತರ ಕೊಡಬೇಕಿತ್ತು. ಇದು ತಪ್ಪಾದ perception; ಅಂತ ಎಂದು ಕಿಚ್ಚ ನೇರವಾಗಿಯೇ ಹೇಳಿದ್ದಾರೆ.
ಅಶ್ವಿನಿ ಬಗ್ಗೆ ಮಾತನಾಡಿದ ಸುದೀಪ್, ಆ ವಿಡಿಯೋವನ್ನು ಮತ್ತೆ ಎರಡೆರಡು ಬಾರಿ ಪ್ಲೇ ಮಾಡಿಸಿ, ರಕ್ಷಿತಾ ಚಪ್ಪಲಿ ತೋರಿಸಿದ್ದಲ್ಲ ಬದಲಿಗೆ ವೋಟನ್ನು ಹೊಸಕುವೆ ಎಂದಿದ್ದು ಎಂದರು.
ಇದನ್ನೂ ಓದಿ: Bigg Boss Kannada 12: ಕಾವ್ಯಾ -ಗಿಲ್ಲಿ ಗೆಳೆತನದ ಬಗ್ಗೆ ಕೆಟ್ಟದಾಗಿ ಮಾತನಾಡಿದ ಚಂದ್ರಪ್ರಭಗೆ ಸುದೀಪ್ ಖಡಕ್ ಕ್ಲಾಸ್
ರಕ್ಷಿತಾಗೆ ಕ್ಲಾಸ್
ನಿಮಗಿಂತ ಹದಿನೈದು ವರ್ಷ ದೊಡ್ಡವರಾದ ವ್ಯಕ್ತಿಯ ಮತವನ್ನು ಕಾಲಿನಲ್ಲಿ ಹಾಕಿ ತುಳಿಯುತ್ತೇನೆ ಎಂದು ನೀವು ಹೇಳಿದ್ದು ತಪ್ಪು. ಇಲ್ಲಿ ಎಲ್ಲರೂ ಸಮಾನರೇ, ಅವರವರ ರಂಗದಲ್ಲಿ ಹೆಸರು ಮಾಡಿ ಬಂದಿರುತ್ತಾರೆ. ನೀವು ಆ ರೀತಿ ಮಾಡೋದು ತಪ್ಪು” ಎಂದು ಕಿಚ್ಚ ಸುದೀಪ್ ಅವರು ರಕ್ಷಿತಾಗೆ ಹೇಳಿದ್ದಾರೆ.