Year Ender 2025: ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಟಾಪ್ 10 ಸಿನಿಮಾಗಳ ಲಿಸ್ಟ್ ಇಲ್ಲಿದೆ ನೋಡಿ
2025ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಒಂದಷ್ಟು ಉತ್ತಮ ಸಿನಿಮಾಗಳು ತೆರೆಕಂಡು, ಬಾಕ್ಸ್ ಆಫೀಸ್ನಲ್ಲಿ ಹವಾ ಮಾಡಿವೆ. ಕೆಲವು ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ, ದೊಡ್ಡಮಟ್ಟದ ಕಮಾಯಿ ಮಾಡುವಲ್ಲಿ ಹಿಂದೆ ಬೀಳಲಿಲ್ಲ ಅನ್ನೋದು ವಿಶೇಷ. ಸದ್ಯ ವಿವಿಧ ಭಾಷೆಗಳಲ್ಲಿ ತೆರೆಕಂಡ ಭಾರತದ ಟಾಪ್ 10 ಸಿನಿಮಾಗಳ ಕಲೆಕ್ಷನ್ ಮಾಹಿತಿ ಇಲ್ಲಿದೆ. ವರ್ಷಾಂತ್ಯದಲ್ಲಿ ತೆರೆಗೆ ಬಂದ ಧುರಂಧರ್ ಸಿನಿಮಾವು ಮೊದಲ ಸ್ಥಾನದಲ್ಲಿ ಇದೆ.
-
- ಧುರಂಧರ್ (Dhurandhar) - ಹಿಂದಿ
ರಣ್ವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾದಲ್ಲಿ ಭಾರತೀಯ ಏಜೆಂಟ್ ಒಬ್ಬ ಪಾಕಿಸ್ತಾನದ ಭೂಗತ ಲೋಕವನ್ನು ಹೇಗೆ ಭೇದಿಸುತ್ತಾನೆ ಎಂಬುದರ ಕಥೆ ಇದೆ. ರಣ್ವೀರ್ ಸಿಂಗ್ ಅವರ ನಟನೆ ಮತ್ತು ಅದ್ಧೂರಿ ಆಕ್ಷನ್ ದೃಶ್ಯಗಳು ಈ ಚಿತ್ರದ ಹೈಲೈಟ್. ಈ ಚಿತ್ರವು ಈವರೆಗೂ 1,100 ಕೋಟಿ ರೂ. ಗಳಿಸಿದೆ.
2. ಕಾಂತಾರ: ಚಾಪ್ಟರ್ 1 (Kantara: Chapter 1) - ಕನ್ನಡ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ಕಾಂತಾರ: ಚಾಪ್ಟರ್ 1 ಸಿನಿಮಾದಲ್ಲಿ ಕದಂಬರ ಕಾಲದ ಹಿನ್ನೆಲೆಯಲ್ಲಿ ದೈವಾರಾಧನೆ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಇಲ್ಲಿ ತೋರಿಸಲಾಗಿದೆ. ಈ ಚಿತ್ರವು 900+ ಕೋಟಿ ರೂ. ಕಮಾಯಿ ಮಾಡಿದೆ.
3. ಛಾವಾ (Chhaava) - ಹಿಂದಿ
ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಅಭಿನಯದ, ಲಕ್ಷ್ಮಣ್ ಉತೇಕರ್ ನಿರ್ದೇಶನದ ಛಾವಾ ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ವೀರಗಾಥೆ ಬಗ್ಗೆ ಹೇಳಲಾಗಿದೆ. ಈ ಸಿನಿಮಾವು ಸುಮಾರು 850+ ಕೋಟಿ ರೂ. ಕಮಾಯಿ ಮಾಡಿದೆ.
4. ಸೈಯಾರಾ (Saiyaara) - ಹಿಂದಿ
ಆಹಾನ್ ಪಾಂಡೆ, ಅನೀತ್ ಪಡ್ಡಾ ಜೋಡಿಯ ಯೂತ್ಫುಲ್ ಲವ್ ಸ್ಟೋರಿ ಇರುವ ಸೈಯಾರಾ ಸಿನಿಮಾವನ್ನು ಮೋಹಿತ್ ಸೂರಿ ನಿರ್ದೇಶನ ಮಾಡಿದ್ದರು. ಯಶ್ ರಾಜ್ ಫಿಲ್ಮ್ಸ್ ಹಣ ಹಾಕಿತ್ತು. ಈ ಚಿತ್ರವು 560 ಕೋಟಿ ರೂ. ಗಳಿಸಿದೆ.
5. ಕೂಲಿ (Coolie) - ತಮಿಳು
ರಜನಿಕಾಂತ್, ನಾಗಾರ್ಜುನ, ಉಪೇಂದ್ರ, ಶ್ರುತಿ ಹಾಸನ್ ಮುಂತಾದವರು ನಟಿಸಿದ್ದ, ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿದ್ದ ಕೂಲಿ ಸಿನಿಮಾವು ಕಳ್ಳಸಾಗಣೆ ಮಾಫಿಯಾದ ವಿರುದ್ಧ ಹೋರಾಡುವ ಒಬ್ಬ ಮಾಜಿ ಕೂಲಿ ಕಾರ್ಮಿಕನ ಕಥೆಯನ್ನು ಹೊಂದಿತ್ತು. ಈ ಚಿತ್ರವು 520 ಕೋಟಿ ರೂ. ಕಮಾಯಿ ಮಾಡಿದೆ.
6. ವಾರ್ 2 (War 2) - ಹಿಂದಿ
ವೈಆರ್ಎಫ್ ಸ್ಪೈ ಯೂನಿವರ್ಸ್ನ ಭಾಗವಾಗಿರುವ ವಾರ್ 2 ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್.ಟಿ.ಆರ್ ನಟಿಸಿದ್ದರು. ಈ ಸಿನಿಮಾವು 350+ ಕೋಟಿ ರೂ. ಗಳಿಸಿದೆ.
7. ಮಹಾವತಾರ್ ನರಸಿಂಹ (Mahavatar Narsimha) - (ಅನಿಮೇಷನ್)
ಅಶ್ವಿನ್ ಕುಮಾರ್ ನಿರ್ದೇಶನದ ಮಹಾವತಾರ್ ನರಸಿಂಹ ವಿಷ್ಣುವಿನ ಅವತಾರವಾದ ನರಸಿಂಹ ದೇವರ ಕಥೆಯನ್ನು ಹೇಳುವ ವಿಶ್ವಮಟ್ಟದ ಅನಿಮೇಷನ್ ಸಿನಿಮಾವಾಗಿದೆ. ಭಕ್ತ ಪ್ರಹ್ಲಾದನ ರಕ್ಷಣೆಗಾಗಿ ಹಿರಣ್ಯಕಶಿಪುವನ್ನು ಸಂಹರಿಸುವ ನರಸಿಂಹ ದೇವರ ರೌದ್ರಾವತಾರವನ್ನು ಅದ್ಭುತ ವಿಎಫ್ಎಕ್ಸ್ (VFX) ಮೂಲಕ ತೋರಿಸಲಾಗಿದೆ. ಈ ಸಿನಿಮಾವು 325 ಕೋಟಿ ರೂ. ಗಳಿಸಿದೆ.
8. ಲೋಕ ಚಾಪ್ಟರ್ 1: ಚಂದ್ರ (Lokah Chapter 1: Chandra) - ಮಲಯಾಳಂ
ಕಲ್ಯಾಣಿ ಪ್ರಿಯದರ್ಶನ್ ಅವರ ಲೋಕ ಚಾಪ್ಟರ್ 1: ಚಂದ್ರ ಸಿನಿಮಾವು ಮಲಯಾಳಂನ ಮೊದಲ ದೊಡ್ಡ ಮಟ್ಟದ ಸೂಪರ್ ಹೀರೊ ಸಿನಿಮಾ. ಚಂದ್ರ ಎಂಬ ಹುಡುಗಿ ತನ್ನ ಶಕ್ತಿಯನ್ನು ಕಂಡುಕೊಂಡು ಹೇಗೆ ಅನ್ಯಾಯದ ವಿರುದ್ಧ ಹೋರಾಡುತ್ತಾಳೆ ಎಂಬುದು ಈ ಚಿತ್ರದ ಕಥೆ. ಲೋಕ ಸಿನಿಮಾ 300+ ಕೋಟಿ ರೂ. ಕಮಾಯಿ ಮಾಡಿದೆ.
9. ದೇ ಕಾಲ್ ಹಿಮ್ ಓಜಿ (They Call Him OG) - ತೆಲುಗು
ಪವನ್ ಕಲ್ಯಾಣ್, ಇಮ್ರಾನ್ ಹಶ್ಮಿ, ಪ್ರಿಯಾಂಕಾ ಮೋಹನ್ ಅವರ ದೇ ಕಾಲ್ ಹಿಮ್ ಓಜಿ ಸಿನಿಮಾವು ಜಪಾನ್ ಅಂಡರ್ವರ್ಲ್ಡ್ ಮತ್ತು ಮುಂಬೈ ಮಾಫಿಯಾದ ಹಿನ್ನೆಲೆಯಲ್ಲಿ ನಡೆಯುವ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ. ಈ ಚಿತ್ರವು 290+ ಕೋಟಿ ರೂ. ಗಳಿಸಿದೆ.
10. ಸಿತಾರೆ ಜಮೀನ್ ಪರ್ (Sitaare Zameen Par) - ಹಿಂದಿ
ಅಮೀರ್ ಖಾನ್, ಜೆನಿಲಿಯಾ ದೇಶ್ಮುಖ್ ಅವರ ಸಿತಾರೆ ಜಮೀನ್ ಪರ್ ಸಿನಿಮಾದಲ್ಲಿ ವಿಶೇಷ ಚೇತನ ಮಕ್ಕಳು ಹೇಗೆ ಬಾಸ್ಕೆಟ್ಬಾಲ್ ಆಟದ ಮೂಲಕ ಜಗತ್ತನ್ನು ಗೆಲ್ಲುತ್ತಾರೆ ಎಂಬ ಭಾವುಕ ಕಥೆಯನ್ನು ಹೇಳಲಾಗಿದ್ದು, ಈ ಚಿತ್ರವು 265+ ಕೋಟಿ ರೂ. ಗಳಿಕೆ ಮಾಡಿದೆ.
(ವಿ.ಸೂ: ಇಲ್ಲಿ ನೀಡಲಾಗಿರುವ ಅಂಕಿ ಅಂಶಗಳನ್ನು ಗೂಗಲ್ನಿಂದ ಪಡೆದುಕೊಳ್ಳಲಾಗಿದೆ.)