ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fashion News: ಪ್ರಸಾದ್‌ ಬಿದ್ದಪ್ಪ ಶೋನಲ್ಲಿ ಯುವ ನಟ ಸಮರ್ಜಿತ್‌, ಆರಾಧನಾ ರ‍್ಯಾಂಪ್‌ ವಾಕ್‌

Fashion News: ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ ಅವರ ಡೈರೆಕ್ಷನ್‌ನಲ್ಲಿ ನಡೆದ ಅನ್‌ಫೋಲ್ಡ್‌ ಹೆಸರಿನ ಫ್ಯಾಷನ್‌ ಶೋನಲ್ಲಿ ಸ್ಯಾಂಡಲ್‌ವುಡ್‌ ಯುವ ನಟ ಸಮರ್ಜಿತ್‌ ಹಾಗೂ ನಟಿ ಆರಾಧನಾ ಶೋ ಸ್ಟಾಪರ್‌ ಆಗಿ ಹೆಜ್ಜೆ ಹಾಕಿದರು. ಯಾರ‍್ಯಾರು ಹೇಗೆಲ್ಲಾ ಕಾಣಿಸಿಕೊಂಡರು? ಎಂಬುದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

ಪ್ರಸಾದ್‌ ಬಿದ್ದಪ್ಪ ಶೋನಲ್ಲಿ ನಟ ಸಮರ್ಜಿತ್‌, ಆರಾಧನಾ ರ‍್ಯಾಂಪ್‌ ವಾಕ್‌

ಚಿತ್ರಕೃಪೆ: ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ ಅವರ ನೇತೃತ್ವದಲ್ಲಿ ನಡೆದ ಅನ್‌ಫೋಲ್ಡ್‌ ಹೆಸರಿನ ಫ್ಯಾಷನ್‌ ಶೋವೊಂದರಲ್ಲಿ (Fashion News) ಸ್ಯಾಂಡಲ್‌ವುಡ್‌ನ ಯುವ ನಟ ಸಮರ್ಜಿತ್‌ ಹಾಗೂ ಮಾಲಾ ಶ್ರೀ ಮಗಳಾದ ಆರಾಧನಾ ಮತ್ತು ಶುಭ್ರ ಅಯ್ಯಪ್ಪ ಶೋ ಸ್ಟಾಪರ್‌ಗಳಾಗಿ ಕಾಣಿಸಿಕೊಂಡರು. ಅಂದಹಾಗೆ, ಈ ಫ್ಯಾಷನ್‌ ಶೋನ ಪ್ರಮುಖ ಭಾಗ ಎಥ್ನಿಕ್‌ ಡಿಸೈನರ್‌ವೇರ್‌ಗಳ ಸಮಾಗಮವಾಗಿತ್ತು. ಅದರಲ್ಲೂ ವೆಡ್ಡಿಂಗ್‌ ಡಿಸೈನರ್‌ವೇರ್‌ಗಳು ಇಡೀ ಶೋನ ರಂಗು ಹೆಚ್ಚಿಸಿದ್ದವು. ಕೂಕ್‌ & ಕೀಚ್‌, ಗ್ಲೀತ್ಜ್‌, ಮಸ್ತ್‌ & ಹಾರ್ಬರ್‌, ಮಿಸ್ಟರ್‌ ಬೊವರ್‌ಬರ್ಡ್‌, ಸಂಗ್ರಿಯಾ & ಹೌಸ್‌ ಆಫ್‌ ಪಟೌಡಿ ಸೇರಿದಂತೆ ಪ್ರತಿಷ್ಠಿತ 7 ಬ್ರಾಂಡ್‌ಗಳು ಈ ಶೋನಲ್ಲಿ ಪಾಲ್ಗೊಂಡಿದ್ದವು. ಆ ಬ್ರಾಂಡ್‌ಗಳ ಟ್ರೆಂಡಿ ಡಿಸೈನರ್‌ವೇರ್‌ಗಳಲ್ಲಿ ಮಾಡೆಲ್‌ಗಳು ಕಾಣಿಸಿಕೊಂಡು ನಾನಾ ಬಗೆಯ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದರು.

Fashion News 4

ನಟ ಸಮರ್‌ಜೀತ್‌ ರ‍್ಯಾಂಪ್‌ ವಾಕ್‌

ಇನ್ನು, ಸ್ಯಾಂಡಲ್‌ವುಡ್‌ನ ಯುವ ನಟ ಸಮರ್‌ಜೀತ್‌, ಫ್ಯಾಷನ್‌ ಶೋನ ಪ್ರಮುಖ ಆಕರ್ಷಕ ಕೇಂದ್ರ ಬಿಂದುವಾಗಿದ್ದರು. ರೆಡ್‌ ಶೇಡ್‌ನ ಶೆರ್ವಾನಿಯಲ್ಲಿ ಕಾಣಿಸಿಕೊಂಡ ಸಮರ್‌ಜೀತ್‌ ಎಥ್ನಿಕ್‌ ಲುಕ್‌ನಲ್ಲಿ ಫ್ಯಾಷನ್‌ ಪ್ರಿಯರ ಮನ ಸೆಳೆದರು. ಅವರ ಈ ಲುಕ್‌ ನಯಾ ಸ್ಟೈಲ್‌ ಸ್ಟೇಟ್‌ಮೆಂಟನ್ನು ಪ್ರದರ್ಶಿಸಿತು. ಇವರೊಂದಿಗೆ ಸೀನಿಯರ್‌ ಮಾಡೆಲ್‌ ಹಾಗೂ ನಟಿ ಶುಭ್ರ ಅಯ್ಯಪ್ಪ ಕೂಡ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದರು. ಇವರೂ ಕೂಡ ರೆಡ್‌ ಲೆಹೆಂಗಾದಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡರು. ಜತೆಜತೆಯಲ್ಲಿ ಹೆಜ್ಜೆ ಹಾಕಿ ಬ್ರೈಡಲ್‌ ಕಲೆಕ್ಷನ್‌ ಪ್ರದರ್ಶಿಸಿದರು.

Fashion News 1

ಮಾಲಾಶ್ರೀ ಮಗಳ ರ‍್ಯಾಂಪ್‌ ವಾಕ್‌

ಮಾಲಾ ಶ್ರೀ ಮಗಳಾದ ಆರಾಧನಾ ಕೂಡ ಈ ಫ್ಯಾಷನ್‌ ಶೋನಲ್ಲಿ ಹೆಜ್ಜೆ ಹಾಕಿದ್ದು, ವಿಶೇಷವಾಗಿತ್ತು. ಈಗಾಗಲೇ ನಟ ದರ್ಶನ್‌ರೊಂದಿಗೆ ನಟಿಸಿರುವ ಯುವ ನಟಿ ಆರಾಧನಾ ಕ್ಯಾಶುವಲ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರು. ಅಂದಹಾಗೆ, ಪ್ರಸಾದ್‌ ಬಿದ್ದಪ್ಪ ಅವರು ಆಯೋಜಿಸಿದ್ದ ಫ್ಯಾಷನ್‌ ಶೋನಲ್ಲಿ ಮೊದಲ ಬಾರಿ ಆರಾಧನಾ ಹೆಜ್ಜೆ ಹಾಕಿದ್ದು, ಪ್ರೊಫೆಷನಲ್‌ ಮಾಡೆಲ್‌ನಂತೆ ಇಡೀ ರ‍್ಯಾಂಪ್‌ ಮೇಲೆ ವಾಕ್‌ ಮಾಡಿ ನೋಡುಗರನ್ನು ಸೆಳೆದರು.

Fashion News 2

ಯಶಸ್ವಿಯಾದ ಫ್ಯಾಷನ್‌ ಶೋ

ಒಟ್ಟಾರೆ, ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ ನೇತೃತ್ವದಲ್ಲಿ ನಡೆದ ಈ ಫ್ಯಾಷನ್‌ ಶೋನಲ್ಲಿ ಸ್ಯಾಂಡಲ್‌ವುಡ್‌ ತಾರೆಯರು ಹೆಜ್ಜೆ ಹಾಕಿದ್ದು, ಸಿನಿಮಾ ಪ್ರೇಮಿಗಳ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಯಿತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Metgala Fashion: ಮೆಟ್‌ಗಾಲಾದಲ್ಲಿ ಫ್ಯಾಷನ್‌ ಪ್ರಿಯರನ್ನು ಆಕರ್ಷಿಸಿದ ಬಾಲಿವುಡ್‌ ಸೆಲೆಬ್ರೆಟಿಗಳ ಫ್ಯಾಷನ್‌ವೇರ್ಸ್