Year in Search 2025: ಈ ವರ್ಷ ಚಿತ್ರಪ್ರೇಮಿಗಳು ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಾಡಿದ ʻಟಾಪ್ 10 ಸಿನಿಮಾಗಳುʼ ಇವೆ ನೋಡಿ
2025ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಭಾರತದ ವಿವಿಧ ಭಾಷೆಗಳಲ್ಲಿ ಅನೇಕ ಉತ್ತಮ ಸಿನಿಮಾಗಳು ತೆರೆಕಂಡಿವೆ. ಸದ್ಯ ಈ ವರ್ಷ ನೆಟ್ಟಿಗರು ಹುಡುಕಾಡಿದ ಟಾಪ್ 10 ಸಿನಿಮಾಗಳ ಮಾಹಿತಿಯನ್ನು ಗೂಗಲ್ ಹಂಚಿಕೊಂಡಿದೆ. ಜನರು ಈ ಚಿತ್ರಗಳ ಕುರಿತ ಮಾಹಿತಿಗಾಗಿ ಗೂಗಲ್ನಲ್ಲಿ ಸಾಕಷ್ಟು ಹುಡುಕಾಟ ನಡೆಸಿರುತ್ತಾರೆ. ಆ ಬಗ್ಗೆ ಗೂಗಲ್ ಮಾಹಿತಿ ಹಂಚಿಕೊಂಡಿದ್ದು, ಮೊದಲ ಸ್ಥಾನದಲ್ಲಿ ಹಿಂದಿ ಸೈಯಾರ ಸಿನಿಮಾ ಇದ್ದರೆ, ಕನ್ನಡ ಕಾಂತಾರ ಚಾಪ್ಟರ್ 1 ಸಿನಿಮಾ 2ನೇ ಸ್ಥಾನದಲ್ಲಿದೆ. ಟಾಪ್ 10 ಸಿನಿಮಾಗಳ ಮಾಹಿತಿ ಈ ಮುಂದಿನಂತೆ ಇದೆ.
-
1. ಸೈಯಾರಾ (Saiyaara)
ಇದು ಬಾಲಿವುಡ್ನ ಬಹುನಿರೀಕ್ಷಿತ ಆಕ್ಷನ್ ಮತ್ತು ರೋಮ್ಯಾಂಟಿಕ್ ಚಿತ್ರವಾಗಿದೆ. ಈ ಚಿತ್ರದ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಅಲ್ಲದೆ, ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂ. ಕ್ಲಬ್ಗೆ ಸೇರಿದೆ.
2. ಕಾಂತಾರ: ಎ ಲೆಜೆಂಡ್ ಚಾಪ್ಟರ್ 1
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಇದು 'ಕಾಂತಾರ'ದ ಪ್ರಿಕ್ವೆಲ್ (ಹಿಂದಿನ ಕಥೆ). ಕರಾವಳಿಯ ದೈವಾರಾಧನೆ ಮತ್ತು ಇತಿಹಾಸದ ಮೂಲವನ್ನು ಅತ್ಯಂತ ಅದ್ಧೂರಿಯಾಗಿ ಈ ಸಿನಿಮಾದಲ್ಲಿ ಚಿತ್ರೀಕರಿಸಲಾಗಿದೆ. ಈ ಸಿನಿಮಾವು 800+ ಕೋಟಿ ರೂ. ಗಳಿಸಿದೆ.
3. ಕೂಲಿ (Coolie)
ಸೂಪರ್ಸ್ಟಾರ್ ರಜನಿಕಾಂತ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್ನ ಈ ಸಿನಿಮಾದಲ್ಲಿ ಹೈ-ವೋಲ್ಟೇಜ್ ಆಕ್ಷನ್ ಇತ್ತು. ಬಹುತಾರಾಗಣದಿಂದಲೂ ಈ ಚಿತ್ರ ಗಮನಸೆಳೆದಿತ್ತು.
4. ವಾರ್ 2 (War 2)
ಯಶ್ ರಾಜ್ ಫಿಲ್ಮ್ಸ್ನ ಸ್ಪೈ ಯೂನಿವರ್ಸ್ನ ಭಾಗವಾಗಿರುವ ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು. ಈ ಸಿನಿಮಾವು ನಿರೀಕ್ಷಿತ ಗೆಲುವು ಕಾಣಲಿಲ್ಲ.
5. ಸನಮ್ ತೇರಿ ಕಸಮ್ (Sanam Teri Kasam)
ಎಮೋಷನಲ್ ಪ್ರೇಮಕಥೆಯುವಳ್ಳ ಈ ಸಿನಿಮಾಕ್ಕೆ ಯೂಥ್ಸ್ ಕಡೆಯಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈ ಚಿತ್ರದ ಹಾಡುಗಳು ಮತ್ತು ನಾಯಕ-ನಾಯಕಿಯ ಭಾವನಾತ್ಮಕ ಅಭಿನಯದ ಬಗ್ಗೆ ಭಾರಿ ಕ್ರೇಜ್ ಇದೆ.
6. ಮಾರ್ಕೊ (Marco)
ಉನ್ನಿ ಮುಕುಂದನ್ ಅಭಿನಯದ ಮಲಯಾಳಂನ ಮಾಸ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. 'ಮಾರ್ಕೊ' ಸಿನಿಮಾ 100 ಕೋಟಿ ರೂ. ಗಳಿಸಿತ್ತು.
7. ಹೌಸ್ಫುಲ್ 5 (Housefull 5)
ಅಕ್ಷಯ್ ಕುಮಾರ್ ನಟನೆಯ ಜನಪ್ರಿಯ ಕಾಮಿಡಿ ಸರಣಿಯ ಐದನೇ ಭಾಗವಿದು. ಈ ಬಾರಿ ದೊಡ್ಡ ತಾರಾಗಣದೊಂದಿಗೆ ಕ್ರೂಸ್ ಹಡಗಿನಲ್ಲಿ ನಡೆಯುವ ಮಜಾವಾದ ಕಥೆಯನ್ನು ಈ ಚಿತ್ರ ಹೊಂದಿತ್ತು.
8. ಗೇಮ್ ಚೇಂಜರ್ (Game Changer)
ನಟ ರಾಮ್ ಚರಣ್ ಮತ್ತು ನಿರ್ದೇಶಕ ಶಂಕರ್ ಅವರ ಕಾಂಬಿನೇಷನ್ನ ಚಿತ್ರವಿದು. ಈ ಪೊಲಿಟಿಕಲ್ ಥ್ರಿಲ್ಲರ್ನಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಐಎಎಸ್ ಅಧಿಕಾರಿಯ ಕಥೆಯನ್ನು ಹೇಳಲಾಗಿತ್ತು.
9. ಮಿಸಸ್ (Mrs)
ಮಲಯಾಳಂನ 'ದಿ ಗ್ರೇಟ್ ಇಂಡಿಯನ್ ಕಿಚನ್' ಚಿತ್ರದ ಹಿಂದಿ ರಿಮೇಕ್ ಆಗಿದ್ದ ಸನ್ಯಾ ಮಲ್ಹೋತ್ರಾ ನಟನೆಯ ಮಿಸಸ್ ಸಿನಿಮಾಕ್ಕೆ ಉತ್ತಮ ರೆಸ್ಪಾನ್ಸ್ ಸಿಗಲಿಲ್ಲ.
10. ಮಹಾವತಾರ್ ನರಸಿಂಹ (Mahavatar Narsimha)
ಭಗವಾನ್ ವಿಷ್ಣುವಿನ ನರಸಿಂಹ ಅವತಾರದ ಕಥೆಯನ್ನು ಹೇಳುವ ಅದ್ಭುತ 3D ಆನಿಮೇಷನ್ ಚಿತ್ರವಿದು. ವಿಶ್ವದರ್ಜೆಯ ತಂತ್ರಜ್ಞಾನದ ಮೂಲಕ ನಮ್ಮ ಪುರಾಣದ ಕಥೆಯನ್ನು ಕಟ್ಟಿಕೊಟ್ಟಿರುವುದು ಇದರ ವಿಶೇಷತೆ.