Halloween Styling Ideas 2025: ಹಾಲೋವಿನ್ ಸೆಲೆಬ್ರೇಷನ್ಗೆ ಸಿಂಪಲ್ ಐಡಿಯಾ
Halloween Styling Ideas: ವಿದೇಶದಲ್ಲಿ ಚಾಲ್ತಿಯಲ್ಲಿದ್ದ ಹಾಲೋವಿನ್ ಪಾರ್ಟಿ ಸ್ಟೈಲಿಂಗ್ ಇದೀಗ ನಮ್ಮಲ್ಲೂ ಕಾಮನ್ ಆಗಿದೆ. ಈ ಪಾರ್ಟಿಗೆಂದು ಭಯಾನಕವಾಗಿ ಡ್ರೆಸ್ಸಿಂಗ್ ಮಾಡಿಕೊಳ್ಳುವ ಮುನ್ನ ಒಂದಿಷ್ಟು ವಿಷಯಗಳನ್ನು ತಿಳಿದುಕೊಂಡು ಪಾಲಿಸಿ ಎನ್ನುತ್ತಾರೆ ಸ್ಟೈಲಿಸ್ಟ್ಗಳು. ಈ ಕುರಿತ ವಿವರ ಇಲ್ಲಿದೆ.
ಚಿತ್ರಕೃಪೆ: ಪಿಕ್ಸೆಲ್ -
ಶೀಲಾ ಸಿ ಶೆಟ್ಟಿ
Oct 30, 2025 4:32 PM
ಹಾಲೋವಿನ್ ಪಾರ್ಟಿಗೆ ಈ ಜನರೇಷನ್ ಯುವಕ-ಯುವತಿಯರು ಹಾಗೂ ಮಕ್ಕಳು ಸಜ್ಜಾಗಿದ್ದಾರೆ. ಹೌದು, ಈ ಸೆಲೆಬ್ರೇಷನ್ ಇದೀಗ ಸಿಟಿಯ ಅಪಾರ್ಟ್ಮೆಂಟ್ ಕಲ್ಚರ್ನಲ್ಲಿ ಸೇರಿಕೊಂಡಿದೆ. ಈ ಹಾಲೋವಿನ್ ಸೆಲೆಬ್ರೇಷನ್ ಪ್ರಿಯರು ಒಂದಿಷ್ಟು ಸಿಂಪಲ್ ಐಡಿಯಾ ಫಾಲೋ ಮಾಡಿದಲ್ಲಿ ಸಡಗರ ದುಪಟ್ಟಾಗುವುದು ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಸ್ಪೂಕಿ ಔಟ್ಫಿಟ್ & ಮೇಕಪ್ ಜಾಗೃತಿ
ಚಿತ್ರ-ವಿಚಿತ್ರ, ಭಯಾನಕ ಔಟ್ಫಿಟ್ ಹಾಗೂ ದೆವ್ವಗಳಂತೆ ಕಾಣಿಸಿಕೊಳ್ಳುವ ಡ್ರೆಸ್ ಮಾಡಿಕೊಳ್ಳುವ ಭರದಲ್ಲಿ ನೀವು ಬಳಸುತ್ತಿರುವ ಔಟ್ಫಿಟ್ ಯಾವುದು ಹಾಗೂ ಸೌಂದರ್ಯವರ್ಧಕಗಳು ಗುಣಮಟ್ಟದ್ದೇ ಎಂಬುದನ್ನು ಗಮನಿಸಿ. ಬಾಡಿಗೆಯ ಔಟ್ಫಿಟ್ ಆದಲ್ಲಿ, ಸ್ವಚ್ಛವಾಗಿದೆಯೇ ಎಂಬುದನ್ನು ಗಮನಿಸಿ, ಧರಿಸಿ. ಇತರರಿಗಿಂತ ಭಯಾನಕವಾಗಿರಲಿ ಎಂದು ಲೋಕಲ್ ಮೇಕಪ್ ಬಣ್ಣ ಬಳಸಬೇಡಿ. ಸಾಲಿಡ್ ಕಲರ್ಗಳಿಗಾಗಿ ಕಳಪೆ ಮೇಕಪ್ ಮೊರೆ ಹೋಗಬೇಡಿ. ಇದು ನಿಮ್ಮ ಸ್ಕಿನ್ ಫ್ರೆಂಡ್ಲಿಯಾಗಿರಲಿ. ಇಲ್ಲವಾದಲ್ಲಿ ಸ್ಕಿನ್ಗೆ ಅಲರ್ಜಿಯಾಗಿ ಚರ್ಮದ ಸಮಸ್ಯೆಯಾಗಬಹುದು.
ಸಿಂಪಲ್ ಸ್ಟೈಲಿಂಗ್ ಐಡಿಯಾ
ದೆವ್ವದಂತೆ ಹಾರರ್ ಆಗಿರಲಿ ಎಂದು ಕಾಂಪ್ಲೀಕೇಟೆಡ್ ಡ್ರೆಸ್ಸಿಂಗ್ ಮಾಡಬೇಡಿ. ಆದಷ್ಟೂ ಸಿಂಪಲ್ ಆಗಿಯೇ ಹೆಚ್ಚು ತಲೆ ಬಿಸಿಯಿಲ್ಲದೇ ಮಾಡಬಹುದಾದ ಉಡುಗೆಗಳನ್ನು ಧರಿಸಿ. ಉದಾಹರಣೆಗೆ., ವೈಟ್ ಬೆಡ್ಸ್ಪ್ರೆಡ್ ಅನ್ನು ಮುಡಿಯಿಂದ ಕಾಲವರೆಗೂ ಹಾಕಿಕೊಳ್ಳ್ಳಿ. ಕಣ್ಣ ಜಾಗದಲ್ಲಿ ಮಾತ್ರ ತೂತು ಮಾಡಿ. ಹೆಚ್ಚು ಖರ್ಚಿಲ್ಲದೇ ಕಾಸ್ಟ್ಯೂಮ್ ರೆಡಿಯಾಗುವುದು.
ಕಣ್ಣಿನ ಲೆನ್ಸ್ ಉತ್ತಮದ್ದಾಗಿರಲಿ
ಭಯಾನಕ ಲುಕ್ ನೀಡಲು ಬಹಳಷ್ಟು ಮಂದಿ ಕಲರ್ಡ್ ಲೆನ್ಸ್ ಧರಿಸುತ್ತಾರೆ. ಅದು ನೋಡಲು ಕಲರ್ನದ್ದಾದದರೂ ಕಣ್ಣಿಗೆ ಧಕ್ಕೆ ಉಂಟು ಮಾಡುತ್ತದೆ. ಎಚ್ಚರ. ಇನ್ನು ಗಾಢ ವರ್ಣದ ಮೇಕಪ್ ಕೇವಲ ಕಣ್ಣಿನ ಹೊರಗಿರಲಿ.
ಚಿಣ್ಣರ ಸ್ಪೂಕಿ ಡ್ರೆಸ್ ಹೆವ್ವಿಯಾಗದಿರಲಿ
ಹಾರರ್ ಸೃಷ್ಟಿಸುವ ವೇಷ-ಭೂಷಣಗಳ ಹೆಸರಲ್ಲಿ ಮಕ್ಕಳಿಗೆ ಕಿರಿಕಿರಿಯಾಗುವಂತಹದ್ದನ್ನು ಹಾಕಬೇಡಿ. ಆದಷ್ಟೂ ಲೈಟ್ವೇಟ್ನದ್ದನ್ನು ಚೂಸ್ ಮಾಡಿ.
ಹೇರ್ ಸ್ಪ್ರೇ ಬೇಡ
ಕೂದಲ ವಿನ್ಯಾಸಕ್ಕೆ ಅತಿ ಹೆಚ್ಚು ಹೇರ್ ಸ್ಪ್ರೇ ಹಾಗೂ ಹೇರ್ ಸೆಟ್ಟರ್ ಬಳಸುವುದರಿಂದ ಕೂದಲು ಉದುರುವ ಸಂಭವವಿರುತ್ತದೆ. ಗಮ್ನಂತಹ ಯಾವುದೇ ಪ್ರಾಡಕ್ಟ್ ಬಳಸದಿರುವುದೇ ಉತ್ತಮ.