Fake Scientist Arrest: ನಕಲಿ ವಿಜ್ಞಾನಿ ಬಂಧನ: ಪರಮಾಣು ಮಾಹಿತಿ, ನಕ್ಷೆ ವಶಕ್ಕೆ
ಮುಂಬೈಯ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇರ್ಪಡೆಗೊಂಡು ಹಲವು ಮಹತ್ವಪೂರ್ಣ ಮಾಹಿತಿ ಸಂಗ್ರಹಿಸಿದ್ದ ನಕಲಿ ವಿಜ್ಞಾನಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಆರೋಪಿಯಿಂದ ಅನುಮಾನಾಸ್ಪದ ಪರಮಾಣು ದತ್ತಾಂಶ, ಹಲವಾರು ನಕ್ಷೆಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನನ್ನು ಅಖ್ತರ್ ಹುಸೇನ್ ಕುತುಬುದ್ದೀನ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಈತ ಕಳೆದ ಕೆಲವು ತಿಂಗಳಲ್ಲಿ ಹಲವಾರು ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿದ್ದಾನೆ, ವಿದೇಶಗಳಿಗೂ ಹೋಗಿ ಬಂದಿದ್ದಾನೆ. ಈತನನ್ನು ಅಕ್ಟೋಬರ್ 17ರಂದು ಮುಂಬೈ ಪೊಲೀಸ್ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕವು ಬಂಧಿಸಿದ್ದು, ಪೊಲೀಸ್ ಕಸ್ಟಡಿಯಲ್ಲಿ ಇರಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
-
ವಿದ್ಯಾ ಇರ್ವತ್ತೂರು
Oct 30, 2025 11:30 PM
ಮುಂಬೈ: ನಕಲಿ ವಿಜ್ಞಾನಿಯೊಬ್ಬನನ್ನು (Fake Scientist Arrest) ಅಕ್ಟೋಬರ್ 17ರಂದು ಮುಂಬೈ ಪೊಲೀಸ್ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕವು (Mumbai Police Crime Branch’s Crime Intelligence Unit) ಬಂಧಿಸಿದೆ. ಮುಂಬೈಯ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ (Bhabha Atomic Research Centre) 60 ವರ್ಷದ ಅಖ್ತರ್ ಹುಸೇನ್ ಕುತುಬುದ್ದೀನ್ ಅಹ್ಮದ್ ಎಂಬಾತ ವಿಜ್ಞಾನಿಯಾಗಿ ಸೇರ್ಪಡೆಗೊಂಡು ಹಲವು ಮಹತ್ವಪೂರ್ಣ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ. ಈತ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿದ್ದರಿಂದ ಅನುಮಾನಗೊಂಡ ಮುಂಬೈ ಪೊಲೀಸ್ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕವು ಆತನನ್ನು ಬಂಧಿಸಿತ್ತು.
ಬಾಬಾ ಪರಮಾಣು ಸಂಶೋಧನಾ ಕೇಂದ್ರವನ್ನು ಸೇರಿದ್ದ ನಕಲಿ ವಿಜ್ಞಾನಿ ಅಖ್ತರ್ ಹುಸೇನ್ ಕುತುಬುದ್ದೀನ್ ಅಹ್ಮದ್ ನಿಂದ ಹಲವಾರು ಅನುಮಾನಾಸ್ಪದ ಹಲವಾರು ಪರಮಾಣು ದತ್ತಾಂಶ ಮತ್ತು 12ಕ್ಕೂ ಹೆಚ್ಚು ನಕ್ಷೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಸೂಕ್ಷ್ಮ ಪರಮಾಣು ಸಂಬಂಧಿತ ಮಾಹಿತಿ ಇರುವ ಕುರಿತು ಶಂಕೆ ವ್ಯಕ್ತವಾಗಿದೆ. ಈ ಕುರಿತು ನಿರ್ಧರಿಸಲು ದಾಖಲೆಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ.
ಇದನ್ನೂ ಓದಿ : Crime News: ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡದಂತೆ ಹೇಳಿದ್ದೇ ತಪ್ಪಾಯ್ತಾ? ಕೆನಾಡದಲ್ಲಿ ಭಾರತೀಯ ಮೂಲದ ಉದ್ಯಮಿಯ ಹತ್ಯೆ
ಅಖ್ತರ್ ಹುಸೇನ್ ಕಳೆದ ಕೆಲವು ತಿಂಗಳಲ್ಲಿ ಹಲವು ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿದ್ದಾನೆ. ಆತನ ಕರೆ ದಾಖಲೆಗಳನ್ನು ಪತ್ತೆಹಚ್ಚಲಾಗುತ್ತಿದೆ. ಶಂಕಿತ ಪರಮಾಣು ದತ್ತಾಂಶಕ್ಕೆ ಸಂಬಂಧಿಸಿರಬಹುದಾದ ವಿದೇಶಿ ಜಾಲಗಳೊಂದಿಗೆ ಅವನು ಸಂಪರ್ಕದಲ್ಲಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ನಕಲಿ ವಿಜ್ಞಾನಿಯಾಗಿ ನಟಿಸಿದ ಅಖ್ತರ್ ಹುಸೇನ್ ಹಲವು ಬರಿ ನಕಲಿ ಗುರುತಿನ ಅಡಿಯಲ್ಲಿ ವಿದೇಶಕ್ಕೆ ಪ್ರಯಾಣ ಮಾಡಿದ್ದು ಈ ಹಿನ್ನೆಲೆಯಲ್ಲಿ ಅಕ್ಟೋಬರ್ 17ರಂದು ಮುಂಬೈ ಪೊಲೀಸ್ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕವು ಆತನನ್ನು ಬಂಧಿಸಿತ್ತು. ಸದ್ಯ ಆತನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.
ದೆಹಲಿ ಪೊಲೀಸರು ಅಖ್ತರ್ ಹುಸೇನ್ ಅವರ ಸಹೋದರ 59 ವರ್ಷದ ಆದಿಲ್ ನನ್ನು ಕೂಡ ಬಂಧಿಸಲಾಗಿದೆ. ಮೊದಲು ಆತನ ಸಹೋದರ ಸತ್ತಿದ್ದಾನೆ ಎಂದು ಘೋಷಿಸಲಾಗಿತ್ತು.
ಅಖ್ತರ್ ಹುಸೇನ್ ವಿದೇಶಿ ಮೂಲದ ಪರಮಾಣು ವಿಜ್ಞಾನಿಯೊಂದಿಗಿನ ಸಂಪರ್ಕದಲ್ಲಿದ್ದಾನೆ ಎಂದು ಶಂಕಿಸಲಾಗಿದ್ದು, ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎನ್ನುವ ಆರೋಪವಿದೆ.
ಮೋಸ್ಟ್ ವಾಂಟೆಡ್ ಅಪರಾಧಿ ಬಂಧನ
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಬುಧವಾರ ಮುಂಜಾನೆ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯ ಬಳಿಕ ದೆಹಲಿ ಪೊಲೀಸರು ಮೋಸ್ಟ್ ವಾಂಟೆಡ್ ಅಪರಾಧಿಯೊಬ್ಬನನ್ನು ಬಂಧಿಸಿದ್ದಾರೆ.
ದೆಹಲಿ ಪೊಲೀಸರ ತಂಡವು ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಿಜ್ಲಿ ಘರ್ ಬಳಿಯ ಜೀರೋ ಪುಷ್ತಾ ಬಳಿ ನೋಂದಣಿ ಫಲಕವಿಲ್ಲದ ಮೋಟಾರ್ ಸೈಕಲ್ ಅನ್ನು ತಡೆದಿದ್ದಾರೆ. ಆಗ ಸವಾರ ಪಿಸ್ತೂಲ್ ತೆಗೆದು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದನು. ಈ ವೇಳೆ ಪೊಲೀಸರು ಆತನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆರೋಪಿಯು ಕಾನ್‌ಸ್ಟೆಬಲ್‌ನನ್ನು ಗುರಿಯಾಗಿಸಿಕೊಂಡು ಮತ್ತೆ ಗುಂಡು ಹಾರಿಸಿದನು. ಕಾನ್‌ಸ್ಟೆಬಲ್‌ನ ಗುಂಡು ನಿರೋಧಕ ಜಾಕೆಟ್‌ಗೆ ತಗುಲಿತ್ತು.
ಇದನ್ನೂ ಓದಿ: Road Accident: ನಿತೀಶ್ ಕಟಾರಾ ಕೊಲೆ ಅಪರಾಧಿ ಸಾವು; 20 ವರ್ಷ ಶಿಕ್ಷೆ ಮುಗಿಸಿ ಬಂದ ತಿಂಗಳೊಳಗೆ ಭೀಕರ ಅಪಘಾತ
ಬಳಿಕ ಪೊಲೀಸರು ಎರಡು ಸುತ್ತು ಗುಂಡು ಹಾರಿಸುವ ಮೂಲಕ ಪ್ರತಿದಾಳಿ ನಡೆಸಿದ್ದು, ಇದು ಆರೋಪಿಯ ಎಡಗಾಲಿಗೆ ತಾಗಿದೆ. ಗಾಯಗೊಂಡ ಆರೋಪಿಯನ್ನು ವೆಲ್ಕಮ್‌ನ ಜಂತ ಮಜ್ದೂರ್ ಕಾಲೋನಿಯ ನಿವಾಸಿ ಇಮ್ರಾನ್ ಅಲಿಯಾಸ್ ಕಲಾ (21) ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.