Shefali Jariwala: ಪತಿ ಜೊತೆಗೆ ಶೆಫಾಲಿ ಹೃದಯಸ್ಪರ್ಶಿ ಕ್ಷಣಗಳ ಫೋಟೋಸ್ ಫುಲ್ ವೈರಲ್
ಐಕಾನಿಕ್ ಮ್ಯೂಸಿಕ್ ವಿಡಿಯೋ ಕಾಂಟಾ ಲಗಾ, ನಟ ಪುನೀತ್ ರಾಜ್ ಕುಮಾರ್ ನಟನೆಯ ಹುಡುಗರು ಚಿತ್ರದ ತೊಂದ್ರೆ ಇಲ್ಲಾ ಪಂಕಜಾ ಹಾಡಿನ ಮೂಲಕ ಪಡ್ಡೆ ಹುಡುಗರ ಮನಗೆದ್ದಿದ್ದ ಶೆಫಾಲಿ ಜರಿವಾಲಾ (Shefali Jariwala) 42 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮುಂಬೈನಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಅವರ ಹಠಾತ್ ಸಾವು ಅಭಿಮಾನಿಗಳು ಮತ್ತು ಚಿತ್ರರಂಗಕ್ಕೆ ಆಘಾತವನ್ನು ಉಂಟು ಮಾಡಿದೆ. ರೂಪದರ್ಶಿ, ಕಿರುತೆರೆ ನಟಿಯಾಗಿಯೂ ಗುರುತಿಸಿಕೊಂಡ ಶೆಫಾಲಿ ಜರಿವಾಲಾ ಬದುಕಿನ ಹೃದಯಸ್ಪರ್ಶಿ ಕ್ಷಣಗಳ ಚಿತ್ರಗಳು ಇಲ್ಲಿವೆ.



ಕಾಂಟಾ ಲಗಾ.. ಐಕಾನಿಕ್ ಮ್ಯೂಸಿಕ್ ವಿಡಿಯೋದಿಂದ ಜನಪ್ರಿಯತೆ ಗಳಿಸಿರುವ ಶೆಫಾಲಿ ಜರಿವಾಲಾ ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಹಠಾತ್ ಸಾವು ಅಭಿಮಾನಿಗಳು ಮತ್ತು ಚಿತ್ರರಂಗಕ್ಕೆ ಆಘಾತವನ್ನು ಉಂಟು ಮಾಡಿದೆ. ಶೆಫಾಲಿ ಜರಿವಾಲಾ ಅವರು ನಟ ಪುನೀತ್ ರಾಜ್ ಕುಮಾರ್ ನಟನೆಯ ಹುಡುಗರು ಚಿತ್ರದ ತೊಂದ್ರೆ ಇಲ್ಲಾ ಪಂಕಜಾ ಹಾಡಿಗೆ ಹೆಜ್ಜೆ ಹಾಕಿದ್ದರು.

ನಟಿ ಮತ್ತು ರೂಪದರ್ಶಿ ಶೆಫಾಲಿ ಜರಿವಾಲಾ ಅವರಿಗೆ ಶುಕ್ರವಾರ ತಡರಾತ್ರಿ ಹಠಾತ್ ಹೃದಯ ಸ್ತಂಭನವಾಗಿದೆ. ಕೂಡಲೇ ಅವರ ಪತಿ, ನಟ ಪರಾಗ್ ತ್ಯಾಗಿ ಅವರನ್ನು ಮುಂಬೈನ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

2000ದ ದಶಕದ ಆರಂಭದಲ್ಲಿ ರೀಮಿಕ್ಸ್ ವಿಡಿಯೋ ಕಾಂಟಾ ಲಗಾದಲ್ಲಿನ ಅದ್ಭುತ ಅಭಿನಯದ ಮೂಲಕ ಶೆಫಾಲಿ ಜರಿವಾಲಾ ಮನೆಮಾತಾಗಿದ್ದರು. ಇದರಿಂದಾಗಿ ಅವರಿಗೆ "ಕಾಂಟಾ ಲಗಾ ಗರ್ಲ್" ಎನ್ನುವ ಅಡ್ಡಹೆಸರು ಬಂದಿತ್ತು. ಬಳಿಕ ಅವರು ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಪ್ರಿಯಾಂಕಾ ಚೋಪ್ದ ಅಭಿನಯದ ಮುಜ್ಸೆ ಶಾದಿ ಕರೋಗಿ ಚಿತ್ರದಲ್ಲಿ ಬಿಜಲಿಯಾಗಿ ಕಾಣಿಸಿಕೊಂಡಿದ್ದರು.

ಹಲವು ವರ್ಷಗಳ ಕಾಲ ರಿಯಾಲಿಟಿ ಟಿವಿ ಶೋ ನಲ್ಲಿ ಕೆಲಸ ಮಾಡಿದ ಶೆಫಾಲಿ ಪತಿ ಪರಾಗ್ ಅವರೊಂದಿಗೆ ನಾಚ್ ಬಲಿಯೇ ಮತ್ತು ಬಿಗ್ ಬಾಸ್ 13ಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು. ಬಿಗ್ ಬಾಸ್ ಮನೆಯಲ್ಲಿ ಅವರ ಮಾಜಿ ಪ್ರಿಯಕರ ನಟ ಸಿದ್ಧಾರ್ಥ್ ಶುಕ್ಲಾ ಇದ್ದದ್ದು ಭಾರಿ ಚರ್ಚೆಗೂ ಕಾರಣವಾಗಿತ್ತು.

ಶೆಫಾಲಿ ಮತ್ತು ಸಿದ್ದಾರ್ಥ್ ಇಬ್ಬರೂ ಒಂದು ದಶಕದ ಹಿಂದೆ ಡೇಟಿಂಗ್ ಮಾಡಿದ್ದರು. ಆದರೆ ಅವರಿಬ್ಬರೂ ಬಿಗ್ ಬಾಸ್ ಮನೆಯ ಒಳಗೆ ಮತ್ತು ಹೊರಗೆ ಪರಸ್ಪರ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಈ ಬಗ್ಗೆ ನೇರ ನಡೆನುಡಿಯ ಮೂಲಕ ಎಲ್ಲರ ಗಮನ ಸೆಳೆದಿರುವ ಶೆಫಾಲಿಯೇ ಒಮ್ಮೆ ಹೇಳಿಕೊಂಡಿದ್ದರು.