Photos: ಅದ್ಧೂರಿಯಾಗಿ ಜರುಗಿದ ನಟ ನಿರಂಜನ್ ಸುಧೀಂದ್ರ - ಸಂಜನಾ ಆರತಕ್ಷತೆ; ಫ್ಯಾಮಿಲಿ ವೆಡ್ಡಿಂಗ್ನಲ್ಲಿ ಮಿಂಚಿದ ʻರಿಯಲ್ ಸ್ಟಾರ್ʼ ಉಪೇಂದ್ರ ದಂಪತಿ
ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದಲ್ಲಿ ಕಳೆದ ಒಂದು ವಾರದಿಂದ ಸಂಭ್ರಮದ ವಾತಾವರಣ ಮನೆಮಾಡಿದ್ದು, ಉಪೇಂದ್ರ ಅವರ ಸಹೋದರ ಸುಧೀಂದ್ರ ಅವರ ಪುತ್ರ ಹಾಗೂ ನಟ ನಿರಂಜನ್ ಸುಧೀಂದ್ರ ಅವರ ವಿವಾಹ ಮಹೋತ್ಸವ ಅತ್ಯಂತ ವೈಭವದಿಂದ ನೆರವೇರಿದೆ. ಭಾನುವಾರ (ನವೆಂಬರ್ 15) ಬೆಂಗಳೂರಿನಲ್ಲಿ ನಿರಂಜನ್ ಸುಧೀಂದ್ರ ಮತ್ತು ಸಂಜನಾ ಬಿ. ರಾಜ್ ಅವರ ವೆಡ್ಡಿಂಗ್ ರಿಸೆಪ್ಷನ್ ಅತ್ಯಂತ ಅದ್ಧೂರಿಯಾಗಿ ಜರುಗಿದ್ದು, ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ. ಸದ್ಯ ನಿರಂಜನ್ ಸುಧೀಂದ್ರ ಹಾಗೂ ಸಂಜನಾ ಬಿ. ರಾಜ್ ಅವರ ಅದ್ಧೂರಿ ಆರತಕ್ಷತೆಯ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನವಜೋಡಿಗೆ ಶುಭಾಶಯಗಳ ಮಳೆಗರೆಯುತ್ತಿದ್ದಾರೆ.
-
ಸಹೋದರ ಸುಧೀಂದ್ರ ಅವರ ಮಕ್ಕಳ ಮೇಲೆ ಅಪಾರ ಪ್ರೀತಿ ಹಾಗೂ ಕಾಳಜಿ ಹೊಂದಿರುವ ನಟ ಉಪೇಂದ್ರ ಅವರು ಈ ಮದುವೆ ಸಂಭ್ರಮದ ಕೇಂದ್ರಬಿಂದುವಾಗಿ ಮಿಂಚಿದ್ದಾರೆ.
ನಿರಂಜನ್ ತಾಯಿ ವೀಣಾ ಸುಧೀಂದ್ರ ಅವರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿರುವ ನಟಿ ಪ್ರಿಯಾಂಕಾ ಉಪೇಂದ್ರ ಕೂಡ ವಿವಾಹದ ಪ್ರತಿಯೊಂದು ಕಾರ್ಯದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ನಿರಂಜನ್ ಅವರ ವಿವಾಹದ ಎಲ್ಲಾ ಶಾಸ್ತ್ರಗಳು ಮತ್ತು ಆರತಕ್ಷತೆಯ ಜವಾಬ್ದಾರಿಯನ್ನು ಉಪೇಂದ್ರ ಹಾಗೂ ಪ್ರಿಯಾಂಕಾ ದಂಪತಿ ಖುದ್ದಾಗಿ ಮುಂದೆ ನಿಂತು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ವಿವಾಹ ಪೂರ್ವ ಶಾಸ್ತ್ರಗಳಿಂದ ಹಿಡಿದು ನಿನ್ನೆ ನಡೆದ ಭವ್ಯ ಆರತಕ್ಷತೆಯವರೆಗೆ ಇಡೀ ಉಪೇಂದ್ರ ಕುಟುಂಬ ಒಟ್ಟಾಗಿ ಸೇರಿ ಸಂಭ್ರಮಿಸಿದೆ.
ನವದಂಪತಿಗಳಾದ ನಿರಂಜನ್ ಮತ್ತು ಸಂಜನಾ ಸುಂದರ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರೆ, ಕುಟುಂಬದ ಸದಸ್ಯರೆಲ್ಲರೂ ಸಾಂಪ್ರದಾಯಿಕ ಉಡುಪುಗಳಲ್ಲಿ ಮಿಂಚುವ ಮೂಲಕ ಸಮಾರಂಭಕ್ಕೆ ಮತ್ತಷ್ಟು ಮೆರುಗು ನೀಡಿದರು.
ನಿರಂಜನ್ ಮತ್ತು ಸಂಜನಾ ಮದುವೆಗೆ ಆಗಮಿಸಿದ ನಿರ್ದೇಶಕ ಸಂತೋಷ್ ಆನಂದ್ರಾಮ್.
ಹಿರಿಯ ನಟ ರಮೇಶ್ ಭಟ್ ಅವರಿಂದ ನವದಂಪತಿ ನಿರಂಜನ್ ಮತ್ತು ಸಂಜನಾಗೆ ಆಶೀರ್ವಾದ.
ನಿರಂಜನ್ ಮದುವೆ ಆರತಕ್ಷತೆಗೆ ಆಗಮಿಸಿದ ಅಭಿಷೇಕ್ ಅಂಬರೀಷ್.
ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಪ್ರಣಮ್ ದೇವರಾಜ್ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು.
ನಿರಂಜನ್ ಮದುವೆಗೆ ಮಗಳು ಆರಾಧನಾ ಜೊತೆ ಆಗಮಿಸಿದ ನಟಿ ಮಾಲಾಶ್ರೀ.
ನಿರಂಜನ್ ಮತ್ತು ಸಂಜನಾ ಮದುವೆಯಲ್ಲಿ ಮಿಂಚಿದ ಸಂಗೀತ ನಿರ್ದೇಶಕ ಗುರುಕಿರಣ್ ಫ್ಯಾಮಿಲಿ.
ನಟ ಶ್ರೀಮುರಳಿ ಅವರಿಂದ ನವಜೋಡಿಗೆ ಶುಭ ಹಾರೈಕೆ.
ನಿರ್ಮಾಪಕ ಕೆ. ಮಂಜು ಮತ್ತು ಪುತ್ರ ಶ್ರೇಯಸ್ ಅವರಿಂದ ಶುಭ ಹಾರೈಕೆ.