ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kerala Assembly Polls 2026: ಗಡಿನಾಡು ಕಾಸರಗೋಡಿನಲ್ಲಿ ಬಿಜೆಪಿ ಸ್ಟಾರ್‌ ಪ್ರಚಾರಕ ತೇಜಸ್ವಿ ಸೂರ್ಯ ಅಬ್ಬರ; ಕನ್ನಡತಿ, ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಪರ ಮತ ಯಾಚನೆ

ಕೇರಳಂನಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್‌ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ. ಹೀಗಾಗಿ ರಾಜ್ಯಾದ್ಯಂತ ಪ್ರಚಾರದ ಕಾವು ಜೋರಾಗಿದೆ. ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ಸತತ 3ನೇ ಬಾರಿಗೆ ಆಡಳಿತಕ್ಕೆ ಬರುವ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್‌ ಮುಂದಾಳತ್ವದ ಯುಡಿಎಫ್‌ ಶತಾಯ ಗತಾಯ ಸರ್ಕಾರ ರಚಿಸಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಈ ಮಧ್ಯೆ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದಲ್ಲಿ ಮತ್ತೊಮ್ಮೆ ಮತದಾರರ ಮೇಲೆ ಪ್ರಭಾವ ಬೀರಲು ಮುಂದಾಗಿದೆ. ಅದರಲ್ಲಿಯೂ ಗಡಿನಾಡು ಕಾಸರಗೋಡಿನಲ್ಲಿ ಎನ್‌ಡಿಎ ಪ್ರಚಾರ ಜೋರಾಗಿದೆ. ಸಂಸದ, ಯುವ ನಾಯಕ ಸಂಸದ ತೇಜಸ್ವಿ ಸೂರ್ಯ ಬಿಜೆಪಿಯ ಸ್ಟಾರ್‌ ಪ್ರಚಾರಕರಾಗಿ ಅಖಾಡಕ್ಕಿಳಿದಿದ್ದಾರೆ. ಕಾಸರಗೋಡು ಎನ್‌ಡಿಎ ಅಭ್ಯರ್ಥಿ, ಕನ್ನಡತಿ ಎಂ.ಎಲ್‌. ಅಶ್ವಿನಿ ಪರ ಕ್ಷೇತ್ರದಾದ್ಯಂತ ಓಡಾಡಿ ಮತ ಯಾಚಿಸಿದರು.

ಕಾಸರಗೋಡಿನಲ್ಲಿ ಬಿಜೆಪಿ ಸ್ಟಾರ್‌ ಪ್ರಚಾರಕ ತೇಜಸ್ವಿ ಸೂರ್ಯ ಅಬ್ಬರದ ಪ್ರಚಾರ

ಎಡನೀರು ಮಠದಲ್ಲಿ ತೇಜಸ್ವಿನಿ ಸೂರ್ಯ ಮತ್ತು ಎಂ.ಎಲ್‌. ಅಶ್ವಿನಿ -

Ramesh Ballamoole
Ramesh Ballamoole Mar 29, 2026 3:32 PM