ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CM Siddaramaiah: ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ

ಮೈಸೂರಿನ ಮೈಲಾರಿ ಹೋಟೆಲ್‌, ಮೃದುವಾದ ದೋಸೆ ಹಾಗೂ ಮಲ್ಲಿಗೆ ಇಡ್ಲಿಗೆ ಸಾಕಷ್ಟು ಫೇಮಸ್‌. ಸಿಎಂ ಅವರು ಪ್ರತಿ ಬಾರಿ ಮೈಸೂರಿಗೆ ಬಂದಾಗ ಸಿಎಂ ಬೆಣ್ಣೆ ದೋಸೆ, ಕಾಯಿ ಚಟ್ನಿ, ಆಲೂಗಡ್ಡೆ ಈರುಳ್ಳಿ ಪಲ್ಯ, ಇಡ್ಲಿ-ಚಟ್ನಿ ಸವಿಯುತ್ತಾರೆ.

Prabhakara R
Prabhakara R Mar 29, 2026 4:21 PM

ಮೈಸೂರು: ನಗರದ ಮೈಲಾರಿ ಹೋಟೆಲ್‌ನಲ್ಲಿ (Mylari Hotel) ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಭಾನುವಾರ ದೋಸೆ ಸವಿದರು. ಈ ವೇಳೆ ಅವರಿಗೆ ಸಚಿವರಾದ ಪರಮೇಶ್ವರ್‌, ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್‌, ನರಗುಂದ ಬಿಜೆಪಿ ಶಾಸಕ ಸಿಸಿ ಪಾಟೀಲ್‌ ಸಾಥ್‌ ನೀಡಿದರು. ಪೊಲೀಸ್‌ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಮೈಸೂರಿಗೆ ತೆರಳಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿದ್ದರು.