Lehenga Fashion 2026: ವೆಡ್ಡಿಂಗ್ ಫ್ಯಾಷನ್ಗೆ ಲಗ್ಗೆ ಇಟ್ಟ ನೆಟ್ ಲೆಹೆಂಗಾ
ಈ ಬಾರಿಯ ವೆಡ್ಡಿಂಗ್ ಫ್ಯಾಷನ್ನಲ್ಲಿ ಪಾಸ್ಟೆಲ್ ಶೇಡ್ನ ನೆಟ್ ಲೆಹೆಂಗಾ ಸೂಪರ್ ಹಿಟ್ ಆಗಿವೆ. ಇದಕ್ಕೆ ಪೂರಕ ಎಂಬಂತೆ ಗಾಯಕಿ ಆಕೃತಿ ಕಕ್ಕರ್ ಧರಿಸಿದ ಈ ಲೆಹೆಂಗಾ ಇದೀಗ ವೈರಲ್ ಆಗಿದೆ. ಇದ್ಯಾವ ಬಗೆಯ ಲೆಹೆಂಗಾ. ಇಲ್ಲಿದೆ ವಿವರ.
ಚಿತ್ರಗಳು: ಆಕೃತಿ ಕಕ್ಕರ್, ಗಾಯಕಿ., ಫೋಟೋಗ್ರಾಫಿ: ವಿ ಕ್ಯಾಪ್ಚರ್ ಕಲೆಕ್ಟಿವ್ಸ್ -
ಈ ಬಾರಿಯ ವೆಡ್ಡಿಂಗ್ ಫ್ಯಾಷನ್ನಲ್ಲಿ ಪಾಸ್ಟೆಲ್ ಶೇಡ್ನ ನೆಟ್ ಲೆಹೆಂಗಾಗಳು ಹಿಟ್ ಆಗಿವೆ. ಇದಕ್ಕೆ ಪೂರಕ ಎಂಬಂತೆ, ಗಾಯಕಿ ಆಕೃತಿ ಕಕ್ಕರ್ ತನ್ನ ಸಹೋದರಿ ಮದುವೆಯ ಸಮಾರಂಭದಲ್ಲಿ ಧರಿಸಿದ್ದ ಬ್ಯೂಟಿಫುಲ್ ಪಾಸ್ಟೆಲ್ ಶೇಡ್ನ ನೆಟ್ ಲೆಹೆಂಗಾ, ಈಗಾಗಲೇ ಈ ಜನರೇಷನ್ ಹುಡುಗಿಯರನ್ನು ಮದುವೆ ಮನೆಗಳಲ್ಲಿ ಸವಾರಿ ಮಾಡತೊಡಗಿದೆ.
ವೈರಲ್ ಆಯ್ತು ಆಕೃತಿ ಕಕ್ಕರ್ ನೆಟ್ ಲೆಹೆಂಗಾ
ಅಕೃತಿ ಕಾಕರ್ ಮೂಲತಃ ಸಿಂಗರ್ ಜತೆ ಜತೆಗೆ ಫ್ಯಾಷನ್ ಇನ್ಫ್ಲೂಯೆನ್ಸರ್, ತನ್ನ ಔಟ್ಫಿಟ್ಗಳ ಮೂಲಕವೇ ಫಾಲೋವರ್ಗಳನ್ನು ಸೆಳೆದಿರುವವರು. ಇದೀಗ ಅವರ ಈ ನೆಟ್ ಲೆಹೆಂಗಾ ಇದೀಗ ವೈರಲ್ ಆಗಿದೆ ಹಾಗೂ ಅದೇ ರೀತಿಯ ಲೆಹೆಂಗಾಗಳು ಮದುವೆ ಮನೆಯ ಸಂಭ್ರಮದಲ್ಲಿ ಕಾಣಿಸತೊಡಗಿವೆ ಎಂದಿದ್ದಾರೆ ಫ್ಯಾಷನ್ ವಿಶ್ಲೇಷಕರು.
ಏನಿದು ನೆಟ್ ಲೆಹೆಂಗಾ?
ಅಂದಹಾಗೆ, ನೆಟ್ ಲೆಹೆಂಗಾಗಳು ಎರಡು ಲೇಯರ್ ಹೊಂದಿರುತ್ತವೆ. ಸೂಕ್ಷ್ಮ ಫ್ಯಾಬ್ರಿಕ್ನ ಇವು ಸಿಂಪಲ್ ಡಿಸೈನ್ನಲ್ಲಿ ದೊರೆಯುತ್ತಿವೆ. ಕ್ರಾಪ್ ಟಾಪ್ನಂತಹ ಬ್ಲೌಸ್ನೊಂದಿಗೆ ಎ ಲೈನ್ ಲಾಂಗ್ ಸ್ಕರ್ಟ್ ಇಲ್ಲವೇ ಅಂಬ್ರೆಲ್ಲಾ ಕಟ್ನಲ್ಲಿ ಇವು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಸಾಫ್ಟ್ ಫ್ಯಾಬ್ರಿಕ್ ಆಗಿರುವುದರಿಂದ ಇವುಗಳಲ್ಲಿ ಹೆಚ್ಚೆನೂ ವಿನ್ಯಾಸ ಕಾಣ ಸಿಗದು. ಆದರೆ, ಧರಿಸಿದಾಗ ಅತ್ಯಾಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್ಪರ್ಟ್ಸ್.
ನೆಟ್ ಲೆಹೆಂಗಾ ಆಯ್ಕೆ ಹೇಗೆ?
- ಉತ್ತಮ ಫ್ಯಾಬ್ರಿಕ್ ನೋಡಿ ಆಯ್ಕೆ ಮಾಡಿ.
- ಪಾಸ್ಟೆಲ್ ಶೇಡ್ನವು ಟ್ರೆಂಡಿಯಾಗಿವೆ.
- ಸಿಂಪಲ್ ಡಿಸೈನ್ಗೆ ಪ್ರಾಮುಖ್ಯತೆ ನೀಡಿ.
- ಹೆಚ್ಚು ವಿನ್ಯಾಸದವನ್ನು ಚೂಸ್ ಮಾಡಬೇಡಿ.
- ದುಪಟ್ಟಾವನ್ನು ಕೇಪ್ನಂತೆ ಧರಿಸಬಹುದು.