OTT Release: ಮೋಹನ್ ಲಾಲ್ ನಟನೆಯ ಎಂಪೂರನ್ OTTಗೆ ಬರೋದು ಯಾವಾಗ?
ಖ್ಯಾತ ನಟ ಮೋಹನ್ ಲಾಲ್ (Mohanlal) ಅಭಿನಯದ ಎಲ್ 2 ಎಂಪೂರನ್ (L2 Empuraan) ಏಪ್ರಿಲ್ 24 ರಂದು ಒಟಿಟಿಯಲ್ಲಿ (OTT Release) ತೆರೆ ಕಾಣಲಿದೆ. ಎಲ್2 ಎಂಪೂರಾನ್ ಚಿತ್ರದ ಜಾಗತಿಕ ಪ್ರದರ್ಶನಕ್ಕೆ ಜಿಯೋಹಾಟ್ಸ್ಟಾರ್ (JioHotstar) ಸಜ್ಜಾಗಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್, ಆಶೀರ್ವಾದ್ ಸಿನಿಮಾಸ್ ಮತ್ತು ಶ್ರೀ ಗೋಕುಲಂ ಮೂವೀಸ್ ನಿರ್ಮಿಸಿವೆ. ಈ ಚಿತ್ರವು ಕಳೆದ ಮಾರ್ಚ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.



ಎಲ್2 ಎಂಪೂರನ್ ಚಿತ್ರವು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಇದರ ಮೊದಲ ಕಂತು ಲೂಸಿಫರ್ ಭಾರಿ ಯಶಸ್ಸನ್ನು ಕಂಡಿತು, ಇದರಲ್ಲಿ ಮೋಹನ್ ಲಾಲ್ ಅವರ ನಿಗೂಢ ಸ್ಟೀಫನ್ ನೆಡುಂಪಳ್ಳಿ ಪಾತ್ರವು ವಿಶ್ವದಾದ್ಯಂತ ಜನರ ಹೃದಯವನ್ನು ಗೆದ್ದಿದೆ. ಇದು ಮಲಯಾಳಂ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿದೆ. Sacnilk.com ಪ್ರಕಾರ ಈ ಚಿತ್ರವು ಒಂದು ತಿಂಗಳೊಳಗೆ ಭಾರತದಾದ್ಯಂತ 105 ಕೋಟಿ ರೂ. ಗೂ ಹೆಚ್ಚು ಆದಾಯ ಗಳಿಸಿತ್ತು.

ಎಲ್2 ಎಂಪೂರನ್ ಚಿತ್ರದ ನಿರ್ಮಾಣ ಕಾರ್ಯವು 2023ರ ಅಕ್ಟೋಬರ್ ತಿಂಗಳಲ್ಲಿ ಫರಿದಾಬಾದ್ನಲ್ಲಿ ಪ್ರಾರಂಭಿಸಲಾಗಿತ್ತು. ಅನಂತರ ಶಿಮ್ಲಾ, ಲೇಹ್, ಯುಕೆ, ಯುಎಸ್, ಚೆನ್ನೈ, ಗುಜರಾತ್, ಹೈದರಾಬಾದ್, ಯುಎಇ, ಮುಂಬೈ ಮತ್ತು ಕೇರಳದಂತಹ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಎಲ್2 ಎಂಪೂರನ್ ಚಿತ್ರವು 2019 ರ ಬ್ಲಾಕ್ಬಸ್ಟರ್ ಚಿತ್ರ ಲೂಸಿಫರ್ ನ ಮುಂದುವರಿದ ಭಾಗವಾಗಿದೆ. ಈ ಚಿತ್ರದಲ್ಲಿ ಮೋಹನ್ ಲಾಲ್ ಖುರೇಷಿ-ಅಬ್ರಾಮ್ ಅಕಾ ಸ್ಟೀಫನ್ ನೆಡುಂಪಲ್ಲಿ ಆಗಿ ಮರಳಿದ್ದಾರೆ. ಪೃಥ್ವಿರಾಜ್ ಜಾಯೆದ್ ಮಸೂದ್ ಪಾತ್ರವನ್ನು ಮತ್ತೆ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ಮುರಳಿ ಗೋಪಿ ಬರೆದಿದ್ದು, ಲೈಕಾ ಪ್ರೊಡಕ್ಷನ್ಸ್, ಆಶೀರ್ವಾದ್ ಸಿನಿಮಾಸ್ ಮತ್ತು ಶ್ರೀ ಗೋಕುಲಂ ಚಿತ್ರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.

ಎಲ್ 2 ಎಂಪೂರನ್ ಚಿತ್ರವು ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದೆ. ಬಿಡುಗಡೆಯಾದ ಅನಂತರ ಈ ಚಿತ್ರವು ಗುಜರಾತ್ ಗಲಭೆಗಳನ್ನು ಚಿತ್ರೀಕರಿಸಿದೆ ಎಂಬ ವಿವಾದಕ್ಕೆ ಸಿಲುಕಿತು. ಹೀಗಾಗಿ ಎಲ್2 ಎಂಪೂರನ್ ತಯಾರಕರು ಚಿತ್ರದಿಂದ 17 ಭಾಗಗಳನ್ನು ತೆಗೆದುಹಾಕಲು ನಿರ್ಧರಿಸಿದರು. ಈ ಬಗ್ಗೆ ಮೋಹನ್ ಲಾಲ್ ಪ್ರತಿಕ್ರಿಯಿಸಿ ಚಿತ್ರದ ಕೆಲವು ಅಂಶಗಳು ತಮ್ಮ ಕೆಲವು ಅಭಿಮಾನಿಗಳಿಗೆ ತೊಂದರೆಯನ್ನುಂಟುಮಾಡಿದೆ. ಅಂತಹ ಉಲ್ಲೇಖಗಳನ್ನು ತೆಗೆದುಹಾಕಲು ಚಿತ್ರ ತಂಡವು ನಿರ್ಧರಿಸಿದೆ ಎಂದು ಭರವಸೆ ನೀಡಿದ್ದಾರೆ.