Navaratri Fashion 2025: ನವರಾತ್ರಿಯಲ್ಲಿ ನೇರಳೆ ಬಣ್ಣದ ಜಾದೂ
Purple colour styling for Navaratri: ನವರಾತ್ರಿಯಲ್ಲಿ ನೇರಳೆ ಬಣ್ಣಕ್ಕೂ ಪ್ರಾಮುಖ್ಯತೆ ಇದೆ. ಈ ಗಾಢ ಬಣ್ಣದಲ್ಲೂ ನಾನಾ ಬಗೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಹೇಗೆಲ್ಲಾ ಸ್ಟೈಲಿಂಗ್ ಮಾಡಿಕೊಳ್ಳಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ಇಲ್ಲಿ ತಿಳಿಸಿದ್ದಾರೆ.

ಚಿತ್ರಗಳು: ಮಾಡೆಲ್: ಅನು ಮಂಜುನಾಥ್ -


ನವರಾತ್ರಿಯಲ್ಲಿ ನೇರಳೆ ಬಣ್ಣಕ್ಕೂ ಪ್ರಾಮುಖ್ಯತೆ ಇದೆ. ಹೌದು, ಈ ಕಲರ್ನಲ್ಲೂ ಕೂಡ ನಾನಾ ಸ್ಟೈಲಿಂಗ್ನಲ್ಲಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಹೇಗೆಲ್ಲಾ ಆಕರ್ಷಕವಾಗಿ ಸಿಂಗರಿಸಿಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ಇಲ್ಲಿ ಸಿಂಪಲ್ ಟಿಪ್ಸ್ ನೀಡಿದ್ದಾರೆ.

ವೆರೈಟಿ ನೇರಳೆ ಶೇಡ್ನ ಸೀರೆ ಹಾಗೂ ಡಿಸೈನರ್ ಬಿಡುಗಡೆ
ನವರಾತ್ರಿಯಲ್ಲಿ ನೇರಳೆ ಬಣ್ಣದ ಸೀರೆಗಳು ಹಾಗೂ ಎಥ್ನಿಕ್ವೇರ್ಗಳು ನಾನಾ ವಿನ್ಯಾಸದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿವೆ. ಅದರಲ್ಲೂ ಗಾಢ ಬಣ್ಣದಿಂದಿಡಿದು ತಿಳಿ ನೇರಳೆ ಬಣ್ಣದ ರೇಷ್ಮೆ ಸೀರೆಗಳು, ಉದ್ಯೋಗಸ್ಥರು ಉಡಬಹುದಾದ ಲೈಟ್ವೇಟ್ ಶಿಫಾನ್, ಜಾರ್ಜೆಟ್ ಸೀರೆಗಳು ಪ್ರಿಂಟೆಡ್ ಡಿಸೈನ್ನವು ಹೆಚ್ಚು ಚಾಲ್ತಿಯಲ್ಲಿವೆ. ಇನ್ನು ಪರ್ಪಲ್ ಡಿಸೈನರ್ವೇರ್ಗಳು ಕೂಡ ಫೆಸ್ಟಿವ್ ಸೀಸನ್ಗೆ ಲಗ್ಗೆ ಹಾಕಿವೆ ಎನ್ನುತ್ತಾರೆ ಡಿಸೈನರ್ ವಿವೇಕ್.

ನೇರಳೆ ಬಣ್ಣದ ಸೀರೆಯ ಸ್ಟೈಲಿಂಗ್
ನೇರಳೆ ಬಣ್ಣ ನೋಡಲು ತೀರಾ ಗಾಢ ಬಣ್ಣವಾಗಿರುವುದರಿಂದ ಉಟ್ಟಾಗ ಎದ್ದು ಕಾಣುತ್ತದೆ. ಹೆಚ್ಚು ಜ್ಯುವೆಲರಿ ಧರಿಸದಿದ್ದರೂ ಹೈಲೈಟಾಗುವಂತೆ ಮಾಡುತ್ತದೆ. ರೇಷ್ಮೆ ಸೀರೆಗಳಾದಲ್ಲಿ ಬಾರ್ಡರ್ ಬಹುತೇಕ ಕಾಂಟ್ರಾಸ್ಟ್ ಇಲ್ಲವೇ ಗೋಲ್ಡನ್ ವರ್ಣದ್ದಾಗಿರುತ್ತದೆ. ಹಾಗಾಗಿ ಇವಕ್ಕೆ ಮ್ಯಾಚ್ ಆಗುವಂತೆ ಟ್ರೆಡಿಷನಲ್ ಲುಕ್ ನೀಡುವ ಮೇಕಪ್ ಹಾಗೂ ಆಭರಣಗಳನ್ನು ಧರಿಸಿದರಾಯಿತು. ಹಣೆಗೆ ಇಡುವ ಬಿಂದಿ ಮುಖದ ಅಂದವನ್ನು ಹೆಚ್ಚಿಸುತ್ತದೆ. ಇನ್ನು ಹೇರ್ಸ್ಟೈಲ್ ಕೂಡ ಅಷ್ಟೇ! ಸಿಂಪಲ್ ಜಡೆ ಹೆಣೆಯುವರಿಂದಿಡಿದು, ಬನ್ ಹೇರ್ಸ್ಟೈಲ್ ಕೂಡ ಚೆನ್ನಾಗಿ ಕಾಣುತ್ತದೆ ಎನ್ನುತ್ತಾರೆ.

ನೇರಳೆ ಶೇಡ್ ಎಥ್ನಿಕ್ವೇರ್ಸ್ ಮೇಕೋವರ್
ಇತರೇ ಸಂದರ್ಭದಲ್ಲೂ ಧರಿಸಬಹುದಾದ ನೇರಳೆ ಶೇಡ್ನ ಎಥ್ನಿಕ್ವೇರ್ಸ್ ಆಯ್ಕೆ ಮಾಡಿ. ಮಾನೋಕ್ರೋಮ್ ಕೋ -ಆರ್ಡ್ ಸೆಟ್ ಚೂಸ್ ಮಾಡುವುದು ಉತ್ತಮ. ಯಾಕೆಂದರೆ, ಕಾಂಟ್ರಾಸ್ಟ್ ವರ್ಣ ಮಿಕ್ಸ್ ಮಾಡಿದಲ್ಲಿ ನೋಡಲು ಕಂಪ್ಲೀಟ್ ನೇರಳೆ ಲುಕ್ ನೀಡದು ಎನ್ನುತ್ತಾರೆ ಸ್ಟೈಲಿಸ್ಟ್ಗಳು.

- ಸೀರೆಯ ಫ್ಯಾಬ್ರಿಕ್ಗೆ ತಕ್ಕಂತೆ ಡ್ರೇಪಿಂಗ್ ಮಾಡಿ.
- ಎಥ್ನಿಕ್ವೇರ್ ಆದಲ್ಲಿ ಆದಷ್ಟೂ ಸಿಂಪಲ್ ಲುಕ್ ನೀಡಿ.
- ಟ್ರೆಡಿಷನಲ್ ಲುಕ್ ನೀಡುವುದು ಬೆಸ್ಟ್.