Gold Price Today On 21 February: ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ ಚಿನ್ನ; ಭಾರಿ ಹೆಚ್ಚಳ ಕಂಡ ಬೆಲೆ
Gold Silver Price Today: ಬೆಂಗಳೂರಿನಲ್ಲಿ ಶನಿವಾರ (ಫೆಬ್ರವರಿ 21) 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 175 ರುಪಾಯಿ ಹೆಚ್ಚಾಗಿ 14,600 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್ ಚಿನ್ನ ಕೂಡ ದುಬಾರಿಯಾಗಿದ್ದು, 1 ಗ್ರಾಂಗೆ 191 ರುಪಾಯಿ ಅಧಿಕವಾಗಿ 15,928 ರುಪಾಯಿಗೆ ಬಂದು ನಿಂತಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಫೆ. 21: ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿದೆ. ಬೆಂಗಳೂರಿನಲ್ಲಿ ಶನಿವಾರ (ಫೆಬ್ರವರಿ 21) 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 175 ರುಪಾಯಿ ಹೆಚ್ಚಾಗಿ 14,600 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್ ಚಿನ್ನ ಕೂಡ ದುಬಾರಿಯಾಗಿದ್ದು, 1 ಗ್ರಾಂಗೆ 191 ರುಪಾಯಿ ಅಧಿಕವಾಗಿ 15,928 ರುಪಾಯಿಗೆ ಬಂದು ನಿಂತಿದೆ (Gold Price Today On 21 February).
ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,16,800 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,46,000 ರುಪಾಯಿ ಹಾಗೂ 100 ಗ್ರಾಂಗೆ ನೀವು 14,60,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,27,424ರುಪಾಯಿ ಹಾಗೂ 10 ಗ್ರಾಂಗೆ ನೀವು 1,59,280 ರುಪಾಯಿ ಹಾಗೂ 100 ಗ್ರಾಂಗೆ ನೀವು 15,92,800 ರುಪಾಯಿ ನೀಡಬೇಕಾಗುತ್ತದೆ.
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,680 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,015 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,600 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,928 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,615 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,943 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,600 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,928 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,600 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 15,928 ರುಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,680 ರುಪಾಯಿ | 16,015 ರುಪಾಯಿ |
| ಮುಂಬೈ | 14,600 ರುಪಾಯಿ | 15,928 ರುಪಾಯಿ |
| ದೆಹಲಿ | 14,615 ರುಪಾಯಿ | 15,943 ರುಪಾಯಿ |
| ಕೋಲ್ಕತ್ತಾ | 14,600 ರುಪಾಯಿ | 15,928 ರುಪಾಯಿ |
| ಹೈದರಾಬಾದ್ | 14,600 ರುಪಾಯಿ | 15,928 ರುಪಾಯಿ |
ಡೊನಾಲ್ಡ್ ಟ್ರಂಪ್‌ಗೆ ದೊಡ್ಡ ಶಾಕ್! ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದ ಯುಎಸ್ ಸುಪ್ರೀಂ ಕೋರ್ಟ್!
ಬೆಳ್ಳಿ ದರ
ಬೆಳ್ಳಿ ದರವೂ ಇಂದು ಹೆಚ್ಚಳ ದಾಖಲಿಸಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 5 ರುಪಾಯಿ ಅಧಿಕವಾಗಿದ್ದು, 275 ರುಪಾಯಿಗೆ ತಲುಪಿದೆ. 10 ಗ್ರಾಂ ಬೆಳ್ಳಿಗೆ 2,750 ರುಪಾಯಿ ಹಾಗೂ 1 ಕೆಜಿ ಬೆಳ್ಳಿಗೆ ನೀವು 2,75,000 ರುಪಾಯಿ ಪಾವತಿಸಬೇಕು.