Partywear Saree Tips 2025: ಪಾರ್ಟಿ ಸೀರೆ ಪ್ರಿಯರಿಗೆ 5 ಸ್ಟೈಲಿಂಗ್ ಟಿಪ್ಸ್ ಇಲ್ಲಿದೆ
Partywear Saree Tips: ನ್ಯೂ ಇಯರ್ ಅಥವಾ ಇಯರ್ ಎಂಡ್ ಪಾರ್ಟಿಗಳಲ್ಲಿ ಪಾರ್ಟಿವೇರ್ ಸೀರೆ ಉಡಲು ಬಯಸುವ ಯುವತಿಯರ ಸ್ಟೈಲಿಂಗ್ ಹೇಗಿರಬೇಕು, ಯಾವ ರೀತಿ ರೆಡಿಯಾಗಬೇಕು ಎಂಬುದನ್ನು ಸ್ಟೈಲಿಸ್ಟ್ಗಳು ಇಲ್ಲಿ ವಿವರಿಸಿದ್ದಾರೆ. ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.
ಚಿತ್ರಕೃಪೆ: ಪಿಕ್ಸೆಲ್ -
ಪಾರ್ಟಿವೇರ್ ಸೀರೆಯ ಆಯ್ಕೆ ಮುಖ್ಯ
ಇಯರ್ ಎಂಡ್ ಫ್ಯಾಷನ್ ಪಾರ್ಟಿಯಲ್ಲಿ ಸೀರೆಯನ್ನು ಉಡಲು ಬಯಸುವ ಫ್ಯಾಷನ್ ಪ್ರಿಯರಿಗೆ ಸ್ಟೈಲಿಶ್ ಆಗಿ ಹೇಗೆಲ್ಲಾ ಉಡಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಪಾರ್ಟಿವೇರ್ ಸೀರೆಗಳಲ್ಲಿ ಎಲ್ಲರೂ ಸುಂದರಿಯರಾಗಿ ಕಾಣಬಹುದು. ಅದರಲ್ಲೂ ಯಂಗ್ ವರ್ಕಿಂಗ್ ವುಮೆನ್ ಆದಲ್ಲಿ ಗೋಲ್ಡ್, ಬ್ಲಾಕ್, ವೈಟ್ ಮತ್ತು ಸಿಲ್ವರ್ ಶೇಡ್ನ ಶೈನಿಂಗ್ ಶಿಮ್ಮರ್ ಸೀರೆ ಆಯ್ಕೆ ಮಾಡಬೇಕು. ಅಷ್ಟೇಕೆ ಶಿಫಾನ್ ಹಾಗೂ ಜಾರ್ಜೆಟ್ನ ಸೀರೆಗಳನ್ನೂ ಧರಿಸಬಹುದು. ನೂರು ಜನರ ಮಧ್ಯೆಯೂ ನೀವು ಮಿನುಗಬೇಕೆಂದರೇ ಗ್ಲಿಟ್ಟರಿ ಇರುವಂತಹ ಸ್ಟೋನ್ಸ್ ಇಲ್ಲವೇ ಸೀಕ್ವಿನ್ಸ್ ಶೈನಿಂಗ್ ಸೀರೆಗಳನ್ನು ಉಡಬಹುದು.
ಪಾರ್ಟಿವೇರ್ ಸೀರೆಗಳನ್ನು ಹೈಲೈಟ್ ಮಾಡುವ ಬ್ಲೌಸ್ಗಳು
ಪಾರ್ಟಿವೇರ್ ಸೀರೆಗಳಿಗೆ ಯಾವುದೇ ಕಾರಣಕ್ಕೂ ಟ್ರೆಡಿಷನಲ್ ಬ್ಲೌಸ್ ಧರಿಸಲೇ ಕೂಡದು. ಆದಷ್ಟೂ ಇಂಡೋ-ವೆಸ್ಟರ್ನ್ ಲುಕ್ ನೀಡುವಂತಹ ಸ್ಲಿವ್ಲೆಸ್, ಹಾಲ್ಟರ್ ನೆಕ್ಲೈನ್, ಬ್ಯಾಕ್ಲೆಸ್ ಬ್ಲೌಸ್ಗಳನ್ನು ಧರಿಸಬೇಕು. ನೋಡುಗರನ್ನು ಸೆಳೆಯಬೇಕಿದ್ದಲ್ಲಿ, ಬಿಕಿನಿ ಸ್ಟೈಲ್ನ ಬ್ಲೌಸ್ ಇಲ್ಲವೇ ಕ್ರಾಪ್ ಟಾಪ್ ಧರಿಸಬಹುದು. ಇದು ಗ್ಲಾಮರ್ ಹೆಚ್ಚಿಸುತ್ತದೆ.
ಫ್ಯಾಷನ್ ಜ್ಯುವೆಲರಿಗಳ ಸಾಥ್
ಪಾರ್ಟಿವೇರ್ ಸೀರೆಗಳಿಗೆ ಆದಷ್ಟೂ ಫ್ಯಾಷನ್ ಜ್ಯುವೆಲರಿಗಳನ್ನು ಧರಿಸುವುದು ಉತ್ತಮ. ಇಲ್ಲವೇ ಸ್ಟೇಟ್ಮೆಂಟ್ ಜ್ಯುವೆಲರಿ ಧರಿಸಬಹುದು.
ಹೈಲೈಟಾಗುವ ಪಾರ್ಟಿ ಮೇಕಪ್
ಪಾರ್ಟಿವೇರ್ ಸೀರೆಗಳಿಗೆ ಮ್ಯಾಚ್ ಆಗುವಂತಹ ಮೇಕಪ್ ಮಾಡಬೇಕು. ಸ್ಮೋಕಿ ಐ ಮೇಕಪ್ ಹೆಣ್ಣಿನ ಮಾದಕತೆಯನ್ನು ಹೆಚ್ಚಿಸಬಹುದು. ಲಿಪ್ಸ್ಟಿಕ್ಗಳು ಕೂಡ ಅಟ್ರಾಕ್ಟಿವ್ ಆಗಿ ಬಿಂಬಿಸಬಹುದು.
ಸಾಥ್ ನೀಡುವ ಹೇರ್ಸ್ಟೈಲ್ ಚೂಸ್ ಮಾಡಿ
ಪಾರ್ಟಿವೇರ್ ಸೀರೆಗಳಿಗೆ ಮ್ಯಾಚ್ ಆಗುವಂತಹ ಹೇರ್ಸ್ಟೈಲ್ ಮಾಡುವುದು ಉತ್ತಮ. ಇದು ಇಡೀ ಲುಕ್ಕನ್ನು ಆಕರ್ಷಕವಾಗಿ ಬಿಂಬಿಸಬಹುದು. ಉದಾಹರಣೆಗೆ ಡಿಫರೆಂಟ್ ಆಗಿ ಕಾಣಿಸುವ ಬಬಲ್ ಹೇರ್ಸ್ಟೈಲ್, ಹೈ ಬನ್ ವಿತ್ ಲಾಕ್ಸ್, ಫ್ರಂಟ್ ರಿಂಗ್ಲೇಟ್ಸ್, ಪಫ್ ಕರ್ಲ್ ಹೇರ್ಸ್ಟೈಲ್ಗಳನ್ನು ಟ್ರೈ ಮಾಡಬಹುದು.