ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಸ್ಸಾಂನ ಟೀ ಗಾರ್ಡನ್‌ಗೆ ನರೇಂದ್ರ ಮೋದಿ ಭೇಟಿ; ಕಾರ್ಮಿಕರೊಂದಿಗೆ ಚಹಾ ಎಲೆ ಕಿತ್ತು, ಸೆಲ್ಫಿಗೆ ಪೋಸ್‌ ನೀಡಿದ ಪ್ರಧಾನಿ

ʼʼಚಹಾ ಅಸ್ಸಾಂನ ಆತ್ಮ. ಇಲ್ಲಿನ ಚಹಾ ಜಗತ್ತಿನಾದ್ಯಂತ ಪಸರಿಸಿದೆʼʼ-ಅಸ್ಸಾಂನ ಚಹಾ ತೋಟಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಉದ್ಘರಿಸಿದ ಪರಿ ಇದು. ಏಪ್ರಿಲ್‌ 1ರಂದು ಅಸ್ಸಾಂನ ದಿಬ್ರುಗಢಕ್ಕೆ ತೆರಳಿದ ಮೋದಿ ಅಲ್ಲಿನ ಚಹಾ ತೋಟಕ್ಕೆ ಭೇಟಿ ನೀಡಿ ಒಂದಷ್ಟು ಹೊತ್ತು ಕಳೆದರು. ಅಲ್ಲಿನ ಕಾರ್ಮಿಕರೊಂದಿಗೆ ಸೇರಿ ತಾವೂ ಚಹಾ ಎಲೆ ಕಿತ್ತರು. ಜತೆಗೆ ಅವರೊಂದಿಗೆ ಮಾತುಕತೆ ನಡೆಸಿದರು. ಹರಟೆ ಹೊಡೆದರು. ಸೆಲ್ಫಿಗೆ ಪೋಸ್‌ ನೀಡಿದರು. ಮಾತ್ರವಲ್ಲ ಅಸ್ಸಾಂನ ಸಾಂಪ್ರದಾಯಿಕ ಹಾಡಿಗೆ ಕಿವಿಯಾದರು, ಜಾನಪದ ನೃತ್ಯವನ್ನು ಆನಂದಿಸಿದರು. ಹೀಗೆ ಚಾಯ್‌ವಾಲಾ ಮೋದಿ ಚಹಾ ತೋಟದಲ್ಲಿ ಮಿಂಚು ಹರಿಸಿದರು.

ಅಸ್ಸಾಂನಲ್ಲಿ ಕಾರ್ಮಿಕರೊಂದಿಗೆ ಚಹಾ ಎಲೆ ಕಿತ್ತ ಪ್ರಧಾನಿ ಮೋದಿ

ಅಸ್ಸಾಂನ ಚಹಾ ತೋಟದಲ್ಲಿ ಪ್ರಧಾನಿ ನರೇಂದ್ರ ಮೋದಿ -

Ramesh Ballamoole
Ramesh Ballamoole Apr 1, 2026 4:54 PM