ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗುಜರಾತ್‌ನ ಸೋಮನಾಥ ದೇಗುಲದಲ್ಲಿ ನರೇಂದ್ರ ಮೋದಿ ವಿಶೇಷ ಪೂಜೆ; ಪೋಖ್ರಾನ್​ ಅಣ್ವಸ್ತ್ರ ಪರೀಕ್ಷೆ, ವಾಜಪೇಯಿ ಸ್ಮರಿಸಿದ ಪ್ರಧಾನಿ

Somnath Temple Amrut Mahotsav: ಇತಿಹಾಸ ಪ್ರಸಿದ್ಧ ಗುಜರಾತ್‌ನ ಸೋಮನಾಥ ಶಿವ ದೇವಸ್ಥಾನ ಜೀರ್ಣೋದ್ಧಾರಗೊಂಡು 75 ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಸೋಮವಾರ (ಮೇ 11) ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ವಿಶೇಷ ಪೂಜೆ ಸಲ್ಲಿಸಿದರು. ಸೋಮನಾಥಕ್ಕೆ ತಲುಪಿದ ಮೋದಿ ಅಲ್ಲಿಂದ ರೋಡ್‌ಶೋ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು. ಮಂತ್ರಘೋಷಗಳ ಹಿನ್ನೆಲೆಯಲ್ಲಿ ನಡೆದ ಮಹಾ ಪೂಜೆ ಮತ್ತು ಜಲಾಭಿಷೇಕದಲ್ಲಿಯೂ ಮೋದಿ ಪಾಲ್ಗೊಂಡರು. ಅಲ್ಲದೆ ಕುಂಬಾಭಿಷೇಕವನ್ನು ಕಣ್ತುಂಬಿಕೊಂಡರು. ದೇಶದ ವಿವಿಧ ಪವಿತ್ರ ನದಿಗಳಿಂದ ಸಂಗ್ರಹಿಸಿದ ನೀರನ್ನು ಈ ಸಂದರ್ಭದಲ್ಲಿ ಪ್ರೋಕ್ಷಣೆ ಮಾಡಲಾಯಿತು.

ಗುಜರಾತ್‌ನ ಸೋಮನಾಥ ದೇಗುಲದಲ್ಲಿ ನರೇಂದ್ರ ಮೋದಿ ವಿಶೇಷ ಪೂಜೆ

ಗುಜರಾತ್‌ ಸೋಮನಾಥ ದೇವಾಲಯ ಮತ್ತು ನರೇಂದ್ರ ಮೋದಿ -

Ramesh Ballamoole
Ramesh Ballamoole May 11, 2026 4:10 PM