ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ಲಾಸ್ಟಿಕ್ ತಟ್ಟೆಗಿಂತ ಬಾಳೆ ಎಲೆ ಏಕೆ ಶ್ರೇಷ್ಠ? ಆರೋಗ್ಯ ತಜ್ಞರು ನೀಡಿದ ಸಲಹೆಗಳು ಇಲ್ಲಿವೆ ನೋಡಿ!

Diet and Health Tips: ದಕ್ಷಿಣ ಭಾರತದ ಹಬ್ಬಗಳು, ಮದುವೆ ಮತ್ತು ವಿಶೇಷ ಸಮಾರಂಭಗಳಲ್ಲಿ ಬಾಳೆ ಎಲೆಯ ಮೇಲೆ ಊಟ ಬಡಿಸುವುದು ನಮ್ಮ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಆದರೆ ಈ ಆಚರಣೆಯ ಹಿಂದೆ ಕೇವಲ ಸಂಪ್ರದಾಯ ಮಾತ್ರವಲ್ಲ, ಹಲವು ವೈಜ್ಞಾನಿಕ ಹಾಗೂ ಆರೋಗ್ಯಕರ ಕಾರಣಗಳಿವೆ ಎಂದು ವೈದ್ಯರು ವಿವರಿಸಿದ್ದಾರೆ. ಬಾಳೆ ಎಲೆ ಮೇಲೆ ಊಟ ಮಾಡುವುದರಿಂದ ಸಿಗುವ ಲಾಭಗಳೇನು ಇಲ್ಲಿದೆ ನೋಡಿ.

ಸಂಪ್ರದಾಯವಷ್ಟೇ ಅಲ್ಲ, ಆರೋಗ್ಯಕ್ಕು ಬೆಸ್ಟ್‌ ಬಾಳೆ ಎಲೆ ಊಟ!

Banana Leaf Meal -

Profile
Jyoti S Nov 21, 2026 7:25 AM

ಬೆಂಗಳೂರು, ನ.20: ದಕ್ಷಿಣ ಭಾರತದ ಸಂಸ್ಕೃತಿಯಲ್ಲಿ ಮದುವೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಭೋಜನ ಕೂಟಗಳಲ್ಲಿ ಬಾಳೆ ಎಲೆಯ (Banana Leaf) ಮೇಲೆ ಊಟ ಬಡಿಸುವುದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ದಕ್ಷಿಣ ಭಾರತ ಅಷ್ಟೇ ಅಲ್ಲದೆ ಈಗ ಭಾರತದ ಹಲವು ಪ್ರದೇಶಗಳಲ್ಲಿ ಬಾಳೆ ಎಲೆ ಮೇಲೆ ಊಟ ಮಾಡುವ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಈ ಆಚರಣೆಯ ಹಿಂದೆ ಕೇವಲ ಧಾರ್ಮಿಕ ನಂಬಿಕೆ ಮಾತ್ರವಲ್ಲದೆ, ಅತ್ಯುತ್ತಮ ಆರೋಗ್ಯಕರ ಮತ್ತು ವೈಜ್ಞಾನಿಕ ಕಾರಣಗಳೂ ಅಡಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಬಾಳೆ ಎಲೆಯಲ್ಲಿ ನೈಸರ್ಗಿಕವಾಗಿ ಪಾಲಿಫಿನಾಲ್‌ಗಳಂತಹ ಪ್ರಬಲ ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುತ್ತವೆ. ಬಿಸಿ ಬಿಸಿಯಾದ ಅನ್ನ, ಸಾಂಬಾರ್‌ ಮತ್ತು ಇತರೆ ಆಹಾರಗಳನ್ನು ಬಾಳೆ ಎಲೆ ಮೇಲೆ ಬಡಿಸಿದಾಗ, ಆ ಬಿಸಿಗೆ ಎಲೆಯಲ್ಲಿರುವ ಪೋಷಕಾಂಶಗಳು ಕರಗಿ ಆಹಾರದೊಂದಿಗೆ ಬೆರೆಯುತ್ತವೆ. ಇದರಿಂದ ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ, ಜೀವಕೋಶಗಳ ಹಾನಿಯನ್ನು ತಡೆಯಲು ಸಹಾಯವಾಗುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸಿದ್ದಾರೆ.

Banana Leaves: ಪ್ಲೇಟ್ ಊಟಕ್ಕಿಂತ ಬಾಳೆ ಎಲೆ ಊಟ ಉತ್ತಮ ಯಾಕೆ? ಇಲ್ಲಿದೆ ಕಾರಣ

ಸಮೃದ್ಧವಾಗಿರುತ್ತವೆ. ಬಿಸಿ ಬಿಸಿಯಾದ ಅನ್ನ, ಸಾಂಬಾರ್ ಅಥವಾ ಇತರ ಆಹಾರ ಪದಾರ್ಥಗಳನ್ನು ಬಾಳೆ ಎಲೆಯ ಮೇಲೆ ಬಡಿಸಿದಾಗ, ಆ ಬಿಸಿಗೆ ಎಲೆಯಲ್ಲಿರುವ ಈ ಪೋಷಕಾಂಶಗಳು ಕರಗಿ ಆಹಾರದೊಂದಿಗೆ ಬೆರೆಯುತ್ತವೆ. ಇದರಿಂದ ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ, ಜೀವಕೋಶಗಳ ಹಾನಿಯನ್ನು ತಡೆಯಲು ಸಹಾಯವಾಗುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸಿದ್ದಾರೆ.

ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದಾಗುವ ಲಾಭಗಳು

ಆ್ಯಂಟಿಆಕ್ಸಿಡೆಂಟ್‌ಗಳು: ಗ್ರೀನ್ ಟೀನಲ್ಲಿ ಕಂಡುಬರುವ 'ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್' ಎಂಬ ಪ್ರಬಲ ಆ್ಯಂಟಿಆಕ್ಸಿಡೆಂಟ್ ಬಾಳೆ ಎಲೆಯಲ್ಲೂ ಇರುತ್ತದೆ. ಬಿಸಿ ಆಹಾರದ ಸಂಪರ್ಕಕ್ಕೆ ಬಂದಾಗ ಇದು ಆಹಾರದ ಪೌಷ್ಟಿಕಾಂಶವನ್ನು ಹೆಚ್ಚಿಸುತ್ತದೆ.

ಬ್ಯಾಕ್ಟೀರಿಯಾ ವಿರೋಧಿ ಗುಣ: ಬಾಳೆ ಎಲೆಯ ಮೇಲ್ಮೈ ನೈಸರ್ಗಿಕವಾಗಿ ಮೇಣದಂತಹ ಪದರವನ್ನು ಹೊಂದಿರುತ್ತದೆ. ಇದು ಆಹಾರದಲ್ಲಿರುವ ಸೂಕ್ಷ್ಮಾಣುಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಗುಣವನ್ನು ಹೊಂದಿದ್ದು, ಆಹಾರ ವಿಷವಾಗುವುದನ್ನು ತಡೆಯುತ್ತದೆ.

ರಾಸಾಯನಿಕ ಮುಕ್ತ: ಪ್ಲಾಸ್ಟಿಕ್ ತಟ್ಟೆಗಳಲ್ಲಿ ಬಿಸಿ ಆಹಾರ ಬಡಿಸಿದಾಗ ಹಾನಿಕಾರಕ ರಾಸಾಯನಿಕಗಳು ಬಿಡುಗಡೆಯಾಗುವ ಅಪಾಯವಿರುತ್ತದೆ. ಆದರೆ ಬಾಳೆ ಎಲೆ ಸಂಪೂರ್ಣ ನೈಸರ್ಗಿಕವಾಗಿದ್ದು, ಬಿಸಿ ಆಹಾರ ಬಡಿಸಿದಾಗ ಎಲೆಯ ಮೇಲಿನ ಮೇಣದ ಪದರ ಕರಗಿ ಆಹಾರಕ್ಕೆ ವಿಶಿಷ್ಟ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ: ಬಾಳೆ ಎಲೆಯಲ್ಲಿರುವ ನೈಸರ್ಗಿಕ ಅಂಶಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.

ಪರಿಸರ ಸ್ನೇಹಿ ಮತ್ತು ಸ್ವಚ್ಛ: ಬಾಳೆ ಎಲೆಯನ್ನು ತೊಳೆಯಲು ರಾಸಾಯನಿಕ ಸೋಪುಗಳ ಅಗತ್ಯವಿರುವುದಿಲ್ಲ; ಕೇವಲ ಸ್ವಲ್ಪ ನೀರು ಚಿಮುಕಿಸಿ ಸ್ವಚ್ಛ