Pruthvi Bhat: ಗಾಯಕಿ ಪೃಥ್ವಿ ಭಟ್ ಅದ್ಧೂರಿ ರಿಸೆಪ್ಷನ್, ಘಟಾನುಘಟಿಗಳು ಭಾಗಿ: PHOTOS
ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ರಿಸೆಪ್ಶನ್ಗೆ ನಿರೂಪಕಿ ಅನುಶ್ರೀ, ನಟಿ ಮೋಕ್ಷಿತಾ, ಪೈ, ಬಿಗ್ಬಾಸ್ ಸೀಸನ್ 11ರ ವಿನ್ನರ್, ಗಾಯಕ ಹನುಮಂತ ಲಮಾಣಿ ಬಂದಿದ್ದಾರೆ. ಅಲ್ಲದೇ ಸ್ಟಾರ್ ಗಾಯಕ ವಿಜಯ್ ಪ್ರಕಾಶ್ ದಂಪತಿ, ನಟ ಒಳ್ಳೆ ಹುಡುಗ ಪ್ರಥಮ್, ಸಿಂಗರ್ ಸುನೀಲ್, ಹಂಸಲೇಖ ಅವರ ಪತ್ನಿ ಲತಾ ಹಾಗೂ ಸರಿಗಮಪ ಸ್ಪರ್ಧಿಗಳು ಕೂಡ ಆಗಮಿಸಿದ್ದಾರೆ.

Pruthvi Bhat Reception

ಝೀ ಕನ್ನಡದ ಸರಿಗಮಪ ಗಾಯಕಿ ಪೃಥ್ವಿ ಭಟ್ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಾನು ಪ್ರೀತಿಸಿ ಹುಡುಗನನ್ನು ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಮಗಳ ವಿವಾಹದ ಬಳಿಕ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಲ್ಲಿಂದ ಗಾಯಕಿಯ ಮದುವೆ ವಿವಾದ ವಿಷಯವಾಗಿತ್ತು.

ಪೋಷಕರ ವಿರೋಧದ ನಡುವೆಯೂ ಪೃಥ್ವಿ ಭಟ್ ದೇವಾಲಯದಲ್ಲಿ ಮಾರ್ಚ್ 27 ರಂದು ಅಭಿಷೇಕ್ ಅವರೊಂದಿಗೆ ಮದುವೆಯಾಗಿದ್ದರು. ಇದೀಗ ಗಾಯಕಿ ರಿಸೆಪ್ಶನ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಪೃಥ್ವಿ ಭಟ್ ಹಾಗೂ ಅಭಿಷೇಕ್ ಸಮಾರಂಭ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ರಿಸೆಪ್ಶನ್ಗೆ ನಿರೂಪಕಿ ಅನುಶ್ರೀ, ನಟಿ ಮೋಕ್ಷಿತಾ, ಪೈ, ಬಿಗ್ಬಾಸ್ ಸೀಸನ್ 11ರ ವಿನ್ನರ್, ಗಾಯಕ ಹನುಮಂತ ಲಮಾಣಿ ಬಂದಿದ್ದಾರೆ. ಅಲ್ಲದೇ ಸ್ಟಾರ್ ಗಾಯಕ ವಿಜಯ್ ಪ್ರಕಾಶ್ ದಂಪತಿ, ನಟ ಒಳ್ಳೆ ಹುಡುಗ ಪ್ರಥಮ್, ಸಿಂಗರ್ ಸುನೀಲ್, ಹಂಸಲೇಖ ಅವರ ಪತ್ನಿ ಲತಾ ಹಾಗೂ ಸರಿಗಮಪ ಸ್ಪರ್ಧಿಗಳು ಕೂಡ ಆಗಮಿಸಿದ್ದಾರೆ.

ಇನ್ನೂ ಪೃಥ್ವಿ ಭಟ್ ಮದುವೆಗೆ ಬಂದ ಹನುಮಂತು ಲಮಾಣಿ ಹಾಡನ್ನು ಹಾಡಿ ನವ ಜೋಡಿಗೆ ಖುಷಿ ಪಡಿಸಿದ್ದಾರೆ. ವೇದಿಕೆ ಮೇಲೆ ನಿನ್ನ ಮಾರಿ ನೋಡಂಗ್ ಆಗೈತಿ ಎಂಬ ಫೇಮಸ್ ಸಾಂಗ್ ಅನ್ನು ಹಾಡಿದ್ದಾರೆ. ಹನುಮಂತು ಜೊತೆಗೆ ಪೃಥ್ವಿ ಭಟ್ ಕೂಡ ಹಾಡು ಹಾಡಿದ್ದಾರೆ.

ಝೀ ಕನ್ನಡದ ಸರಿಗಮಪ ಶೋನಲ್ಲಿ ಪೃಥ್ವಿ ಭಟ್ ಭಾಗವಹಿಸಿದ ವೇಳೆ ಅಭಿಷೇಕ್ ಜೊತೆ ಪ್ರೀತಿ ಹುಟ್ಟಿತ್ತು. ಅಭಿಷೇಕ್ ಝೀ ಕನ್ನಡದಲ್ಲಿ ಎಕ್ಸ್ಕ್ಯೂಟಿವ್ ಪ್ರಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದಿಷ್ಟು ವರ್ಷದ ಪ್ರೀತಿಯ ಬಳಿಕ ಪೃಥ್ವಿ ಭಟ್ ಹಾಗೂ ಅಭಿಷೇಕ್ ಇಬ್ಬರೂ ಮದುವೆ ಆಗುವುದಕ್ಕೆ ನಿರ್ಧರಿಸಿದ್ದರು.

ಸರಿಗಮಪ ಆ್ಯಂಕರ್ ಅನುಶ್ರೀ ಜೊತೆ ರಿಸೆಪ್ಷನ್ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಪೃಥ್ವಿ ಭಟ್.