Season Fashion 2026: ಜರ್ದೋಸಿ ವಿನ್ಯಾಸದಲ್ಲಿ ಮರಳಿದ ವೆಲ್ವೆಟ್ ಕುರ್ತಾ ಸೂಟ್
Velvet Kurta Suits: ಈ ಸೀಸನ್ನಲ್ಲಿ ಜರ್ದೋಸಿ ವರ್ಕ್ ಇರುವಂತಹ ಬಗೆಬಗೆಯ ಕಲರ್ನ ವೆಲ್ವೆಟ್ ಕುರ್ತಾ ಸೂಟ್ ಸೆಟ್ಗಳು ಆಗಮಿಸಿವೆ. ಇದ್ಯಾವ ವಿನ್ಯಾಸದ ಬಗೆಯ ಡ್ರೆಸ್? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಹ್ರಿಶಿತಾ ಭಟ್, ನಟಿ -
ಜರ್ದೋಸಿ ವಿನ್ಯಾಸದ ವೆಲ್ವೆಟ್ ಕುರ್ತಾ ಸೂಟ್ ಸೆಟ್ ಡ್ರೆಸ್ಗಳು ಈ ಸೀಸನ್ನಲ್ಲಿ ಟ್ರೆಂಡಿಯಾಗಿವೆ.
ರಾಯಲ್ ಲುಕ್ ನೀಡುವ ವೆಲ್ವೆಟ್ ಕುರ್ತಾ ಸೂಟ್
ಸಾಮಾನ್ಯವಾಗಿ ಯಾವುದೇ ಬಗೆಯ ವೆಲ್ವೆಟ್ ಡ್ರೆಸ್ ಧರಿಸಿದರೂ ಕೂಡ ಅವು ರಾಯಲ್ ಲುಕ್ ನೀಡುತ್ತವೆ. ಅದರಲ್ಲೂ ಜರ್ದೋಸಿ ವಿನ್ಯಾಸದ ವೆಲ್ವೆಟ್ ಕುರ್ತಾ ಸೂಟ್ ಸೆಟ್ಗಳಂತೂ ನಂಬರ್ ವನ್ ಸ್ಥಾನದಲ್ಲಿ ನಿಲ್ಲುತ್ತವೆ. ಅವುಗಳಲ್ಲಿ ರಾಯಲ್ ಬ್ಲ್ಯೂ, ಮಜೆಂತಾ, ಪಿಂಕಿಶ್, ಚಾಕೋಲೇಟ್ ಶೇಡ್ನವು ಹೆಚ್ಚು ಪ್ರಚಲಿತದಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಡೀಸೆಂಟ್ ಪಾರ್ಟೀವೇರ್ ಲಿಸ್ಟ್ನಲ್ಲಿ ವೆಲ್ವೆಟ್ ಕುರ್ತಾ
ಇನ್ನು, ಪಾರ್ಟಿಗಳಲ್ಲಿ ಡೀಸೆಂಟ್ ಲುಕ್ ಬಯಸುವ ಪಾರ್ಟಿ ಪ್ರಿಯ ಮಾನಿನಿಯರಿಗೆಂದೇ ನಾನಾ ಬಗೆಯ ವೆಲ್ವೆಟ್ ಕುರ್ತಾ ಸೂಟ್ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಅವುಗಳಲ್ಲಿ ಈ ಸೀಸನ್ನಲ್ಲಿ ಲಾಂಗ್ ಸ್ಲಿಟ್, ಬಾಡಿಕಾನ್, ಮ್ಯಾಕ್ಸಿ ಶೈಲಿಯವು, ಲಾಂಗ್ ಎ ಲೈನ್ನವು ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ನಮಿತಾ.
ಸೆಲೆಬ್ರಿಟಿಗಳಿಗೂ ಪ್ರಿಯವಾದ ವೆಲ್ವೆಟ್ ಕುರ್ತಾ ಸೂಟ್
ಅಂದಹಾಗೆ, ಇತ್ತೀಚೆಗೆ ಸಾಮಾನ್ಯ ಹುಡುಗಿಯರಿಗೂ ಮಾತ್ರವಲ್ಲ, ಬಾಲಿವುಡ್ ಸೆಲೆಬ್ರಿಟಿಗಳಿಗೂ ಈ ವೆಲ್ವೆಟ್ ಕುರ್ತಾ ಸೂಟ್ಗಳು ಪ್ರಿಯವಾಗತೊಡಗಿವೆ. ಹೈ ಫ್ಯಾಷನ್ನ ಟಾಪ್ ಲಿಸ್ಟ್ಗೂ ಸೇರಿವೆ ಎನ್ನುತ್ತಾರೆ ಡಿಸೈನರ್ ಜಿಮ್ಮಿ.
ಅತ್ಯಾಕರ್ಷಕ ಜರ್ದೋಸಿ ವೆಲ್ವೆಟ್ ಕುರ್ತಾ ಸೂಟ್ ಸೆಟ್
ಇನ್ನು, ಸಾದಾ ಡಿಸೈನ್ನವಕ್ಕಿಂತ ಜರ್ದೋಸಿ ವರ್ಕ್ ಇರುವಂತಹ ವೆಲ್ವೆಟ್ ಕುರ್ತಾ ಸೂಟ್ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ಡಾರ್ಕ್ ಶೇಡ್ನವು ಹೆಚ್ಚು ಚಾಲ್ತಿಯಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಕ್ಕಿ.
ವೆಲ್ವೆಟ್ ಡ್ರೆಸ್ಪ್ರಿಯರಿಗೆ ಟಿಪ್ಸ್
- ಇವುಗಳ ನಿರ್ವಹಣೆ ಬಗ್ಗೆ ಮೊದಲೇ ತಿಳಿದುಕೊಳ್ಳಿ.
- ಹೆಚ್ಚು ವಾಶ್ ಮಾಡಿಸಿದಲ್ಲಿ ಮುದುರಿ ಹೋಗಬಹುದು.
- ಆದಷ್ಟೂ ಡ್ರೈ ವಾಶ್ ಮಾಡುವುದು ಅಗತ್ಯ.
- ಧರಿಸಿದ ನಂತರ ಮಡಿಸಿಡುವ ಬದಲು ಹ್ಯಾಂಗರ್ಗೆ ನೇತು ಹಾಕಿ.
- ಆದಷ್ಟೂ ಸಾಫ್ಟ್ ಫ್ಯಾಬ್ರಿಕ್ನ ವೆಲ್ವೆಟ್ ಡ್ರೆಸ್ ಆಯ್ಕೆ ಮಾಡಿ.
- ಲೈಟ್ವೇಟ್ನವಕ್ಕೆ ಆದ್ಯತೆ ನೀಡಿ.