Star Fashion 2025: ಸ್ಯಾರಿಯಲ್ಲಿ ಬ್ಯೂಟಿಫುಲ್ ಲುಕ್ ಕೊಟ್ಟ ಗಾಯಕಿ ಶ್ರೇಯಾ ಘೋಷಾಲ್
Shreya Ghoshal: ಗಾಯಕಿ ಶ್ರೇಯಾ ಘೋಷಾಲ್ಗೆ ಸೀರೆ ಮೇಲೆ ಲವ್ ಆಗಿದೆಯಂತೆ. ಹೌದು, ಹಾಗೆಂದು ಅವರೇ ಹೇಳಿಕೊಂಡಿದ್ದಾರೆ ಹಾಗಾದ್ರೆ, ಅವರು ಉಟ್ಟಿರುವ ಸೀರೆಯ ವಿಶೇಷತೆಯೇನು? ಇದ್ಯಾವ ಬಗೆಯ ಸೀರೆ? ಫ್ಯಾಷನ್ ಈ ಬಗ್ಗೆ ವಿಮರ್ಶಕರು ಹೇಳುವುದೇನು? ಇಲ್ಲಿದೆ ರಿವ್ಯೂ.
ಗಾಯಕಿ ಶ್ರೇಯಾ ಘೋಷಾಲ್ -
ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ ಅವರಿಗೆ ಸೀರೆ ಮೇಲೆ ಲವ್ ಆಗಿದೆಯಂತೆ. ಹೌದು, ಹಾಗೆಂದು ಅವರೇ ಹೇಳಿಕೊಂಡಿದ್ದಾರೆ. ಇವೆಂಟ್ವೊಂದರಲ್ಲಿ ಅವರು ಉಟ್ಟಿದ್ದ ಸೀರೆ ಮೇಲೆ ಅವರಿಗೆ ಅತಿಯಾದ ಮೋಹ ಉಂಟಾಗಿದೆಯಂತೆ. ಇದಕ್ಕೆ ಕಾರಣವೂ ಇದೆ. ಸೀರೆ ಬ್ಯೂಟಿಫುಲ್ ಆಗಿರುವುದು ಮಾತ್ರವಲ್ಲ, ಅವರ ಇಷ್ಟದ ಫ್ಯಾಬ್ರಿಕ್ ಹಾಗೂ ಕಲರ್ ಇದಾಗಿದೆಯಂತೆ..
ಪಾಸ್ಟೆಲ್ ಶೇಡ್ನ ಅರ್ಗಾನ್ಜಾ ಸೀರೆ
ಗಾಯಕಿ ಶ್ರೇಯಾ ಘೋಷಾಲ್ ಉಟ್ಟಿರುವ ಈ ಸೀರೆ ಸೂಕ್ಷ್ಮ ಫ್ಲೋರಲ್ ವಿನ್ಯಾಸಗಳನ್ನು ಹೊಂದಿದೆ. ನುರಿತ ಆರ್ಟಿಸ್ಟ್ಗಳು ನೇಯ್ದಿರುವ ಸೀರೆ ಇದಾಗಿದ್ದು, ಸೀರೆಯ ತುಂಬೆಲ್ಲಾ ಕಾನನದ ಥೀಮ್ ಡಿಸೈನ್ಗಳನ್ನು ಕಾಣಬಹುದು.
ಸೀರೆಯ ಕಲರ್ ಪಾಸ್ಟೆಲ್ ಆಗಿದ್ದು, ಲೈಟ್ ಪಿಂಕ್ ಶೇಡ್ನ ಈ ಸೀರೆ, ಶೀರ್ ಅರ್ಗಾನ್ಜಾ ಫ್ಯಾಬ್ರಿಕ್ ಹೊಂದಿದೆ. ಸೀರೆಯ ಬಾರ್ಡರ್ ಸೈಡ್ನಲ್ಲಿ , ಸೆರಗಿನಲ್ಲಿ ಮಲ್ಟಿ ಕಲರ್ನ ಥ್ರೆಡ್ ವರ್ಕ್ ವಿನ್ಯಾಸ ಅತ್ಯಾಕರ್ಷಕವಾಗಿದೆ, ಪರಿಣಾಮ ಮಾನಿನಿಯರನ್ನೂ ಕೂಡ ಸೆಳೆದಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ರಾಹುಲ್ ಮಿಶ್ರಾ ಡಿಸೈನ್ನ ಸೀರೆಯಿದು
ಅಂದಹಾಗೆ, ಸೆಲೆಬ್ರೆಟಿ ಡಿಸೈನರ್ ರಾಹುಲ್ ಮಿಶ್ರಾ ಕಸ್ಟಮೈಸ್ ಮಾಡಿರುವ ಸ್ಪೆಷಲ್ ಸೀರೆಯಿದು. ಶ್ರೇಯಾ ಘೋಷಾಲ್ ಅವರ ಅಭಿಲಾಷೆಗೆ ತಕ್ಕಂತೆ ಸೀರೆಯನ್ನು ಸ್ಟೈಲಿಸ್ಟ್ ಮೀರಾ ಸ್ಟೈಲಿಂಗ್ ಮಾಡಿದ್ದಾರೆ. ಇನ್ನು, ಅವರ ಸೀರೆಯ ಬ್ಲೌಸ್ ಸೀರೆಗಿಂತ ಅಂದವಾಗಿದೆ ಎನ್ನುತ್ತಾರೆ ವಿಮರ್ಶಕರು.
ಶ್ರೇಯಾ ಘೋಷಾಲ್ ಮೇಕೋವರ್
ಈ ಸೀರೆಗೆ ಫ್ಯಾಷನ್ ಅಮ್ರಪಾಲಿ ಜ್ಯುವೆಲರಿ ಮ್ಯಾಚ್ ಮಾಡಿರುವ ಶ್ರೇಯಾ, ಮೈಕ್ ಹಿಡಿಯುವ ಸುಂದರ ಕೈಗಳಿಗೆ ಡಿಸೈನರ್ ಹಾಥ್ ಚೈನ್ ಧರಿಸಿದ್ದಾರೆ. ಇದು ಅವರ ಈ ಸ್ಟೈಲಿಂಗ್ನ ವಿಶೇಷತೆ ಎನ್ನಬಹುದು. ಗಾಯಕಿಯರು ಕೂಡ ಇತ್ತೀಚೆಗೆ ತಮ್ಮದೇ ಆದ ಫ್ಯಾಷನ್ ಸ್ಟೇಟ್ಮೆಂಟ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇತ್ತೀಚೆಗೆ ಅವರ ಅಭಿಮಾನಿಗಳನ್ನು ಸೆಳೆಯುವಂತೆ ಮಾಡುತ್ತಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
(ಲೇಖಕಿ : ಫ್ಯಾಷನ್ ಪತ್ರಕರ್ತೆ)