Star Fashion 2025: ವೈಬ್ರೆಂಟ್ ಆರೆಂಜ್ ಶರ್ಟ್ ಡ್ರೆಸ್ಗೆ ಸೈ ಎಂದ ನಟಿ ಪಾವನಾ
Star Fashion 2025: ವೈಬ್ರೆಂಟ್ ಆರೆಂಜ್ ಶೇಡ್ನ ಶರ್ಟ್ ಡ್ರೆಸ್ನಲ್ಲಿ, ಸ್ಯಾಂಡಲ್ವುಡ್ ನಟಿ ಪಾವನಾ ಕಾಣಿಸಿಕೊಂಡಿದ್ದು, ಸೀಸನ್ ಟ್ರೆಂಡ್ಗೆ ಸೈ ಎಂದಿದ್ದಾರೆ. ಅವರ ಈ ವೆಸ್ಟರ್ನ್ ಔಟ್ಫಿಟ್ ಚಾಯ್ಸ್ ಕುರಿತಂತೆ ಖುದ್ದು ಅವರೇ ವಿಶ್ವವಾಣಿ ನ್ಯೂಸ್ನೊಂದಿಗೆ ಹಂಚಿಕೊಂಡಿದ್ದಾರೆ.

ಚಿತ್ರಗಳು: ಪಾವನಾ, ಸ್ಯಾಂಡಲ್ವುಡ್ ನಟಿ., ಫೋಟೋಗ್ರಾಫಿ: ನಾಗರ್ಜುನ್ ಕೆ.ಕೆ.


ವೈಬ್ರೆಂಟ್ ಆರೆಂಜ್ ಶರ್ಟ್ ಡ್ರೆಸ್ನಲ್ಲಿ ಸ್ಯಾಂಡಲ್ವುಡ್ ನಟಿ ಪಾವನಾ ಕಾಣಿಸಿಕೊಂಡಿದ್ದು ಸೀಸನ್ ಫ್ಯಾಷನ್ಗೆ ಸೈ ಎಂದಿದ್ದಾರೆ. ನಟಿ ಪಾವನಾ ಧರಿಸಿರುವ ಈ ವೈಬ್ರೆಂಟ್ ಶೇಡ್ನ ಆರೆಂಜ್ ಶರ್ಟ್ ಅಸ್ಸೆಮ್ಮಿಟ್ರಿಕಲ್ ಡಿಸೈನ್ ಹೊಂದಿದ್ದು, ಬಲೂನ್ ಸ್ಲೀವ್ ಒಳಗೊಂಡಿದೆ. ಜತೆಗೆ ಫ್ರೀ & ಫಿಟ್ ವಿನ್ಯಾಸ ಹೊಂದಿದ್ದು. ಪಾವನಾಗೆ ಹೈ ಫ್ಯಾಷನ್ ಲುಕ್ ನೀಡಿದೆ.

ಇದು ಬಿಸ್ನೆಸ್ವೇರ್ ಎಂದ ಪಾವನಾ
ಪಾವನಾ ಹೇಳುವಂತೆ, ಈ ಆರೆಂಜ್ ಶರ್ಟ್ ಡ್ರೆಸ್, ಬಿಸ್ನೆಸ್ವೇರ್ ಕೆಟಗರಿಯಲ್ಲಿ ಟ್ರೆಂಡಿಯಾಗಿದೆ. ಅಲ್ಲದೇ, ನೋಡಲು ಕಾರ್ಪೋರೇಟ್ ಲುಕ್ ನೀಡುವುದರೊಂದಿಗೆ ನೂರು ಜನರ ಮಧ್ಯೆಯೂ ಹೈಲೈಟ್ ಮಾಡುತ್ತದೆ ಎನ್ನುತ್ತಾರೆ.

ಯೂನಿಕ್ ಆಕ್ಸೆಸರೀಸ್ ಸೆಲೆಕ್ಷನ್
ಶರ್ಟ್ ಡ್ರೆಸ್ ಜತೆಗೆ ಪಾವನಾ ಧರಿಸಿರುವ ಬಟರ್ ಫ್ಲೈ ಇಯರಿಂಗ್ಸ್ ಈ ಔಟ್ಫಿಟ್ಗೆ ಸಖತ್ತಾಗಿ ಮ್ಯಾಚ್ ಆಗಿದೆ. ಇನ್ನು ವೇಸ್ಟ್ ಬ್ಯಾಂಡ್ನಂತೆ ಕಾಣಿಸುವ ಬ್ಲ್ಯಾಕ್ ಕಲರ್ನ ಬೆಲ್ಟ್ ಕೂಡ ಇಡೀ ಡ್ರೆಸ್ ಲುಕ್ಕನ್ನು ರಾಯಲ್ ಆಗಿಸಿದೆ. ನೋಡಲು ಕ್ಲಾಸಿ ಲುಕ್ ಕಲ್ಪಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಪಾವನಾ ಫ್ಯಾಷನ್ ಸ್ಟೇಟ್ಮೆಂಟ್ಸ್
ಇನ್ನು, ಸಾಕಷ್ಟು ಬಾರಿ ಸೀರೆಯಲ್ಲಿ ಕಾಣಿಸಿಕೊಳ್ಳುವ ಪಾವನಾ, ಎಲ್ಲಾ ಬಗೆಯ ಫ್ಯಾಷನ್ ಸ್ಟೇಟ್ಮೆಂಟ್ಗಳಲ್ಲೂ ಆಕರ್ಷಕವಾಗಿ ಕಾಣಿಸುತ್ತಾರೆ. ಎಂದಿನಂತೆ ಈ ಬಾರಿಯೂ ಅವರು ಸಿಂಪಲ್ ಮೇಕಪ್ಗೆ ಓಕೆ ಎಂದಿದ್ದಾರೆ. ಇದು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಶರ್ಟ್ ಡ್ರೆಸ್ ಪ್ರಿಯರಿಗೆ ಪಾವನಾ 5 ಸಿಂಪಲ್ ಸಲಹೆ
- ಶರ್ಟ್ ಡ್ರೆಸ್ಗಳು ಎಲ್ಲಾ ಬಾಡಿ ಮಾಸ್ ಇಂಡೆಕ್ಸ್ ಇರುವವರಿಗೂ ಹೊಂದುತ್ತವೆ.
- ಬೆಲ್ಟ್ ಹಾಗೂ ಆಕ್ಸೆಸರೀಸ್ನಿಂದ ಈ ಡ್ರೆಸ್ಸನ್ನು ಮತ್ತಷ್ಟು ಆಕರ್ಷಕವಾಗಿಸಬಹುದು.
- ವೈಬ್ರೆಂಟ್ ಶೇಡ್ನ ಡ್ರೆಸ್ಗಳು ಸದ್ಯ ಟ್ರೆಂಡ್ ಲಿಸ್ಟ್ನಲ್ಲಿವೆ.
- ಮೇಕಪ್ ಲೈಟಾಗಿದ್ದರೇ ಡ್ರೆಸ್ ಅಂದವಾಗಿ ಕಾಣಿಸುವುದು.
- ಡ್ರೆಸ್ನ ಅಸ್ಸೆಮ್ಮಿಟ್ರಿಕಲ್ ಡಿಸೈನ್ ವೆಸ್ಟರ್ನ್ ಟಚ್ ನೀಡುತ್ತದೆ.