Varamahalaxmi Festival Makeup 2026: ವರಮಹಾಲಕ್ಷ್ಮಿ ಹಬ್ಬದ ಮೇಕಪ್ಗೆ ಇಲ್ಲಿವೆ 5 ಸಿಂಪಲ್ ಐಡಿಯಾ
Varamahalaxmi Festival Makeup 2026: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಡಿಷನಲ್ ಲುಕ್ ನೀಡುವ ಮೇಕಪ್ ನಿಮ್ಮದಾಗಲಿ, ಇದಕ್ಕಾಗಿ ಒಂದಿಷ್ಟು ಸಿಂಪಲ್ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಮೇಕಪ್ ಎಕ್ಸ್ಪರ್ಟ್ ಮಂಗಲಾ ಭಾನಸುಧೆ. ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಚಿತ್ರಕೃಪೆ: ಪಿಕ್ಸೆಲ್ -
ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಡಿಷನಲ್ ಲುಕ್ ನೀಡುವ ಮೇಕಪ್ ನಿಮ್ಮದಾಗಲಿ, ಇದಕ್ಕಾಗಿ ಒಂದಿಷ್ಟು ಸಿಂಪಲ್ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಮೇಕಪ್ ಎಕ್ಸ್ಪರ್ಟ್ ಮಂಗಲಾ ಭಾನಸುಧೆ.
ಟ್ರೆಡಿಷನಲ್ ಲುಕ್ಗೆ ತಕ್ಕಂತಿರಲಿ ಮೇಕಪ್
ನೀವು ಧರಿಸುವ ಟ್ರೆಡಿಷನಲ್ ಉಡುಪು ಹಾಗೂ ಸೀರೆಗೆ ಮೇಕಪ್ ಮ್ಯಾಚ್ ಆಗಬೇಕು. ಸೀರೆಯೊಂದಿಗೆ ಮೇಕಪ್, ಹೇರ್ಸ್ಟೈಲ್ ಹಾಗೂ ಜ್ಯುವೆಲ್ ವೇರ್ ಮಾಡಿದಲ್ಲಿ ಲುಕ್ ಕಂಪ್ಲೀಟ್ ಆಗುವುದು. ಸೀರೆಗಾದಲ್ಲಿ ಮೇಕಪ್ ಕಂಪ್ಲೀಟ್ ಟ್ರೆಡಿಷನಲ್ ಆಗಿ ಕಾಣಿಸುವಂತಿರಬೇಕು. ಇನ್ನು ಸಲ್ವಾರ್ ಕಮೀಝ್, ಗಾಗ್ರ, ಲೆಹೆಂಗಾ, ಲಂಗ-ದಾವಣಿಗಾದಲ್ಲಿ ಕೊಂಚ ನ್ಯಾಚುರಲ್ ಲುಕ್ ನೀಡಬಹುದು.
ನಿಮ್ಮ ಸ್ಕಿನ್ ಟೋನ್ಗೆ ತಕ್ಕಂತೆ ಮೇಕಪ್
ಈ ಹಬ್ಬದಂದು ಮಾಡುವ ಮೇಕಪ್ ಕಣ್ಮನ ಸೆಳೆಯಬೇಕು. ನೋಡುಗರಿಗೆ ಖುಷಿಯಾಗಬೇಕು. ಹಾಗಾಗಿ ಮೇಕಪ್ಮಾಡುವವರು ತಮ್ಮ ಸ್ಕಿನ್ಟೋನ್ಗೆ ಮ್ಯಾಚ್ ಆಗುವ ಮಾನ್ಸೂನ್ ಸೀಸನ್ಗೆ ಸೂಟ್ ಆಗುವಂತದ್ದನ್ನು ಆಯ್ಕೆ ಮಾಡಬೇಕು .
ಬ್ಲಷರ್ಸ್ ಬಳಸಿ
ಹಬ್ಬದಂದು ಧರಿಸುವ ಉಡುಪು ಮತ್ತು ಆಭರಣಗಳಿಗೆ ಹೊಂದುವ ಫೌಂಡೇಷನ್ ಮತ್ತು ಬ್ಲಷರ್ಸ್ ಬಳಸಿದಾಗ ಮುಖದ ಅಂದ ಹೆಚ್ಚುವುದು. ಮ್ಯಾಟ್ ಫಿನಿಶ್ ಫೌಂಡೇಷನ್ ಹಾಗೂ ಗ್ಲಾಸಿ ಲುಕ್ಕೊಡುವ ಬ್ಲಷರ್ಸ್ ಬಳಸುವುದು ಉತ್ತಮ.
ಕಂಗಳ ಐ ಮೇಕಪ್ ಹೀಗಿರಲಿ
ಝಗಮಗಿಸುವ ಸೀರೆಯಾದಲ್ಲಿ ಗೋಲ್ಡನ್ ಅಥವಾ ಸಿಲ್ವರ್ ಕಲರ್ ಫೌಂಡೇಷನ್ ಮತ್ತು ಗ್ಲಿಟರ್ ಐ ಶ್ಯಾಡೋ ಬಳಸಬಹುದು. ಕಣ್ಣಿಗೆ ಐ ಲೈನರ್ ಬಳಸಬಹುದು. ರೆಪ್ಪೆಗಳ ಗಾಢತೆ ಹೆಚ್ಚಿಸಲು ಆರ್ಟಿಫಿಶಿಯಲ್ ಲ್ಯಾಶಸ್ ಸ್ಟಿಕ್ ಮಾಡಬಹುದು. ಕಣ್ಣಿಗೆ ಕಾಡಿಗೆ ಹಬ್ಬದ ಅಂದ ಹೆಚ್ಚಿಸುವುದು.
ಹೊಂದುವ ಲಿಪ್ ಸ್ಟಿಕ್ ಲೇಪಿಸಿ
ಹೆಣ್ಣುಮಕ್ಕಳು ತಮ್ಮ ಸ್ಕಿನ್ಟೋನ್ಗೆ ಹೊಂದುವಂತಹ ಲಿಪ್ಸ್ಟಿಕ್ ಲೇಪಿಸಬೇಕು. ಯಾವುದೇ ಕಾರಣಕ್ಕೂ ಟ್ರೆಂಡ್ ಹೆಸರಲ್ಲಿ ತೀರಾ ತಿಳಿ ಅಥವಾ ಗಾಢ ವರ್ಣದ ಲಿಪ್ ಶೇಡ್ ಬಳಕೆ ಬೇಡ. ಮಾನ್ಸೂನ್ ಸೀಸನ್ನಲ್ಲಿ ಬಂದಿರುವ ಮ್ಯಾಟ್ ಲಿಪ್ ಶೇಡ್ ಬಳಕೆ ಮಾಡಬಹುದು.