Star Fashion 2026: ಜೆನ್ ಜಿ ಫ್ಯಾಷನ್ ಫಾಲೋ ಮಾಡಿದ ಕರಿಷ್ಮಾ ಕಪೂರ್
ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಜೆನ್ ಜಿ ಫ್ಯಾಷನ್ ಫಾಲೋ ಮಾಡಿದ್ದಾರೆ. ಸದ್ಯ ಟ್ರೆಂಡಿಯಾಗಿರುವ ಪ್ಲಾಸ್ಟರ್ ಸ್ಕರ್ಟ್ ಹಾಗೂ ಲ್ಯಾಂಡ್ ಸ್ಕೇಪ್ ಶರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಲುಕ್? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಕರೀಷ್ಮಾ ಕಪೂರ್, ಬಾಲಿವುಡ್ ನಟಿ -
ಬಾಲಿವುಡ್ ನಟಿ ಕರೀಷ್ಮಾ ಜೆನ್ ಜಿ ಫ್ಯಾಷನ್ ಫಾಲೋ ಮಾಡಿದ್ದಾರೆ.
ಕರೀಷ್ಮಾಗೆ ವಯಸ್ಸು ಕೇವಲ ನಂಬರ್
ಅರರೆ... ವಯಸ್ಸು 50 ದಾಟಿದರೂ ಜೆನ್ ಜಿ ಫ್ಯಾಷನ್ನ? ಎಂದು ಯೋಚಿಸುತ್ತಿದ್ದೀರಾ! ಯಾಕಿಲ್ಲ! ಬಾಲಿವುಡ್ ಸೆಲೆಬ್ರೆಟಿಗಳಿಗೆ ವಯಸ್ಸು ಕೇವಲ ನಂಬರ್ ಅಷ್ಟೇ! ತಮ್ಮ ಬಾಡಿ ಮಾಸ್ ಇಂಡೆಕ್ಸ್ ಹಾಗೂ ಫಿಟ್ನೆಸ್ ಕಾಪಾಡಿಕೊಂಡಿರುವ ಅವರು ಮುಲಾಜಿಲ್ಲದೇ ಯಾವುದೇ ಫ್ಯಾಷನ್ ಬೇಕಾದರೂ ಫಾಲೋ ಮಾಡಬಲ್ಲರು! ಅದು ಕೂಡ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳಬಲ್ಲರು, ಅದೇ ಲಿಸ್ಟ್ಗೆ ನಟಿ ಕರೀಷ್ಮಾ ಕಪೂರ್ ಕೂಡ ಸೇರುತ್ತಾರೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.
ಫ್ಯಾಷನೆಬಲ್ ಕರೀಷ್ಮಾ
ಇನ್ನು, ಅವರು ಹೇಳುವುದರಲ್ಲೂ ಅರ್ಥವಿದೆ. ಕರೀಷ್ಮಾ ಕಪೂರ್ ಇಂದಿಗೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರುವುದು ಮಾತ್ರವಲ್ಲ, ಸದಾ ಪ್ರಸ್ತುತ ಫ್ಯಾಷನ್ ಫಾಲೋ ಮಾಡುತ್ತಿರುತ್ತಾರೆ. ಅಲ್ಲದೇ ಸಾಕಷ್ಟು ಫ್ಯಾಷನ್ ಶೂಟ್ಗಳಲ್ಲಿಯೂ ಕೂಡ ಸದ್ಯ ಟ್ರೆಂಡಿಯಾಗಿರುವ ಔಟ್ಫಿಟ್ಗಳನ್ನೇ ಧರಿಸುತ್ತಾರೆ ಎಂದಿದ್ದಾರೆ ಫ್ಯಾಷನ್ ಎಕ್ಸ್ಪರ್ಟ್ಸ್ ರಜತ್ ಹಾಗೂ ದಿವಿನ್.
ಕರೀಷ್ಮಾ ಧರಿಸಿರುವ ಔಟ್ಫಿಟ್
ಅಂದಹಾಗೆ, ಕರೀಷ್ಮಾ ಕಪೂರ್ ಧರಿಸಿರುವ ಔಟ್ಫಿಟ್ ಈ ಸಮ್ಮರ್ ಔಟ್ಫಿಟ್ ಎನ್ನಬಹುದು. ದೊಗಲೆಯಾಗಿ ಕಾಣಿಸುವ ರಾಯಲ್ ಬ್ಲ್ಯೂ ಶೇಡ್ನ ಲ್ಯಾಂಡ್ ಸ್ಕೇಪ್ ಶರ್ಟ್ ಹಾಗೂ ಪ್ಲಾಸ್ಟರ್ ಸ್ಕರ್ಟ್ ಅನ್ನು ಕರೀಷ್ಮಾ ಧರಿಸಿದ್ದು, ಸಾಕಷ್ಟು ಫ್ಯಾಷನ್ ಪೋಸ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕರೀಷ್ಮಾ ಕಮಾಲ್
ತುಂಬು ತೋಳಿನ ಈ ಬ್ಲ್ಯೂ ಮತ್ತು ಬ್ಲ್ಯಾಕ್ ಕಲರ್ನ ಲ್ಯಾಂಡ್ ಸ್ಕೇಪ್ ಬಟನ್ ಶರ್ಟ್ ಹಾಗೂ ಅದರೊಂದಿಗೆ ಧರಿಸಿರುವ ಪ್ಲಾಸ್ಟರ್ ಸ್ಕರ್ಟ್ ಅವರ ಲುಕ್ಕನ್ನು ಡಿಫರೆಂಟಾಗಿಸಿದೆ. ಕರೀಷ್ಮಾ ಕೂಡ ಜೆನ್ ಜಿ ಫ್ಯಾಷನ್ ಫಾಲೋ ಮಾಡುತ್ತಿರುವುದನ್ನು ಪ್ರೂವ್ ಮಾಡಿದೆ ಎನ್ನುವ ಫ್ಯಾಷನ್ ಎಕ್ಸ್ಪರ್ಟ್ಸ್ ಕರೀಷ್ಮಾ ಫ್ಯಾಷನ್ ಸೆನ್ಸ್ ಸದಾ ಚೆನ್ನಾಗಿಯೇ ಇದೆ ಎಂದು ಪ್ರಶಂಸಿಸಿದ್ದಾರೆ.