Star Fashion 2026: ವಿಂಟರ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಬಾಡಿಕಾನ್ ಡ್ರೆಸ್
Bodycon Dresses: ಇತ್ತೀಚೆಗೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಧರಿಸಿದ್ಧ, ಬಾಡಿಕಾನ್ ಡ್ರೆಸ್ಗಳು ಈ ಸೀಸನ್ನಲ್ಲಿ ಸಖತ್ ಟ್ರೆಂಡಿಯಾಗಿವೆ. ಮೊದಲಿಗಿಂತ ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಔಟ್ಫಿಟ್ ಆಯ್ಕೆ ಮತ್ತು ಸ್ಟೈಲಿಂಗ್ ಹೇಗೆ? ಇಲ್ಲಿದೆ ವಿವರ.
ಚಿತ್ರಗಳು: ರಕುಲ್ ಪ್ರೀತ್ ಸಿಂಗ್ ಯಾದವ್, ಬಾಲಿವುಡ್ ನಟಿ -
ಈ ಬಾರಿಯ ವಿಂಟರ್ ಸೀಸನ್ನಲ್ಲಿ ವೈವಿಧ್ಯಮಯ ಪಾರ್ಟಿವೇರ್ ಬಾಡಿಕಾನ್ ಡ್ರೆಸ್ಗಳು ಯುವತಿಯರನ್ನು ಆವರಿಸಿಕೊಂಡಿವೆ. ಟ್ರೆಂಡಿಯಾಗಿವೆ. ಮೊದಲಿಗಿಂತ ಬೇಡಿಕೆ ಸೃಷ್ಟಿಸಿಕೊಂಡಿವೆ.
ರಕುಲ್ ಪ್ರೀತ್ ಸಿಂಗ್ ಬಾಡಿಕಾನ್ ಡ್ರೆಸ್
ಹೌದು, ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ನಟಿ ರಕುಲ್ ಪ್ರೀತ್ ಸಿಂಗ್ ಫೋಟೋಶೂಟ್ ಮಾಡಿಸಿದ್ದ ಬಾಡಿಕಾನ್ ಡ್ರೆಸ್ಗಳಂತೂ ಆನ್ಲೈನ್ನಲ್ಲಿ ಕಡ್ಲೆಪುರಿಯಂತೆ ಬಿಕರಿಗೊಳ್ಳುತ್ತಿವೆ. ಆ ಮಟ್ಟಿಗೆ ಈ ಡ್ರೆಸ್ಗಳು ಯುವತಿಯರನ್ನು ಆಕರ್ಷಿಸಿವೆ.
ವೀಕೆಂಡ್ ಪಾರ್ಟಿಗಳಲ್ಲಿ ಮಾತ್ರವಲ್ಲ, ಔಟಿಂಗ್ಗಳಲ್ಲೂ ಈ ಶೈಲಿಯ ಬಾಡಿಕಾನ್ ಔಟ್ಫಿಟ್ಗಳು ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ಬಾಡಿಕಾನ್ ಡ್ರೆಸ್ಗಳೆಂದರೇನು?
ಮೈಗಂಟಿಕೊಂಡಂತಹ ವಿನ್ಯಾಸ ಹೊಂದಿರುವ ಡ್ರೆಸ್ಗಳೇ ಬಾಡಿಕಾನ್ ಡ್ರೆಸ್ಗಳು. ಪ್ರತಿ ವಿಂಟರ್ ಸೀಸನ್ನಲ್ಲೂ ಇವು ಡಿಫರೆಂಟ್ ವಿನ್ಯಾಸದಲ್ಲಿ, ಬೆಚ್ಚಗಿಡುವ ಫ್ಯಾಬ್ರಿಕ್ನಲ್ಲಿ ಬಿಡುಗಡೆಗೊಳ್ಳುತ್ತವೆ. ಇನ್ನು ವೀಕೆಂಡ್ ಪಾರ್ಟಿವೇರ್ ಕೆಟಗರಿಯಲ್ಲಿ ಸಿಕ್ವೀನ್ಸ್, ಕ್ರಿಸ್ಟಲ್ಸ್, ಸ್ಟೋನ್ ಡಿಸೈನ್, ಜೆಮೆಟ್ರಿಕಲ್ ಸಿಕ್ವೀನ್ಸ್., ಹೀಗೆ ನಾನಾ ಬಗೆಯ ಡಿಸೈನ್ನಲ್ಲಿ ವಿನ್ಯಾಸಗೊಂಡು ಪ್ರಚಲಿತದಲ್ಲಿರುತ್ತವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್ಪರ್ಟ್ ರೀಟಾ.
ಬಾಡಿಕಾನ್ ಡ್ರೆಸ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್
- ನಿಮ್ಮ ಬಾಡಿ ಮಾಸ್ ಇಂಡೆಕ್ಸ್ಗೆ ಹೊಂದುವಂತಹದ್ದನ್ನೇ ಆಯ್ಕೆ ಮಾಡಿ.
- ಪ್ಲಂಪಿಯಾಗಿದ್ದಲ್ಲಿ ಆದಷ್ಟೂ ಒಂದು ಸೈಝ್ ದೊಡ್ಡದ್ದನ್ನು ಪ್ರಿಫರ್ ಮಾಡಿ.
- ವಿಂಟರ್ನಲ್ಲಿ ಬೆಚ್ಚಗಿಡುವ ಫ್ಯಾಬ್ರಿಕ್ನ ಬಾಡಿಕಾನ್ ಡ್ರೆಸ್ ಆಯ್ಕೆ ಉತ್ತಮ.
- ಪಾರ್ಟಿವೇರ್ ಬಾಡಿಕಾನ್ ಡ್ರೆಸ್ಗಳು ಮಿನುಗುವ ವಿನ್ಯಾಸ ಹೊಂದಿರಲಿ.
- ಬಾಡಿಕಾನ್ ಡ್ರೆಸ್ಗೆ ಬೆಚ್ಚಗಿಡುವ ವಾರ್ಮರ್ ಸ್ಟಾಕಿಂಗ್ಸ್ ಧರಿಸಬಹುದು.
- ನಾನಾ ಬಗೆಯಲ್ಲಿ ಬಾಡಿಕಾನ್ ಡ್ರೆಸ್ಗೆ ಮಿಕ್ಸ್ -ಮ್ಯಾಚ್ ಮಾಡಿ ಡಿಫರೆಂಟ್ ಸ್ಟೈಲಿಂಗ್ನಲ್ಲಿ ಧರಿಸಬಹುದು.
- ಬಾಡಿಕಾನ್ ಡ್ರೆಸ್ಗಳು ಲೆಕ್ಕವಿಲ್ಲದಷ್ಟು ಬಗೆಯ ವಿನ್ಯಾಸದಲ್ಲಿ ಲಭ್ಯ.
- ಇವುಗಳ ಮೇಲೆ ಲೇಯರ್ ಲುಕ್ ಮಾಡಲು ಸಾಧ್ಯವಿಲ್ಲ ಎಂಬುದು ನೆನಪಿರಲಿ.