Summer Fashion 2026: ಸಮ್ಮರ್ ಸ್ಲಿಟ್ ಮ್ಯಾಕ್ಸಿಗೂ ಸಿಕ್ತು ಗ್ಲಾಮರ್ ಟಚ್
Summer slit maxi: ಸಮ್ಮರ್ನಲ್ಲಿ ಟ್ರೆಂಡಿಯಾಗಿರುವ ಮ್ಯಾಕ್ಸಿಗಳಿಗೂ ಇದೀಗ ಗ್ಲಾಮರ್ ಟಚ್ ಸಿಕ್ಕಿದೆ. ನೋಡಲು ಕಟೌಟ್ ಆದಂತೆ ಕಾಣಿಸುವ ಈ ಸ್ಲಿಟ್ ಮ್ಯಾಕ್ಸಿಗಳು ಯುವತಿಯರನ್ನು ಸವಾರಿ ಮಾಡತೊಡಗಿವೆ. ಇದ್ಯಾವ ಬಗೆಯ ಔಟ್ಫಿಟ್? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ನಿಕ್ಕಿ ತಂಬೊಲಿ, ನಟಿ -
ಮ್ಯಾಕ್ಸಿಗಳು ಇದೀಗ ಸ್ಲಿಟ್ ಆಗಿವೆ. ಗ್ಲಾಮರ್ ಟಚ್ ಪಡೆದಿವೆ. ಅಷ್ಟೇಕೆ? ವೈಬ್ರೆಂಟ್ ಆಗಿ ಲಗ್ಗೆ ಇಟ್ಟಿವೆ.
ಬಿಂದಾಸ್ ಲುಕ್ ನೀಡುವ ಮ್ಯಾಕ್ಸಿ
ಹೌದು, ಈ ಸಮ್ಮರ್ನಲ್ಲಿ ಟ್ರೆಂಡಿಯಾಗಿರುವ ಮ್ಯಾಕ್ಸಿಗಳಿಗೆ ಇದೀಗ ಗ್ಲಾಮರ್ ಟಚ್ ಸಿಕ್ಕಿದೆ. ಸೆಲೆಬ್ರೆಟಿ ಲುಕ್ ದೊರಕಿದೆ. ಧರಿಸಿದಾಗ ನೋಡಲು ಕಟೌಟ್ ಆದಂತೆ ಕಾಣಿಸುವ ಬಿಂದಾಸ್ ಲುಕ್ ನೀಡುವ ಸ್ಲಿಟ್ ಮ್ಯಾಕ್ಸಿಗಳು ಸದ್ಯ ವೆಕೇಷನ್ ಪ್ರಿಯ ಹುಡುಗಿಯರಿಗೆ ಹಾಟ್ ಲುಕ್ ನೀಡಿವೆ.
ನಿಕ್ಕಿ ತಂಬೊಲಿ ವೈಬ್ರೆಂಟ್ ಮ್ಯಾಕ್ಸಿ
ಇದಕ್ಕೆ ಪೂರಕ ಎಂಬಂತೆ, ಸದಾ ಹಾಟ್ ಲುಕ್ನಲ್ಲೆ ಕಾಣಿಸಿಕೊಳ್ಳುವ ನಟಿ ನಿಕ್ಕಿ ತಂಬೋಲಿ ತಮ್ಮ ವೆಕೇಷನ್ ಮೋಡ್ನಲ್ಲಿ ಧರಿಸಿದ್ಧ ವೈಬ್ರೆಂಟ್ ಲೈಮ್ ಯೆಲ್ಲೋ ಶೇಡ್ನ ಸ್ಲಿಟ್ ಮ್ಯಾಕ್ಸಿ ಕೇವಲ ಫಾಲೋವರ್ಗಳನ್ನು ಮಾತ್ರವಲ್ಲ, ಅಲ್ಟ್ರಾ ಮಾರ್ಡನ್ ಹುಡುಗಿಯರನ್ನು ಸೆಳೆದಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಆನ್ಲೈನ್ನಲ್ಲಿ ಇದ್ದಕ್ಕಿಂದ್ದಂತೆ ಈ ಶೈಲಿಯ ಗ್ಲಾಮರಸ್ ಮ್ಯಾಕ್ಸಿಗಳ ಬೇಡಿಕೆ ಹೆಚ್ಚಾಗಿ ಬೆಲೆ ಕೂಡ ಏರಿತ್ತು ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರಾದ ರಾಕಿ.
ಸ್ಲಿಟ್ ಮ್ಯಾಕ್ಸಿ ವಿಶೇಷತೆ
ಈ ಸೀಸನ್ನಲ್ಲಿ ಆಗಮಿಸುತ್ತಿರುವ ಮ್ಯಾಕ್ಸಿಗಳಿಗೆ ಸರಿಯಾದ ಶೇಪ್ ಇಲ್ಲ! ಗ್ಲಾಮರಸ್ ಹೆಸರಲ್ಲಿ, ಬಾಡಿ ಮಾಸ್ ಇಂಡೆಕ್ಸ್ ಪ್ರದರ್ಶಿಸುವಂತಹ ಡಿಸೈನ್ನಲ್ಲಿ ಬಂದಿವೆ. ಸ್ಲಿಟ್ ಶೈಲಿಯ ಮ್ಯಾಕ್ಸಿ ವಿನ್ಯಾಸದಲ್ಲಿ ಬಂದಿವೆ. ಇವು ಕಾಲಿನ ಸೌಂದರ್ಯವನ್ನು ಪ್ರದರ್ಶಿಸುತ್ತವೆ. ಫೋಟೋಶೂಟ್ ಹಾಗೂ ರೀಲ್ಸ್ನಲ್ಲಿ ಆಕರ್ಷಕವಾಗಿ ಬಿಂಬಿಸುತ್ತವೆ. ಹಾಗಾಗಿ ಈ ಶೈಲಿಯ ಮ್ಯಾಕ್ಸಿಗಳು ಇಂದು ಯುವತಿಯರನ್ನು ಸೆಳೆದಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಬೀಚ್ಸೈಡ್ ಫ್ಯಾಷನ್ಗೆ ಸಾಥ್
ಬೀಚ್ ಸೈಡ್ ಫೋಟೋಶೂಟ್ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸುವ ಈ ಮ್ಯಾಕ್ಸಿಗಳು ಸದ್ಯ ಈ ಸೀಸನ್ನ ವೆಕೇಷನ್ ಫ್ಯಾಷನ್ನಲ್ಲಿ ಹಂಗಾಮ ಎಬ್ಬಿಸಿವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್ಪರ್ಟ್ಸ್.