Republic Day Tableau: ಗಣರಾಜ್ಯೋತ್ಸವಕ್ಕೆ ಮೆರಗು ತಂದ ಸ್ತಬ್ಧಚಿತ್ರಗಳು; ಇಲ್ಲಿದೆ ನೋಡಿ ಫೋಟೊ ಗ್ಯಾಲರಿ
ದೇಶಾದ್ಯಂತ ಸೋಮವಾರ 77ನೇ ಗಣರಾಜ್ಯೋತ್ಸವ ಆಚರಿಸಲಾಗಿದೆ. ಅದರಲ್ಲಿಯೂ ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಪಥ ಸಂಚಲನ ಗಮನ ಸೆಳೆದಿದೆ. ಇಲ್ಲಿ ಪ್ರದರ್ಶಿಸಲಾದ ವೈವಿಧ್ಯಪೂರ್ಣ ಸ್ತಬ್ಧ ಚಿತ್ರಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿವೆ. ಈ ಬಾರಿ 30 ಸ್ತಬ್ಧಚಿತ್ರಗಳು ಭಾಗವಹಿಸಿದರೆ, ಸುಮಾರು 2,500 ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಾಯಿತು. ಸುಮಾರು 10,000 ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ -
ಆಪರೇಷನ್ ಸಿಂದೂರ್
ಪಾಕಿಸ್ತಾನದ ವಿರುದ್ಧ ಭಾರತ ಕಳೆದ ವರ್ಷ ಮೇಯಲ್ಲಿ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ನಮ್ಮ ಸೇನೆ ಬಳಸಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪ್ರದರ್ಶನವು ಈ ಬಾರಿಯ ಪ್ರಮುಖ ಆಕರ್ಷಣೆ ಎನಿಸಿಕೊಂಡಿತು.
ಶಿಸ್ತುಬದ್ಧ ಪರೇಡ್
77ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯಪಥದಲ್ಲಿ ಆಯೋಜಿಸಿದ್ದ ಪರೇಡ್ ಎಂದಿನಂತೆ ಗಮನ ಸೆಳೆಯಿತು.
ಪಂಜಾಬ್
ಪಂಜಾಬ್ನ ಸ್ತಬ್ಧ ಚಿತ್ರವು 9ನೇ ಸಿಖ್ ಗುರು, ಹಿಂದ್ ದಿ ಚಾದರ್ ಎಂದು ಪೂಜಿಸಲ್ಪಡುವ - ಮಾನವ ಆತ್ಮಸಾಕ್ಷಿ, ನಂಬಿಕೆ ಮತ್ತು ಸ್ವಾತಂತ್ರ್ಯದ ರಕ್ಷಕ ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಜಿ ಅವರ 350ನೇ ಹುತಾತ್ಮ ವರ್ಷಕ್ಕೆ ಗಂಭೀರ ಗೌರವ ಸಲ್ಲಿಸಿದೆ.
ಒಡಿಶಾ
ಮಣ್ಣಿನಿಂದ ಸಿಲಿಕಾನ್ ಎಂಬ ಥೀಮ್ನೊಂದಿಗೆ ಒಡಿಶಾದ ಸ್ತಬ್ಧ ಚಿತ್ರ ಕೃಷಿಯಿಂದ ಹೈಟೆಕ್ ನಾವೀನ್ಯತೆ ಬೆಳವಣಿಗೆಯವರೆಗಿನ ರಾಜ್ಯದ ಪ್ರಯಾಣದ ಮೇಲೆ ಬೆಳಕು ಚೆಲ್ಲಿದೆ.
ಮಧ್ಯ ಪ್ರದೇಶ
ಮಧ್ಯ ಪ್ರದೇಶವು ಟ್ಯಾಬ್ಲೋದಲ್ಲಿ ಇಂದೋರ್ನ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಅವರನ್ನು ಚಿತ್ರಿಸಿದೆ.
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ "ಸ್ವತಂತ್ರತ ಕಾ ಮಂತ್ರ - ವಂದೇ ಮಾತರಂ" ಸ್ತಬ್ಧ ಚಿತ್ರ ಹಾಡಿನ 150ನೇ ವಾರ್ಷಿಕೋತ್ಸವವನ್ನು ನೆನೆಪಿಸಿದೆ. ಜತೆಗೆ ಹಾಡು ಬರೆದ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರನ್ನು ಗೌರವಿಸಿದೆ.
ಅಸ್ಸಾಂ
ಅಸ್ಸಾಂ ತನ್ನ ಸ್ತಬದ್ಧ ಚಿತ್ರದಲ್ಲಿ ಆಶಾರಿಕಂಡಿ - ಟೆರಾಕೋಟಾ ಕರಕುಶಲ ಗ್ರಾಮವನ್ನು ಪ್ರದರ್ಶಿಸಿದೆ.
ಕೇರಳ
ಕೊಚ್ಚಿಯ ವಾಟರ್ ಮೆಟ್ರೋ ಮತ್ತು ಶೇಕಡಾ 100ರಷ್ಟು ಡಿಜಿಟಲ್ ಸಾಕ್ಷರತೆ. ಆತ್ಮನಿರ್ಭರ ಭಾರತಕ್ಕಾಗಿ ಆತ್ಮನಿರ್ಭರ ಕೇರಳ.