Wedding Fashion: ವೆಡ್ಡಿಂಗ್ ಫ್ಯಾಷನ್ನಲ್ಲಿ ಮಹಿಳೆಯರನ್ನು ಸೆಳೆದ ಮಲ್ಟಿ ಕಲರ್ಡ್ ಡಿಜಿಟಲ್ ಪ್ರಿಂಟೆಡ್ ಸೀರೆಗಳು
ಈ ಬಾರಿಯ ವೆಡ್ಡಿಂಗ್ ಸೀಸನ್ನಲ್ಲಿ ಮಲ್ಟಿ ಕಲರ್ಡ್ ಡಿಜಿಟಲ್ ಸೀರೆಗಳು ಟ್ರೆಂಡಿಯಾಗಿವೆ. ನೋಡಲು ಗ್ರ್ಯಾಂಡ್ ಲುಕ್ ನೀಡುವ ಈ ಸೀರೆಗಳು ಸದ್ಯ ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ಯಾವ್ಯಾವ ಡಿಸೈನ್ನವು ಟ್ರೆಂಡಿಯಾಗಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಶ್ರೀಮುಖಿ, ನಟಿ -
ಈ ವೆಡ್ಡಿಂಗ್ ಸೀಸನ್ನಲ್ಲಿ ವರ್ಣಮಯ ಪ್ರಿಂಟೆಡ್ ಡಿಜಿಟಲ್ ಸೀರೆಗಳು ಸಖತ್ ಟ್ರೆಂಡಿಯಾಗಿವೆ. ಸೀರೆ ಲೋಕದಲ್ಲಿ ಹಂಗಾಮ ಎಬ್ಬಿಸಿವೆ. ಹೌದು, ಈ ಬಾರಿಯ ವೆಡ್ಡಿಂಗ್ ಸೀಸನ್ನಲ್ಲಿ ಬಗೆಬಗೆಯ ಮಲ್ಟಿ ಕಲರ್ಡ್ ಡಿಜಿಟಲ್ ಸೀರೆಗಳು, ಸೀರೆ ಲೋಕದಲ್ಲಿ ಟ್ರೆಂಡಿಯಾಗಿದ್ದು, ಗ್ರ್ಯಾಂಡ್ ಲುಕ್ ಬಯಸುವ ಮಹಿಳೆಯರನ್ನು ಸವಾರಿ ಮಾಡತೊಡಗಿವೆ.
ವೈವಿಧ್ಯಮಯ ಡಿಜಿಟಲ್ ಸೀರೆಗಳು
ಅಂದಹಾಗೆ, ಈ ಡಿಜಿಟಲ್ ಪ್ರಿಂಟೆಡ್ ಸೀರೆಗಳು ಲೆಕ್ಕವಿಲ್ಲದಷ್ಟು ಬಗೆಯಲ್ಲಿ ಸೀರೆ ಲೋಕದಲ್ಲಿ ಬಿಡುಗಡೆಗೊಂಡಿದ್ದು, ರೇಷ್ಮೆ ಸೀರೆಯಷ್ಟೇ ಗ್ರ್ಯಾಂಡ್ ಲುಕ್ ನೀಡುವಂತಹ ವಿನ್ಯಾಸಗಳಲ್ಲಿ ಬಂದಿವೆ. ಅಲ್ಲದೇ, ಕೈಗೆಟಕುವ ಬೆಲೆಯಲ್ಲಿ ದೊರಕುತ್ತಿವೆ ಎನ್ನುತ್ತಾರೆ ಸೀರೆ ಎಕ್ಸ್ಪರ್ಟ್ ರಾಶಿ ಮತ್ತು ಸೈಯಾರಾ.
ಟ್ರೆಂಡಿಯಾಗಿರುವ ಸೀರೆಗಳಿವು
ಮಲ್ಟಿ ಕಲರ್ ಪ್ರಿಂಟ್ಸ್ ಇರುವ ಡಿಜಿಟಲ್ ಸೀರೆಗಳಲ್ಲಿ ಇದೀಗ ಶಿನಾನ್ ಸಿಲ್ಕ್, ಶಿಫಾನ್, ಕ್ರೇಪ್ ಫ್ಯಾಬ್ರಿಕ್ನವು ಹೆಚ್ಚು ಪ್ರಚಲಿತದಲ್ಲಿವೆ. ಇವುಗಳ ಮೇಲೆ ಮಿರರ್ ವರ್ಕ್, ಎಂಬ್ರಾಯ್ಡರಿ ವರ್ಕ್, ಕುಂದನ್ ಸೇರಿದಂತೆ ನಾನಾ ಬಗೆಯ ಡಿಸೈನ್ನ್ ಮಾಡಿದಂತವು ಈ ವೆಡ್ಡಿಂಗ್ ಸೀಸನ್ನಲ್ಲಿ ಹೆಣ್ಣುಮಕ್ಕಳನ್ನು ಆಕರ್ಷಿಸುತ್ತಿವೆ. ಈ ಡಿಸೈನ್ನವನ್ನು ಹೊರತುಪಡಿಸಿದಲ್ಲಿ ಫ್ಲೋರಲ್ ಪ್ರಿಂಟ್ಸ್ ಹಾಗೂ ಟ್ರಾಪಿಕಲ್ ಪ್ರಿಂಟ್ಸ್ ಮತ್ತು ಕಲಾಂಕಾರಿ ಪ್ರಿಂಟ್ಸ್ನವು ಕೂಡ ಈ ಡಿಜಿಟಲ್ ವಿನ್ಯಾಸದಲ್ಲಿ ಎಂಟ್ರಿ ನೀಡಿ ಹಿಟ್ ಲಿಸ್ಟ್ ಸೇರಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಜಿ. ಅವರ ಪ್ರಕಾರ, ಈ ಶೈಲಿಯ ಸೀರೆಗಳು ಕೇವಲ ಸಾಮಾನ್ಯ ವರ್ಗದವರನ್ನು ಮಾತ್ರವಲ್ಲ, ಕಾರ್ಪೋರೇಟ್ ವರ್ಗದ ಮಾನಿನಿಯರನ್ನು ಕೂಡ ಸೆಳೆಯುತ್ತಿವೆ ಎನ್ನುತ್ತಾರೆ.
ಸೀರೆ ಹೈಲೈಟ್ ಮಾಡುವ ಎಂಬಾಲಿಶ್ಮೆಂಟ್ಸ್
ಈ ಸೀರೆಗಳ ವಿಶೇಷತೆಯೆಂದರೇ, ನಾನಾ ಬಗೆಯ ಡಿಸೈನ್ಸ್, ಅದರಲ್ಲೂ ಚಿಕ್ಕ ಮಿರರ್ ಇರುವಂತಹ ಎಂಬಾಲಿಶ್ಮೆಂಟ್ಸ್ ಇರುವಂತಹ ವಿನ್ಯಾಸಗಳು ಈ ಸೀರೆಯ ಹೈಲೈಟ್. ಇದರಿಂದಾಗಿ ಇಡೀ ಸೀರೆಯ ಲುಕ್ ಗ್ರ್ಯಾಂಡ್ ಆಗಿ ಕಾಣಿಸುತ್ತದೆ. ಹಾಗಾಗಿ ಸಾಕಷ್ಟು ಮಹಿಳೆಯರು ಮದುವೆ ಮನೆಯಲ್ಲಿ ರೇಷ್ಮೆ ಸೀರೆಯನ್ನು ಉಡುವ ಬದಲು ಇವುಗಳನ್ನೇ ಕೊಂಡು ಉಡುತ್ತಿದ್ದಾರೆ ಎನ್ನುತ್ತಾರೆ ಸೀರೆ ಡಿಸೈನರ್ಗಳು.
ಡಿಜಿಟಲ್ ಪ್ರಿಂಟೆಡ್ ಡಿಸೈನರ್ ಸೀರೆಗಳ ನಿರ್ವಹಣೆ ಹೀಗಿರಲಿ
- ಇವುಗಳನ್ನು ಉಟ್ಟ ನಂತರ ನೆರಳಿನಲ್ಲಿ ಒಣಗಿಸಿ, ಹ್ಯಾಂಗರ್ನಲ್ಲಿ ನೇತುಹಾಕಿ.
- ಆದಷ್ಟೂ ಇತರೇ ಸೀರೆಗಳ ಜತೆಗೆ ಮಡಿಚಿಡಬೇಡಿ.
- ಡಿಸೈನರ್ ಸೀರೆಯಾಗಿರುವುದರಿಂದ ಮನೆಯಲ್ಲಿ ವಾಶ್ ಮಾಡಬೇಡಿ.
- ಈ ಸೀರೆಗಳ ಜತೆ ಸಿಲುಕಿ ಹಾಕಿಕೊಳ್ಳುವಂತಹ ಆಭರಣಗಳನ್ನು ಧರಿಸಬೇಡಿ.
- ಈ ಸೀರೆಯು ಮಲ್ಟಿ ಕಲರ್ನಲ್ಲಿರುವುದರಿಂದ ಆದಷ್ಟೂ ಟ್ರೆಂಡಿಯಾಗಿರುವ ಕಲರ್ನವನ್ನು ಆಯ್ಕೆ ಮಾಡಿ.