Photos: ವಿದೇಶದಲ್ಲಿ ಅದ್ಧೂರಿಯಾಗಿ ನಡೆಯಿತು ನಟ ಅರ್ಜುನ್ ಸರ್ಜಾ 2ನೇ ಮಗಳು ಅಂಜನಾ ಮದುವೆ; ವರನ್ಯಾರು ಗೊತ್ತೇ?
ದಕ್ಷಿಣ ಭಾರತದ ಖ್ಯಾತ ನಟ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್, ತಮ್ಮ ಬಹುಕಾಲದ ವಿದೇಶಿ ಪ್ರಿಯಕರ ಇಸಾಯ್ ನಟ್ಟರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುದೀರ್ಘ 14 ವರ್ಷಗಳ ಪ್ರೀತಿಗೆ ಎರಡೂ ಕುಟುಂಬಗಳು ಸಮ್ಮತಿ ಸೂಚಿಸಿದ್ದು, ಅಕ್ಟೋಬರ್ 19ರಂದು ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಅದ್ಧೂರಿ ವಿವಾಹ ನೆರವೇರಿದೆ. ತಮ್ಮ ಬಹುಕಾಲದ ಸ್ನೇಹಿತ ಇಸಾಯ್ ಜೊತೆ ಸಪ್ತಪದಿ ತುಳಿದಿರುವ ಅಂಜನಾ, ಇದೀಗ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಸುಂದರ ಫೋಟೋ ಆಲ್ಬಮ್ ಇಲ್ಲಿದೆ ನೋಡಿ.
-
ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅವರ ವಿವಾಹ ಮಹೋತ್ಸವ ಅತ್ಯಂತ ವೈಭವದಿಂದ ನೆರವೇರಿದೆ.
ಹಿರಿಯರು, ಆಪ್ತರು ಮತ್ತು ಬಂಧು-ಮಿತ್ರರ ಸಾಕ್ಷಿಯಾಗಿ ನವದಂಪತಿ ಸಪ್ತಪದಿ ತುಳಿದು ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ.
ಕಳೆದ 14 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಈಗ ಎರಡೂ ಕುಟುಂಬಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಅರ್ಜುನ್ ಸರ್ಜಾ ಅವರ ಕುಟುಂಬವು ಚೆನ್ನೈನಲ್ಲಿ ಮಗಳ ಮದುವೆ ಆರತಕ್ಷತೆಯನ್ನು ಏರ್ಪಡಿಸಲಿದೆಯಾ ಎಂಬ ಬಗ್ಗೆ ಮಾಹಿತಿ ಇಲ್ಲ.
ಈ ಪ್ರೇಮಿಗಳು ಕಳೆದ ವರ್ಷ ಇಟಲಿಯ ಪ್ರಸಿದ್ಧ ಹಾಗೂ ಸುಂದರ ತಾಣವಾದ 'ಲೇಕ್ ಕೋಮೋ'ದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ವರ ಇಸಾಯ್ ನಟ್ಟರ್ ವಿದೇಶಿ ಮೂಲದವರಾಗಿದ್ದರೂ, ಭಾರತೀಯ ಸಂಸ್ಕೃತಿ ಮತ್ತು ಆಚಾರ-ವಿಚಾರಗಳಿಗೆ ಅಪಾರ ಗೌರವ ನೀಡಿದ್ದಾರೆ.
ಮದುವೆಯ ಎಲ್ಲಾ ವಿಧಿ-ವಿಧಾನಗಳು ಅಪ್ಪಟ ಹಿಂದೂ ಸಂಪ್ರದಾಯ ಹಾಗೂ ಶಾಸ್ತ್ರೋಕ್ತವಾಗಿ ಮದುವೆ ಮಂಟಪದಲ್ಲಿ ನಡೆದಿವೆ.
ಸಾಂಸ್ಕೃತಿಕ ಭಿನ್ನತೆಯ ಹೊರತಾಗಿಯೂ, ಎರಡೂ ಕುಟುಂಬಗಳು ಒಟ್ಟಾಗಿ ಸೇರಿ ಅತ್ಯಂತ ಪ್ರೀತಿಯಿಂದ ಈ ಶುಭ ಕಾರ್ಯವನ್ನು ನೆರವೇರಿಸಿವೆ.
14 ವರ್ಷಗಳ ಸ್ನೇಹ ಮತ್ತು ಪ್ರೀತಿಯನ್ನು ವಿವಾಹ ಬಂಧನದ ಮೂಲಕ ಅಧಿಕೃತಗೊಳಿಸಿದ ಅಂಜನಾ ಮತ್ತು ಇಸಾಯ್ ಜೋಡಿ ಹೊಸ ಪಯಣ ಆರಂಭಿಸಿದೆ. ಮದುವೆ ಸಮಾರಂಭದಲ್ಲಿ ವಧು-ವರರಿಬ್ಬರೂ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕಂಗೊಳಿಸಿದ್ದಾರೆ.