Winter Saree Fashion 2026: ಚಳಿಗಾಲದಲ್ಲಿ ಸೀರೆಗೂ ಸಿಕ್ತು ಲೇಯರ್ ಲುಕ್
Winter Outfit Ideas for Women: ಚಳಿಗಾಲದಲ್ಲಿ ನೋಡಲು ಆಕರ್ಷಕವಾಗಿ ಕಾಣಿಸುವ ಲೇಯರ್ ಲುಕ್ ನೀಡುವಂತಹ ಮೇಲುಡುಗೆಗಳು ಆಗಮಿಸಿವೆ. ಇವು ಮಾನಿನಿಯರನ್ನು ಸೆಳೆಯುತ್ತಿದ್ದು, ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ಒಂದಿಷ್ಟು ವಿವರ ನೀಡಿದ್ದಾರೆ.
ಚಿತ್ರಕೃಪೆ: ಪಿಕ್ಸೆಲ್ -
ಶೀಲಾ ಸಿ ಶೆಟ್ಟಿ
Jan 31, 2026 5:46 PM
1/5
ಚಳಿಗಾಲದಲ್ಲಿ ಸೀರೆಗೂ ವೈವಿಧ್ಯಮಯ ಲೇಯರ್ ಲುಕ್ ದೊರಕಿದೆ. ವೈವಿಧ್ಯಮಯ ಡಿಸೈನ್ನಲ್ಲಿ ಲೇಯರ್ ಲುಕ್ ನೀಡುವ ಮೇಲುಡುಪುಗಳಾದ ಜಾಕೆಟ್, ಕೇಪ್, ಶ್ರಗ್ಗಳು ಆಗಮಿಸಿವೆ.
2/5
ಸೀರೆಗೆ ಬಂತು ಜಾಕೆಟ್
ಡಿಸೈನರ್ ಸೀರೆಗೆ ಸಿಂಪಲ್ ಬ್ಲೌಸ್ ಧರಿಸಿ ಅದರ ಮೇಲೊಂದು ಡಿಸೈನರ್ ಜಾಕೆಟ್ ಧರಿಸುವುದು ಇಂದಿನ ಫ್ಯಾಷನ್ ಆಗಿದೆ. ಜಾಕೆಟ್ ಮೇಲೆ ನಾನಾ ಬಗೆಯಲ್ಲಿ ಡ್ರೇಪ್ ಕೂಡ ಮಾಡುವುದು ಇಂದಿನ ಸೀರೆ ಡ್ರೇಪಿಂಗ್ನಲ್ಲಿ ಸೇರಿದೆ.
ಸೀರೆಗೂ ಬಂತು ಕೇಪ್
ಸೀರೆಗೂ ಇದೀಗ ಕೇಪ್ ಲೇಯರ್ ಡಿಸೈನ್ ಎಥ್ನಿಕ್ ಟಚ್ ನೀಡಿದೆ. ನಮ್ಮ ಭಾರತೀಯ ಮಾನಿನಿಯರಿಗೆ ಹೊಂದುವಂತೆ ಈ ಕೇಪ್ಗಳು ಕಾಲಿಟ್ಟಿವೆ.
3/5
ಟ್ರೆಂಚ್ಕೋಟ್ ಜತೆ ಸೀರೆ ಸ್ಟೈಲಿಂಗ್
ಚಳಿಗೆ ಧರಿಸಬಹುದಾದಂತಹ ಟ್ರೆಂಚ್ ಕೋಟ್ಗಳೊಂದಿಗೂ ಸೀರೆ ಡ್ರೇಪಿಂಗ್ ಮಾಡುವುದು ಇಂದು ಕಾರ್ಪೋರೇಟ್ ಕ್ಷೇತ್ರದ ಯುವತಿಯರನ್ನು ಸವಾರಿ ಮಾಡುತ್ತಿವೆ.
4/5
ಮಧುಬಾಲ ಸ್ಟೈಲ್ನ ಡಬಲ್ ಬ್ಲೌಸ್
ನಾರ್ಮಲ್ ಬ್ಲೌಸ್ ಮೇಲೊಂದು ಮಧುಬಾಲ ಡಿಸೈನ್ನ ಮತ್ತೊಂದು ಕೋಟ್ ರೀತಿಯ ಬ್ಲೌಸ್ ಧರಿಸುವುದು. ಅಂದರೇ ಟು ಪೀಸ್ ಬ್ಲೌಸ್ ಫ್ಯಾಷನ್ ಈ ಲೇಯರ್ ಲುಕ್ನಲ್ಲಿ ಟ್ರೆಂಡಿಯಾಗಿದೆ. ನೋಡಲು ರಾಯಲ್ ಲುಕ್ ನೀಡುತ್ತದೆ ಎನ್ನುತ್ತಾರೆ ಡಿಸೈನರ್ ರಾಶಿ.
5/5
ಲೇಯರ್ ಲುಕ್ ಸೀರೆ ಪ್ರಿಯರಿಗೆ ಸಲಹೆ
- ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಲೇಯರ್ ಲುಕ್ ಸೆಲೆಕ್ಟ್ ಮಾಡಿ. ಇಲ್ಲವಾದಲ್ಲಿ ಪ್ಲಂಪಿಯಾಗಿ ಕಾಣಿಸಬಹುದು.
- ಲೇಯರ್ ಲುಕ್ ನೀಡುವಾಗ ಡ್ರೇಪಿಂಗ್ ಪರ್ಫೆಕ್ಟ್ ಆಗಿರಬೇಕು.
- ದಪ್ಪಗಿರುವವರು ಆದಷ್ಟೂ ತೆಳುವಾದ ಸೀರೆ ಆಯ್ಕೆ ಮಾಡುವುದು ಉತ್ತಮ.
- ಲಾಂಗ್ ಕೋಟ್ಗಳು ಉದ್ದನಾಗಿ ಕಾಣುವಂತೆ ಬಿಂಬಿಸುತ್ತವೆ.