ಚೆನ್ನೈ: ತಮಿಳುನಾಡು ವಿಧಾನ ಸಭಾ ಚುನಾವಣೆ (tamil nadu assembly election) ಬಳಿಕ ಒಂದರಮೇಲೊಂದು ಆಘಾತ ಡಿಎಂಕೆಗೆ (DMK) ಬೀಳುತ್ತಲೇ ಇದೆ. ಕೆಲವು ದಿನಗಳ ಹಿಂದೆಯಷ್ಟೇ ಡಿಎಂಕೆ ಜೊತೆಗಿನ 9 ವರ್ಷಗಳ ಮೈತ್ರಿಯನ್ನು ಎಂಡಿಎಂಕೆಯು (MDMK) ಮುರಿದುಕೊಂಡಿತ್ತು. ಇದರ ಬೆನ್ನಲ್ಲೇ ಈಗ ತಮಿಳುನಾಡಿನ (Tamil nadu) ಕಿಂಗ್ ಮೇಕರ್ ಎಂದೇ ಖ್ಯಾತಿ ಪಡೆದಿರುವ ವಿಸಿಕಯು (Viduthalai Chiruthaigal Katchi) ತನ್ನ ನಿಷ್ಠೆಯನ್ನು ಬದಲಾಯಿಸುವುದಾಗಿ ಹೇಳಿಕೊಂಡಿದೆ. ಈ ಕುರಿತು ಶೀಘ್ರದಲ್ಲೇ ವಿಸಿಕೆ ಮುಖ್ಯಸ್ಥ ಥೋಲ್ ತಿರುಮಾವಲವನ್ ಘೋಷಣೆ ಮಾಡುವ ಸಾಧ್ಯತೆ ಇದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಜಯಗಳಿಸಿದ ಬಳಿಕ ಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಹಲವು ಪಕ್ಷಗಳು ಹೊರನಡೆದಿವೆ. ಇದೀಗ ತಮಿಳುನಾಡಿನ ವಿದುತಲೈ ಚಿರುತೈಗಲ್ ಕಚ್ಚಿ ಕೂಡ ಔಪಚಾರಿಕವಾಗಿ ಹೊರಹೋಗುವುದಾಗಿ ತಿಳಿಸಿದೆ. ಈ ಕುರಿತು ಪಕ್ಷದಿಂದ ಅಧಿಕೃತವಾಗಿ ಶೀಘ್ರದಲ್ಲೇ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.
ತಮಿಳುನಾಡಿನಲ್ಲಿ ಸೋತು ಸೊರಗಿದ ಡಿಎಂಕೆಗೆ ಮತ್ತೊಂದು ಆಘಾತ; 9 ವರ್ಷಗಳ ಮೈತ್ರಿ ಮುರಿದುಕೊಂಡ ಎಂಡಿಎಂಕೆ
ಕಾಂಗ್ರೆಸ್, ಸಿಪಿಎಂ ಜೊತೆಗೆ ವಿಸಿಕೆ ಕೂಡ ಡಿಎಂಕೆ ಮೈತ್ರಿಕೂಟದಿಂದ ಹೊರ ನಡೆಯುವ ಸೂಚನೆ ಮೊದಲೇ ಇತ್ತು. ಅದು ಈಗ ಔಪಚಾರಿಕವಾಗಿ ನಡೆಯಲಿದೆ. ಕಾಂಗ್ರೆಸ್, ಸಿಪಿಎಂ ಸೇರಿದಂತೆ ಇತರ ಹಲವು ಡಿಎಂಕೆ ಮಿತ್ರಪಕ್ಷಗಳು ತಮಿಳಗ ವೆಟ್ರಿ ಕಳಗಂಗೆ ಬೆಂಬಲ ಘೋಷಿಸಿದ ಬಳಿಕ ತಮಿಳುನಾಡು ರಾಜಕೀಯದಲ್ಲಿ ವಿವಾದ ಎದ್ದಿದೆ.
ಚೊಚ್ಚಲ ವಿಧಾನ ಸಭಾ ಚುನಾವಣೆಯಲ್ಲೇ 234 ವಿಧಾನಸಭಾ ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದಿದ್ದ ಟಿವಿಕೆಗೆ ಬಹುಮತಕ್ಕೆ 10 ಸ್ಥಾನಗಳ ಕೊರತೆ ಎದುರಾಗಿತ್ತು. ಎಡ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನಿಂದ ಕಾಂಗ್ರೆಸ್‌ನ ಐದು ಮತ್ತು ವಿಸಿಕೆಯ ಎರಡು ಸ್ಥಾನಗಳ ಬೆಂಬಲದಿಂದಾಗಿ ವಿಜಯ್ ವಿಶ್ವಾಸ ಮತಗಳಿಸಿದರು. ಐಯುಎಂಎಲ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಔಪಚಾರಿಕವಾಗಿ ಡಿಎಂಕೆಯನ್ನು ತೊರೆದಿತ್ತು. ಇದೀಗ ವಿಸಿಕೆ ಕೂಡ ಡಿಎಂಕೆ ಮೈತ್ರಿಕೂಟದಿಂದ ಹೊರನಡೆಯಲಿದೆ.
ವಿಸಿಕೆಯು ಡಿಎಂಕೆಯನ್ನು ಔಪಚಾರಿಕವಾಗಿ ತೊರೆದ ಬಳಿಕ ಟಿವಿಕೆ ಜೊತೆ ಸಭೆಯಲ್ಲಿ ಭಾಗವಹಿಸಲಿದೆ. ಇದು ಎರಡು ಪಕ್ಷಗಳ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನ ಎನ್ನಲಾಗಿದೆ.
ಭಾರತದ ಸೆಮಿಕಂಡಕ್ಟರ್ ಕ್ರಾಂತಿ: ತಂತ್ರಜ್ಞಾನ, ಆರ್ಥಿಕ ಪ್ರಗತಿಗೆ ಹಾದಿ
ಎಂಡಿಎಂಕೆ ಇತ್ತೀಚಿಗೆ ಡಿಎಂಕೆ ಜೊತೆಗಿನ ಒಂಬತ್ತು ವರ್ಷಗಳ ಸಂಬಂಧವನ್ನು ಮುರಿದುಕೊಂಡಿತ್ತು. ಇದರ ಬಳಿಕ ವೈಕೊ ಅವರು ಟಿವಿಕೆ ಸೇರುವ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ. ಅವರು ತಮ್ಮ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿ ಡಿಎಂಕೆಯಿಂದ ಹೊರಬಂದಿದ್ದರು.