ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Arvind Kejriwal: ದಮ್ಮಿದ್ದರೆ ಯಮುನಾ‌ ನದಿಯ ನೀರು ಕುಡಿಯಿರಿ: ಅಮಿತ್‌ ಶಾ ಮತ್ತು ರಾಹುಲ್‌ಗೆ ಕೇಜ್ರಿವಾಲ್‌ ಓಪನ್ ಚಾಲೆಂಜ್!

ಆಮ್‌ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಯಮುನಾ ನೀರನ್ನು ಸಾರ್ವಜನಿಕವಾಗಿ ಕುಡಿಯುವಂತೆ ಸವಾಲು ಹಾಕಿದ್ದಾರೆ. ಹರಿಯಾಣದ ಬಿಜೆಪಿ ಸರ್ಕಾರವು ದೆಹಲಿಗೆ ಪೂರೈಸುವ ಯಮುನಾ ನೀರಿನಲ್ಲಿ ವಿಷವನ್ನು ಬೆರೆಸುತ್ತಿದೆ ಎಂದು ಅರವಿಂದ್‌ ಕೇಜ್ರಿವಾಲ್ ಸೋಮವಾರ(ಜ.27) ಸ್ಫೋಟಕ ಹೇಳಿಕೆ ನೀಡಿದ್ದರು.

ಯಮುನಾ ನೀರು ಕುಡಿಯುವಂತೆ‌ ಶಾ ಮತ್ತು ರಾಗಾಗೆ ಓಪನ್‌ ಚಾಲೆಂಜ್‌ ಹಾಕಿದ ಕೇಜ್ರಿವಾಲ್!

Arvind Kejriwal

Profile Deekshith Nair Jan 29, 2025 7:02 PM

ನವದೆಹಲಿ: ಆಮ್‌ ಆದ್ಮಿ(AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್(Arvind Kejriwal) ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandhi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರಿಗೆ ಯಮುನಾ ನೀರನ್ನು(Yamuna Water) ಸಾರ್ವಜನಿಕವಾಗಿ ಕುಡಿಯುವಂತೆ ಸವಾಲು ಹಾಕಿದ್ದಾರೆ. ಹರಿಯಾಣದ ಬಿಜೆಪಿ ಸರ್ಕಾರವು ದೆಹಲಿಗೆ ಪೂರೈಸುವ ಯಮುನಾ ನೀರಿನಲ್ಲಿ ವಿಷವನ್ನು ಬೆರೆಸುತ್ತಿದೆ ಎಂದು ಅರವಿಂದ್‌ ಕೇಜ್ರಿವಾಲ್ ಸೋಮವಾರ(ಜ.27) ಸ್ಫೋಟಕ ಹೇಳಿಕೆ ನೀಡಿದ್ದರು.

ಅಮಿತ್‌ ಶಾ,ರಾಹುಲ್‌ ಗಾಂಧಿ ಮತ್ತು ಹರಿಯಾಣದ ಬಿಜೆಪಿ ನಾಯಕರಿಗೆ ಯಮುನಾ ನದಿಯ ನೀರು ಕುಡಿಯುವಂತೆ ಸವಾಲೊಡ್ಡಿರುವ ಕೇಜ್ರಿವಾಲ್‌ "ಅಮಿತ್ ಶಾ ಜೀ, ರಾಜೀವ್ ಕುಮಾರ್ ಜೀ, ರಾಹುಲ್ ಗಾಂಧಿ, ಸಂದೀಪ್ ದೀಕ್ಷಿತ್ ಜೀ, ನೀವೆಲ್ಲರೂ ಮಾಧ್ಯಮಗಳ ಮುಂದೆ 7 ಪಿಪಿಎಂ ಅಮೋನಿಯಾ ಇರುವ ನೀರನ್ನು ಕುಡಿದು ನಮಗೆ ತೋರಿಸಿ. ನೀವು ದೆಹಲಿಗೆ 7 ಪಿಪಿಎಂ ನೀರನ್ನು ಕಳುಹಿಸುತ್ತಿದ್ದೀರಿ. ಇರುವ ಸತ್ಯ ಹೇಳಿದರೆ ಕೇಜ್ರಿವಾಲ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುತ್ತಿದ್ದೀರಿ" ಎಂದಿದ್ದಾರೆ.



ಯಮುನಾ ನದಿ ನೀರು ಕುಡಿದ ಹರಿಯಾಣದ ಮುಖ್ಯಮಂತ್ರಿ

ಅರವಿಂದ್‌ ಕೇಜ್ರಿವಾಲ್‌ ಒಡ್ಡಿದ ಸವಾಲನ್ನು ಸ್ವೀಕರಿಸಿರುವ ಹರಿಯಾಣದ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಯಮುನಾ ನದಿಯ ನೀರನ್ನು ಕುಡಿದಿದ್ದಾರೆ. ಇಂದು(ಜ.29) ಸಂಜೆ ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸೈನಿ ದೆಹಲಿಯ ಪಲ್ಲಾ ಗ್ರಾಮದಲ್ಲಿ ಹರಿಯುತ್ತಿರುವ ನೀರನ್ನು ಕುಡಿದಿದ್ದಾರೆ. ನಾನು ಹರಿಯಾಣ ಗಡಿಯಲ್ಲಿ ಹರಿಯುತ್ತಿರುವ ಪವಿತ್ರ ಯಮುನೆಯ ನೀರನ್ನು ಕುಡಿದೆ. ಅತಿಶಿ ಜಿ ಬರಲಿಲ್ಲ. ಅವರು ಹೊಸ ಸುಳ್ಳಿನ ಕಥೆ ಕಟ್ಟುತ್ತಿರಬಹುದು. ಎಎಪಿ ದೂಷಣೆಗಳಿಗೆ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Mahakumbh: ಕುಂಭಮೇಳದಲ್ಲಿ ಕಾಲ್ತುಳಿತ-12 ವರ್ಷಗಳ ಹಿಂದೆಯೂ ನಡೆದಿತ್ತು ಇಂತಹದ್ದೇ ದುರಂತ!

ಹರಿಯಾಣದಲ್ಲಿ ಇರುವ ಬಿಜೆಪಿ ಸರ್ಕಾರ ದೆಹಲಿಗೆ ಬರುವ ಯುಮುನಾ ನದಿಗೆ ವಿಷ ಹಾಕುತ್ತಿದೆ. ದೆಹಲಿ ಜಲ ಬೋರ್ಡ್​ ಇಂಜನಿಯರ್ಸ್ ದೆಹಲಿ ಗಡಿಯಲ್ಲೇ ಆ ನೀರನ್ನೂ ತಡೆದಿದ್ದರು. ದೆಹಲಿಯೊಳಗೆ ಆ ನೀರು ಬಾರದಂತೆ ನೋಡಿಕೊಂಡರ. ಆ ನೀರು ದೆಹಲಿಯೊಳಗೆ ಬಂದು ಕುಡಿಯುವ ನೀರಿನಲ್ಲಿ ಸೇರಿ ಹೋಗಿದ್ದರೆ ಆಗ ದೆಹಲಿಯಲ್ಲಿ ಸಾಮೂಹಿಕವಾಗಿ ನಾವು ಸಾಯುತ್ತಿದ್ದೆವು. ಈ ನೀರನ್ನು ಹರಿಯಾಣದ ಬಿಜೆಪಿ ಸರ್ಕಾರ ದೆಹಲಿಗೆ ಕಳಿಸಿದೆ. ಅದರೊಳಗೆ ಅವರು ಅದೆಂಥಾ ವಿಷ ಹಾಕಿ ಕಳುಹಿಸಿದ್ದಾರೆ. ದೆಹಲಿಯಲ್ಲಿರುವ ವಾಟರ್ ಪ್ಲಾಂಟ್ ಕೂಡ ಸ್ವಚ್ಛವಾಗಲ್ಲ. ಹೀಗಾಗಿ ದೆಹಲಿಯಲ್ಲಿ ಕುಡಿಯುವ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಅರವಿಂದ್‌ ಕೇಜ್ರಿವಾಲ್‌ ಆರೋಪಿಸಿದ್ದರು.



ಕೇಜ್ರಿವಾಲ್‌ ಆರೋಪಕ್ಕೆ ಮೋದಿ ಕೆಂಡಾಮಂಡಲ!

ಆಮ್ ಆದ್ಮಿ ಪಕ್ಷದ ನಾಯಕರ ಸುಳ್ಳು ಹೇಳಿಕೆಗೆ ದೆಹಲಿ ಜನರು ಕಿವಿಗೊಡುವುದಿಲ್ಲ. ಹರಿಯಾಣ ಸರ್ಕಾರ ಯಮುನಾ ನದಿಗೆ ವಿಷ ಬೆರೆಸುವ ಕೆಲಸ ಮಾಡುತ್ತಿಲ್ಲ.ಅರವಿಂದ್ ಕೇಜ್ರಿವಾಲ್ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಹರಿಯಾಣದಿಂದ ಹರಿದು ಬರುವ ನೀರನ್ನು ನಾವು ಕೂಡ ಕುಡಿಯುತ್ತೇವೆ. ಹರಿಯಾಣ ಸರ್ಕಾರದ ವಿರುದ್ಧ ಕೇಜ್ರಿವಾಲ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೆಹಲಿಯ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಈ ಬಾರಿ ಅಭಿವೃದ್ಧಿಯ ಕಮಲ ಅರಳಲಿದೆ. ಹರಿಯಾಣ ರಾಜ್ಯದ ಜನರು ಅಪಾರ ದೇಶಭಕ್ತಿ ಹೊಂದಿದ್ದಾರೆ. ದೆಹಲಿ ಜನರಿಗೆ ಅಭಿವೃದ್ಧಿ ಮಾಡುವ ಸರ್ಕಾರ ಬೇಕಿದೆ. ದೆಹಲಿಯ ಜನರಂತೆಯೇ ನಾನು ಕೂಡ ಯಮುನಾ ನದಿ ನೀರನ್ನೇ ಕುಡಿದಿದ್ದೇನೆ. ಈ ಬಾರಿ ಎಎಪಿ ಹಡಗು ಯಮುನಾ ನದಿಯಲ್ಲಿ ಮುಳುಗುತ್ತದೆ ಎಂದು ಕೇಜ್ರಿವಾಲ್ ಅವರನ್ನು ಪ್ರಧಾನಿ ತರಾಟೆಗೆ ತೆಗೆದುಕೊಂಡರು.