ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nitish Kumar: ನಿತೀಶ್‌ ಪದಗ್ರಹಣಕ್ಕೆ ಕೌಂಟ್‌ಡೌನ್‌ ಶುರು! ಬಿಜೆಪಿಗೆ ಸಿಗುತ್ತಾ ಸ್ಪೀಕರ್‌ ಪೋಸ್ಟ್‌? ಹೇಗಿರಲಿದೆ ಪವರ್‌ ಶೇರಿಂಗ್‌?

Bihar Cabinet: ಬಿಹಾರದಲ್ಲಿ ಈ ಬಾರಿ ನಿತೀಶ್‌ ಸರ್ಕಾರದಲ್ಲಿ ಮಿತ್ರಪಕ್ಷಗಳು ಎಷ್ಟು ಸಚಿವ ಸ್ಥಾನ ಪಡೆಯಲಿವೆ ಎಂಬ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ 17 ಸಚಿವ ಸ್ಥಾನಗಳು, ಜೆಡಿಯುಗೆ 15 (ಕುಮಾರ್ ಮುಖ್ಯಮಂತ್ರಿಯಾಗಿ ಸೇರಿದಂತೆ) ಸ್ಥಾನಗಳು ಲಭ್ಯವಿದ್ದರೆ, ಎಲ್‌ಜೆಪಿ (ರಾಮ್ ವಿಲಾಸ್), ಎಚ್‌ಎಎಂ (ಜಾತ್ಯತೀತ) ಮತ್ತು ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ)ಗೆ ಕ್ರಮವಾಗಿ ಎರಡು, ಒಂದು ಮತ್ತು ಒಂದು ಸಚಿವ ಸ್ಥಾನಗಳು ಸಿಗುವ ಸಾಧ್ಯತೆ ಇದೆ.

ಬಿಹಾರದಲ್ಲಿ ಹೇಗಿರಲಿದೆ ಪವರ್‌ ಶೇರಿಂಗ್‌? ಇಲ್ಲಿದೆ ಡಿಟೇಲ್ಸ್‌

ನಿತೀಶ್‌ ಕುಮಾರ್‌ ಮತ್ತು ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ) -

Rakshita Karkera
Rakshita Karkera Nov 20, 2025 10:50 AM

ಪಟನಾ: ಬಿಹಾರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರದ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ನಿತೀಶ್‌ ಕುಮಾರ್‌(Nitish Kumar) ಬಿಹಾರದ ಮುಖ್ಯಮಂತ್ರಿಯಾಗಿ(Bihar CM) 10ನೇ ಬಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 243 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ 202 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ 89, ಜೆಡಿ (ಯು) 85, ಎಲ್‌ಜೆಪಿ (ಆರ್‌ವಿ) 19, ಎಚ್‌ಎಎಂ-ಎಸ್ ಐದು ಮತ್ತು ಆರ್‌ಎಲ್‌ಎಂ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿದೆ.

ಹೀಗಿರುವಾಗ ಈ ಬಾರಿ ನಿತೀಶ್‌ ಸರ್ಕಾರದಲ್ಲಿ ಮಿತ್ರಪಕ್ಷಗಳು ಎಷ್ಟು ಸಚಿವ ಸ್ಥಾನ ಪಡೆಯಲಿವೆ ಎಂಬ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ 17 ಸಚಿವ ಸ್ಥಾನಗಳು, ಜೆಡಿಯುಗೆ 15 (ಕುಮಾರ್ ಮುಖ್ಯಮಂತ್ರಿಯಾಗಿ ಸೇರಿದಂತೆ) ಸ್ಥಾನಗಳು ಲಭ್ಯವಿದ್ದರೆ, ಎಲ್‌ಜೆಪಿ (ರಾಮ್ ವಿಲಾಸ್), ಎಚ್‌ಎಎಂ (ಜಾತ್ಯತೀತ) ಮತ್ತು ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ)ಗೆ ಕ್ರಮವಾಗಿ ಎರಡು, ಒಂದು ಮತ್ತು ಒಂದು ಸಚಿವ ಸ್ಥಾನಗಳನ್ನು ನೀಡಲಾಗುವುದು ಅಧಿಕೃತ ಮೂಲಗಳು ತಿಳಿಸಿವೆ.

ಬಿಹಾರದಲ್ಲಿ ಅಧಿಕಾರಕ್ಕೆ ಬರಲು ಎನ್‌ಡಿಎ ಅಡ್ಡ ದಾರಿ ಹಿಡಿಯಿತಾ? ವಿಶ್ವ ಬ್ಯಾಂಕ್‌ನ 14,000 ಕೋಟಿ ರೂ. ದುರ್ಬಳಕೆ ಆರೋಪ

ಜೆಡಿಯು ತನ್ನ ಅಸ್ತಿತ್ವದಲ್ಲಿರುವ ಸಚಿವರಲ್ಲಿ ಹೆಚ್ಚಿನವರನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದ್ದರೂ, ಹೊಸ ಕಾರ್ಯಕರ್ತರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಪುರಸ್ಕಾರ ನೀಡಲು ಬಿಜೆಪಿ ಹಲವಾರು ಹೊಸ ಮುಖಗಳನ್ನು ತರುವ ಸಾಧ್ಯತೆಯಿದೆ. ಆದಾಗ್ಯೂ, ಬಿಜೆಪಿಯ ಹಳೆಯ ನಾಯಕರಾದ ಸಾಮ್ರಾಟ್ ಚೌಧರಿ, ವಿಜಯ್ ಸಿನ್ಹಾ, ಮಂಗಲ್ ಪಾಂಡೆ ಮತ್ತು ನಿತಿನ್ ನವೀನ್ ಅವರು ಸಚಿವ ಸಂಪುಟದಲ್ಲಿ ಉಳಿಯುವ ಸಾಧ್ಯತೆ ಇದೆ. ಸಂಪುಟ ಸ್ಥಾನಗಳಿಗಾಗಿ ಹಲವರಿಂದ ಲಾಬಿಗಳು ಈಗಾಗಲೇ ಶುರುವಾಗಿದೆ. ಅತಿ ಹೆಚ್ಚು ಸ್ಥಾನಗಳನ್ನು ಪಡೆದಿರುವ ಬಿಜೆಪಿ ಹೊಸ ಸಂಪುಟದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿದೆ. ಹೀಗಾಗಿ ಕಳೆದ ಬಾರಿಗಿಂತ ಈ ಸರಿ ಹೆಚ್ಚು ಸಚಿವ ಸ್ಥಾನಗಳಿಗೆ ಬೇಡಿಕೆ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಬಾರಿ ಕೇವಲ12 ಸಚಿವ ಸ್ಥಾನಗಳಿಗೆ ಸಮಾಧಾನ ಪಟ್ಟುಕೊಂಡಿದ್ದ ಬಿಜೆಪಿ ಈ ಬಾರಿ 17 ಸ್ಥಾನಗಳಿಗೆ ಬೇಡಿಕೆ ಇಡುವ ಸಾಧ್ಯತೆ ಇದೆ.

ಬಿಜೆಪಿಯ ರಾಮಕೃಪಾಲ್ ಯಾದವ್ ಮತ್ತು ಶ್ರೇಯಸಿ ಸಿಂಗ್ ಅವರಿಗೆ ಈಗಾಗಲೇ ಹೈ ಕಮಾಂಡ್‌ನಿಂದ ಕರೆ ಬಂದಿದೆ ಎನ್ನಲಾಗಿದೆ. ಆರ್‌ಜೆಡಿಯ ಹಾಲಿ ಶಾಸಕ ರಿತೇಶ್ ಲಾಲ್ ಯಾದವ್ ಅವರನ್ನು ಸೋಲಿಸಿ ಯಾದವ್ ಪಾಟ್ನಾದ ದಾನಾಪುರದಿಂದ ಶಾಸಕರಾಗಿ ಆಯ್ಕೆಯಾಗಿದ್ದರೆ, ಸಿಂಗ್ ಜಮುಯಿಯಿಂದ ಶಾಸಕರಾಗಿದ್ದಾರೆ. ಇದಲ್ಲದೆ, ಮೊದಲ ಬಾರಿಗೆ ಶಾಸಕರಾದ ಬಿಜೆಪಿಯ ರಾಮ ನಿಶಾದ್ ಕೂಡ ಸಚಿವರಾಗಲಿದ್ದಾರೆ. ನಿಶಾದ್ ಮೊದಲ ಬಾರಿಗೆ ಔರೈಯಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಜೆಡಿಯುನಿಂದ ಸಂಪುಟ ಸೇರಲು ಇಲ್ಲಿಯವರೆಗೆ ಕರೆಗಳು ಬಂದಿರುವವರಲ್ಲಿ ಲೇಸಿ ಸಿಂಗ್, ಶ್ರವಣ್ ಕುಮಾರ್, ವಿಜಯ್ ಚೌಧರಿ, ವಿಜೇಂದ್ರ ಯಾದವ್ ಮತ್ತು ಮದನ್ ಸಾಹ್ನಿ ಸೇರಿದ್ದಾರೆ. ಮೈತ್ರಿಕೂಟದ ಎಲ್ಲಾ ಪಕ್ಷಗಳಿಗೆ ಅವು ಗೆದ್ದಿರುವ ಸ್ಥಾನಗಳ ಸಂಖ್ಯೆಗೆ ಅನುಗುಣವಾಗಿ ಅವಕಾಶ ಕಲ್ಪಿಸಲಾಗುವುದು ಎನ್ನಲಾಗಿದೆ.

Bihar Assembly Election Results 2025: ಬಿಹಾರ ಚುನಾವಣೆ ಟ್ರೆಂಡ್‌ ನಿಖರವಾಗಿ ಗುರುತಿಸಿದ್ದ ಸಮೀಕ್ಷೆಗಳು

ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ

  • ನಿತೀಶ್ ಕುಮಾರ್, ಮುಖ್ಯಮಂತ್ರಿ
  • ಸಾಮ್ರಾಟ್ ಚೌಧರಿ, ಉಪ ಮುಖ್ಯಮಂತ್ರಿ
  • ವಿಜಯ್ ಕುಮಾರ್ ಸಿನ್ಹಾ, ಉಪ ಮುಖ್ಯಮಂತ್ರಿ
  • ವಿಜೇಂದ್ರ ಪ್ರಸಾದ್ ಯಾದವ್
  • ವಿಜಯ್ ಕುಮಾರ್ ಚೌಧರಿ
  • ರಾಮ್ ಕೃಪಾಲ್ ಯಾದವ್
  • ಮಂಗಲ್ ಪಾಂಡೆ
  • ನಿತಿನ್ ನವೀನ್
  • ಸಂತೋಷ್ ಮಾಂಝಿ (ಜಿತನ್ ರಾಮ್ ಮಾಂಝಿ ಅವರ ಮಗ)
  • ಸ್ನೇಹಲತಾ ಕುಶ್ವಾಹ (ಉಪೇಂದ್ರ ಕುಶ್ವಾಹ ಅವರ ಪತ್ನಿ)/ದೀಪಕ್ ಕುಶ್ವಾಹ (ಉಪೇಂದ್ರ ಅವರ ಮಗ)

ಇಂದು ನಿತೀಶ್‌ ಕುಮಾರ್‌ ಪ್ರಮಾಣವಚನ

ಪಾಟ್ನಾದ ಗಾಂಧಿ ಮೈದಾನದಲ್ಲಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಎನ್‌ಡಿಎ ಉನ್ನತ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.