Nitish Kumar: ನಿತೀಶ್ ಕುಮಾರ್ ಅವರ ರಾಜಕೀಯ ರಂಗ ಪ್ರವೇಶ ಹೇಗಿತ್ತು?
Nitish Kumar Politics: ನಿತೀಶ್ ಕುಮಾರ್ ಕಳೆದ 24 ವರ್ಷದಲ್ಲಿ 9 ಬಾರಿ ಸಿಎಂ ಆಗಿದ್ದಾರೆ. 2000ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದರು. ಕಳೆದ 19 ವರ್ಷದಲ್ಲಿ 18 ವರ್ಷ ಅವರು ಸಿಎಂ ಸ್ಥಾನದಲ್ಲಿದ್ದಾರೆ. ಬಿಹಾರದ ಮಾಸ್ಟರ್ ಮೈಂಡ್ ಆದ ನಿತೀಶ್ ಕುಮಾರ್ ಅವರ ರಾಜಕೀಯ ಜೀವನ ಪ್ರಾರಂಭವಾಗಿದ್ದೇಗೆ...? ಅದಕ್ಕೆ ಪ್ರೇರಣೆ ಏನು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ
ನಿತೀಶ್ ಕುಮಾರ್ (ಸಂಗ್ರಹ ಚಿತ್ರ) -
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ(Bihar Election 2025 Results) ಎನ್ಡಿಎ ಮೈತ್ರಿಕೂಟ(NDA Alliance) ಅಧಿಕಾರದ ಚುಕ್ಕಾಣಿ ಹಿಡಿಯಲು ಅಣಿಯಾಗಿದ್ದು, ಭಾರೀ ಅಂತರದಲ್ಲಿ ಗೆಲುವನ್ನು ಸಾಧಿಸಿದೆ. ಈ ಮೂಲಕ ಮಹಾಘಟಬಂಧನ್ ಹೀನಾಯ ಸೋಲನ್ನು ಕಂಡಿದ್ದು, ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಎನ್ಡಿಎ ಯಶಸ್ವಿಯಾಗಿದೆ. ಜೆಪಿ - ಜೆಡಿಯು ನೇತೃತ್ವದ ಎನ್ಡಿಎ ಮೈತ್ರಿಕೂಟ ಈ ಅಭೂತಪೂರ್ವ ವಿಜಯವನ್ನು ಪಡೆದು ಇದೀಗ ಒಂಬತ್ತನೇ ಬಾರಿಗೆ ಸಿಎಂ ಗದ್ದುಗೆಯೇರಲು ನಿತೀಶ್ ಕುಮಾರ್ (Nitish kumar) ಸಜ್ಜಾಗಿದ್ದು, ಇಪ್ಪತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಅವರು ಮತ್ತೊಮ್ಮೆ ಜನರ ಮನಸ್ಸನ್ನು ಗೆದ್ದಿದ್ದಾರೆ. ಈ ಕೀರ್ತಿಯ ಹಿಂದೆ ಮಾಸ್ಟರ್ ಮೈಂಡ್ ನಿತೀಶ್ ಕುಮಾರ್ ಅವರ ಕೈ ಚಲಕವಿದ್ದು, ಅವರು ರಾಜಕೀಯ ಜೀವನ(Political Life) ಹೇಗಿತ್ತು..? ಪ್ರಾರಂಭವಾಗಿದ್ದು ಯಾವಾಗ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಭಕ್ತಿಯಾರ್ಪುರ್ನಲ್ಲಿ ಜನನ
1951ರ ಮಾರ್ಚ್ 1ರಂದು ಬಿಹಾರದ ಭಕ್ತಿಯಾರ್ಪುರ್ನಲ್ಲಿ ಕವಿರಾಜ್ ರಾಮ ಲಖನ್ ಸಿಂಗ್ ಮತ್ತು ಪರಮೇಶ್ವರಿ ದೇವಿ ದಂಪತಿಗಳಿಗೆ ನಿತೀಶ್ ಕುಮಾರ್ ಜನಿಸಿದರು. ಆಯುರ್ವೇದ ವೈದ್ಯರಾಗಿದ್ದ ಅವರ ತಂದೆಯ ಸೇವಾಭಾವ ನಿತೀಶ್ಕುಮಾರ್ರ ಬಾಲ್ಯದಲ್ಲೇ ಪರಿಣಾಮ ಬೀರಿತ್ತು. ಕುರ್ಮಿ ಕೃಷಿ ಸಮುದಾಯಕ್ಕೆ ಸೇರಿದ ನಿತೀಶ್ ಕುಮಾರ್ ಅವರಿಗೆ, ಒಬ್ಬ ಸಹೋದರ ಹಾಗೂ ಮೂವರು ಸಹೋದರಿಯರು.
ಇಂಜಿನಿಯರಿಂಗ್ ಪದವೀಧರ
ಶಿಕ್ಷಣಕ್ಕಾಗಿ ನಿತೀಶ್ ಕುಮಾರ್ ಭಕ್ತಿಯಾರ್ಪುರ್ನ ಶ್ರೀ ಗಣೇಶ್ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರ್ಣಗೊಳಿಸಿದ ಬಳಿಕ ಇಂಜಿನಿಯರಿಂಗ್ ಮಾಡುವ ಇಚ್ಛೆ ಹೊಂದಿದ್ದ ಅವರು ಪಾಟ್ನಾದ ಕಾಲೇಜಿನಲ್ಲಿ ಅವರು ಶಿಕ್ಷಣ ಮುಗಿಸಿದರು. 1972ರಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ನಲ್ಲಿ ಬಿಎಸ್ಸಿ ಪದವಿ ಪಡೆದರು. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಅವರು ಬಿಹಾರ ರಾಜ್ಯ ವಿದ್ಯುತ್ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ವೈಯಕ್ತಿಕ ಜೀವನ
1955ರ ಫೆಬ್ರುವರಿ 22ರಂದು ಮಂಜು ಕುಮಾರಿ ಸಿಂಗ್ ಅವರನ್ನು ವಿವಾಹವಾದ ಅವರು, 1973ರಲ್ಲಿ ಪುತ್ರ ನಿಶಾಂತ್ ಕುಮಾರ್ ಜನಿಸಿದರು. ಆದರೆ ದುರಾದೃಷ್ಟವಶಾತ್, ನಿತೀಶ್ ಅವರ ಪತ್ನಿ ಮಂಜು ಕುಮಾರಿ ಸಿಂಗ್ ನಿಮೋನಿಯಾದಿಂದ 2007ರ ಮೇ 14ರಲ್ಲಿ ನಿಧನರಾದರು.
1971ರಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
ಕಾಲೇಜು ದಿನಗಳಿಂದಲ್ಲೇ ರಾಜಕೀಯ ದ ಮೇಲೆ ಅತೀ ಹೆಚ್ಚು ಆಸಕ್ತಿ ಹೊಂದಿದ್ದ ನಿತೀಶ್ ಕುಮಾರ್ ರಾಮ್ ಮನೋಹರ್ ಲೋಹಿಯಾ ಅವರಿಂದ ಪ್ರಭಾವಕ್ಕೆ ಒಳಗಾಗಿದ್ದ ಅವರು ಜಯಪ್ರಕಾಶ್ ನಾರಾಯಣ್, ಎಸ್ ಎನ್ ಸಿನ್ಹಾ, ಕರ್ಪುರಿ ಠಾಕೂರ್ ಮತ್ತು ವಿ ಪಿ ಸಿಂಗ್ ಸಿದ್ದಾಂತಗಳಿಂದ ಪ್ರವಾವಿತರಾಗಿದ್ದರು. ಈ ಕ್ಷೇತ್ರದಲ್ಲಿಯೇ ಮುಂದುವರೆಯಬೇಕೆಂಬ ಆಸೆಯಿಂದ 1971ರಲ್ಲಿ ಸಮಾಜವಾದಿ ಯುವಜನ ಸಭಾಗೆ ಸೇರಿಕೊಂಡರು. 1974ರಲ್ಲಿ ಜೆಪಿ ಚಳುವಳಿ ಸಂದರ್ಭದಲ್ಲಿ ಆಂತರಿಕ ಭದ್ರತಾ ಕಾಯ್ದೆ ಅಡಿಯಲ್ಲಿ ನಿತೀಶ್ ಕುಮಾರ್ ಬಂಧಿಸಲ್ಪಟ್ಟಿದ್ದರು. 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ನಿತೀಶ್ ಜೈಲಿಗೆ ಹೋಗಿದ್ದರು.
ಮೊದಲ ಬಾರಿ ಸಿಎಂ ಆಗಿ ಆಯ್ಕೆ ಆಗಿದ್ದು ಯಾವಾಗ?
ಬಿಹಾರದಲ್ಲಿ ಮೊದಲ ಬಾರಿಗೆ 2000ರಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದರು. ಮಾರ್ಚ್.03, 2000ರಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಸರ್ಕಾರವು, ಬಹುಮತ ಸಾಬೀತುಪಡಿಸಲು ಆಗದೇ ಅಂದು ಒಂದೇ ವಾರದಲ್ಲಿ ಪತನಗೊಂಡಿತು. ನವೆಂಬರ್.24, 2005ರಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲದೊಂದಿಗೆ ಎರಡನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು.
2014ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ
ಬಿಹಾರದಲ್ಲಿ 2010ರ ನವೆಬಂರ್.26ರಂದು ಮೂರನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಮೂರನೇ ಬಾರಿ ಸಿಎಂ ಆದ ಅವರು ಅವಧಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗಲಿಲ್ಲ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ನಿತೀಶ್ ಅವರ ಜೆಡಿಯು ಪಕ್ಷವು ಸೋಲು ಕಂಡ ಹಿನ್ನೆಲೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರ ಬದಲಿಗೆ ಜಿತನ್ ರಾಮ್ ಮಾಂಝಿರನ್ನು ಸಿಎಂ ಸ್ಥಾನಕ್ಕೇರಿಸಲಾಗಿತ್ತು. ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ 9 ತಿಂಗಳಿನಲ್ಲೇ ಮತ್ತೆ ನಿತೀಶ್ ಕುಮಾರ್ ಸಿಎಂ ಕುರ್ಚಿಗೆ ಏರಿದರು. ಫೆಬ್ರವರಿ.22, 2015ರಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು.
ಮತ್ತೇ ಐದನೇ ಬಾರಿಗೆ ಮುಖ್ಯಮಂತ್ರಿ
ಆರ್ ಜೆಡಿ ಮತ್ತು ಜೆಡಿಯು ಮೈತ್ರಿ ಸರ್ಕಾರ ರಚನೆ ಬಿಹಾರ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳದ ಜೊತೆಗೆ ಜೆಡಿಯು ಮೈತ್ರಿಕೂಟ ರಚಿಸಿಕೊಂಡು ಹೊಸ ಸರ್ಕಾರವನ್ನು ಅಸ್ತಿತ್ವಕ್ಕೆ ತರಲಾಯಿತು. 2015ರ ನವೆಂಬರ್ 20ರಂದು ಐದನೇ ಬಾರಿಗೆ ಮುಖ್ಯಮಂತ್ರಿ ಆಗಿ ನಿತೀಶ್ ಕುಮಾರ್ ಅಧಿಕಾರಕ್ಕೇರಿದರು. 2017ರಲ್ಲಿ ರಾಷ್ಟ್ರೀಯ ಜನತಾದಳದ ಜೊತೆಗಿನ ಮೈತ್ರಿ ಕಡಿದುಕೊಂಡ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದಾದ ಬಳಿಕ ಮರುದಿನವೇ ಮತ್ತೊಮ್ಮೆ ಬಿಜೆಪಿ ಬೆಂಬಲದೊಂದಿಗೆ ಆರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಜೊತೆಗೆ 2020ರಲ್ಲಿ ಚುನಾವಣೆ ಎದುರಿಸಿದ ನಿತೀಶ್ ಕುಮಾರ್, ಮತದಾರರ ಬೆಂಬಲ ಗಳಿಸಿಕೊಂಡಿದ್ದು ಏಳನೇ ಬಾರಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದರು. ಮತ್ತೆ 2025ರ ಮಾರ್ಚ್ನಲ್ಲಿ ಒಂಬತ್ತನೇ ಬಾರಿಗೆ ಮತ್ತೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು ನಿತೀಶ್.