ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಂಗ್ರೆಸ್‌ ಎಂದರೆ ಎಂಎಂಸಿ-ಮುಸ್ಲಿಂ ಲೀಗ್‌ ಮಾವೋಯಿಸ್ಟ್‌ ಕಾಂಗ್ರೆಸ್‌: ಬಿಹಾರ ವಿಧಾನಸಭೆ ಫಲಿತಾಂಶ ಬೆನ್ನಲ್ಲೇ ಮೋದಿ ಹೊಸ ವ್ಯಾಖ್ಯಾನ

Narendra Modi: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 202ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್‌ ನೇತೃತ್ವದ ಮಹಘಟಬಂಧನ್‌ ಮೈತ್ರಿಕೂಟದ ವಿರುದ್ದ ವಾಗ್ದಾಳಿ ನಡೆಸಿದರು.

ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಜಯ ದಾಖಲಿಸುತ್ತಿದ್ದಂತೆ ಮತದಾರರಿಗೆ ಧನ್ಯವಾದ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ

ದೆಹಲಿ, ನ. 14: ʼʼಕಾಂಗ್ರೆಸ್‌ ಈಗ ಐಎನ್‌ಸಿ ಅಲ್ಲ, ಬದಲಾಗಿ ಎಂಎಂಸಿ ಅಂದರೆ ಮುಸ್ಲಿಂ ಲೀಗ್‌ ಮಾವೋಯಿಸ್ಟ್‌ ಕಾಂಗ್ರೆಸ್‌. ಕಾಂಗ್ರೆಸ್‌ನ ಸಂಪೂರ್ಣ ಕಾರ್ಯಸೂಚಿ ಈಗ ಇದರ ಸುತ್ತ ಸುತ್ತುತ್ತದೆ. ಆದ್ದರಿಂದ ಕಾಂಗ್ರೆಸ್‌ನೊಳಗೆ ಕೂಡ ಪ್ರತ್ಯೇಕ ಬಣ ಹೊರಹೊಮ್ಮಲಿದೆ. ಈ ಬಗ್ಗೆ ನಾನು ಭಯಪಡುತ್ತೇನೆ. ಬಿಹಾರದಲ್ಲಿ ಕಳೆದ 6 ಚುನಾವಣೆಗಳಲ್ಲಿ ಆಯ್ಕೆಯಾದ ಕಾಂಗ್ರೆಸ್‌ನ ಒಟ್ಟು ಶಾಸಕರು ಇಂದು ಆಯ್ಕೆಯಾದ ನಮ್ಮ ಶಾಸಕರಿಗಿಂತ ಕಡಿಮೆʼʼ-ಇದು ಮಹಾಘಟಬಂಧನ್‌ ಮೈತ್ರಿಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದ ಪರಿ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 202ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

“ಜನರು ಅಭಿವೃದ್ಧಿ ಹೊಂದಿದ ಬಿಹಾರಕ್ಕೆ ಮತ ಹಾಕಿದ್ದಾರೆ. ಅವರು ಸಮೃದ್ಧ ಬಿಹಾರಕ್ಕಾಗಿ ಹಕ್ಕು ಚಲಾಯಿಸಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ನಾನು ದಾಖಲೆಯ ಮತದಾನಕ್ಕಾಗಿ ಒತ್ತಾಯಿಸಿದ್ದೆ. ಅದಕ್ಕೆ ಬೆಂಬಲಿಸಿದ ಜನರು ಎಲ್ಲ ದಾಖಲೆಗಳನ್ನು ಮುರಿದಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದು ಮೋದಿ ಹೇಳಿದರು.

ಪ್ರಧಾನಿ ಮೋದಿ ಅವರ ಭಾಷಣ:



ಈ ಸುದ್ದಿಯನ್ನೂ ಓದಿ: Maithili Thakur: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆನ್‌ ಝಿ ಸಂಚಲನ; ಬಿಜೆಪಿಯ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್‌ಗೆ ಭರ್ಜರಿ ಜಯ

ಮೋದಿ ಅವರ ಪ್ರಮುಖ ಪಂಚ್‌ ಡೈಲಾಗ್‌ಗಳ ಝಲಕ್‌

  • ಇದು ಒಂದು ದೊಡ್ಡ ಗೆಲುವು. ಬಿಹಾರದ ಜನರು ತುಂಬಾ ಚೆನ್ನಾಗಿ ಮತ ಚಲಾಯಿಸಿದ್ದಾರೆ.
  • ಕಟ್ಟಾ ಸರ್ಕಾರ್ (ಮಹಾಘಟಬಂಧನ್) ಎಂದಿಗೂ ಹಿಂತಿರುಗುವುದಿಲ್ಲ. ಬಿಹಾರದ ಜನರು ಅಭಿವೃದ್ಧಿಗೆ ಮತ ಹಾಕಿದ್ದಾರೆ.
  • ನಾವು ಎನ್‌ಡಿಎ ಮೈತ್ರಿಕೂಟದವರು ಜನರ ಸೇವಕರು. ನಮ್ಮ ಕಠಿಣ ಪರಿಶ್ರಮದಿಂದ ಜನರನ್ನು ಸಂತೋಷಪಡಿಸುವುದನ್ನು ಮುಂದುವರಿಸುತ್ತೇವೆ.
  • ಇಡೀ ಬಿಹಾರ ಇಂದು ನಮಗೆ ಹೇಳಿದೆ: ಮತ್ತೊಮ್ಮೆ ಎನ್‌ಡಿಎ ಸರ್ಕಾರ.
  • ನಾನು ಜಂಗಲ್ ರಾಜ್ ಸರ್ಕಾರದ ಬಗ್ಗೆ ಮಾತನಾಡಿದಾಗ, ಆರ್‌ಜೆಡಿ ಅದನ್ನು ವಿರೋಧಿಸಲಿಲ್ಲ. ಆದರೆ ಕಾಂಗ್ರೆಸ್ ಅದನ್ನು ವಿರೋಧಿಸಿತು. ಇಂದು ನಾನು ಮತ್ತೊಮ್ಮೆ ಹೇಳುತ್ತೇನೆ, ಕಟ್ಟಾ ಸರ್ಕಾರ ಹಿಂತಿರುಗುವುದಿಲ್ಲ.
  • ಬಿಹಾರದ ಜನರು ಎಲ್ಲ ದಾಖಲೆಗಳನ್ನು ಮುರಿದಿದ್ದಾರೆ. ಎನ್‌ಡಿಎಗೆ ಭಾರಿ ಗೆಲುವು ನೀಡುವಂತೆ ನಾನು ಬಿಹಾರದ ಜನರನ್ನು ವಿನಂತಿಸಿದೆ ಮತ್ತು ಅವರು ನನ್ನ ಮನವಿಯನ್ನು ಒಪ್ಪಿಕೊಂಡರು.
  • ಬಿಹಾರದಲ್ಲಿ 2010ರ ಬಳಿಕ ಎನ್‌ಡಿಎ ಅತೀ ದೊಡ್ಡ ಜನಾದೇಶವನ್ನು ಪಡೆದಿದೆ. ನಾನು ಬಿಹಾರದ ಜನರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಧೀಮಂತ ನಾಯಕರಾದ ಜೆ.ಪಿ. ನಾರಾಯಣ್ ಮತ್ತು ಕರ್ಪೂರಿ ಠಾಕೂರ್ ಅವರಿಗೂ ನಮಸ್ಕರಿಸುತ್ತೇನೆ.
  • ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಮತದಾನವನ್ನು ಅಪರಾಹ್ನ 3 ಗಂಟೆಯವರೆಗೆ ನಡೆದಿದ್ದ ಕಾಲವಿತ್ತು. ಆದರೆ ಈಗ ಜನರು ಭಯವಿಲ್ಲದೆ ಮತ ಚಲಾಯಿಸುತ್ತಿದ್ದಾರೆ.
  • ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಮತ್ತು ಚುನಾವಣಾ ಆಯೋಗದ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಜನರನ್ನು ನಾನು ಅಭಿನಂದಿಸುತ್ತೇನೆ.
  • ಎಲ್ಲ ಎನ್‌ಡಿಎ ನಾಯಕರ ಅದ್ಭುತ ಕೆಲಸಕ್ಕಾಗಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಯಕತ್ವಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ.
  • ಬಿಹಾರ ಚುನಾವಣೆಗಳಲ್ಲಿ 'ಜಂಗಲ್ ರಾಜ್' ಸಮಯದಲ್ಲಿ ಬೂತ್ ವಶಪಡಿಸಿಕೊಳ್ಳುವಿಕೆ, ಹಿಂಸಾಚಾರವು ಸಾಮಾನ್ಯವಾಗಿತ್ತು. ಆದರೆ ಈಗ ಅಂತಹ ಯಾವುದೇ ಪ್ರಕರಣ ನಡೆಯುತ್ತಿಲ್ಲ.
  • ಬಿಹಾರ ಭಾರತಕ್ಕೆ ಪ್ರಜಾಪ್ರಭುತ್ವಕ್ಕೆ ಗೌರವ ನೀಡಿದ ಭೂಮಿ. ಇಂದು ಆ ಭೂಮಿಯೇ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡಲು ಪ್ರಯತ್ನಿಸಿದವರನ್ನು ಸೋಲಿಸಿದೆ.
  • ಈ ಗೆಲುವು ಕಾಂಗ್ರೆಸ್ ಮತ್ತು ಕೆಂಪು ಧ್ವಜವನ್ನು ಹೊತ್ತವರಿಗೆ (ಎಡಪಂಥೀಯರು) ಸ್ಪಷ್ಟ ಉತ್ತರ.

ಈ ಸುದ್ದಿಯನ್ನೂ ಓದಿ: Bihar Election 2025 Results: ಗೆದ್ದರೆ ಮಾತ್ರ ಮಾಸ್ಕ್‌ ತೆಗೆಯುವೆ ಎಂದಿದ್ದ ಪುಷ್ಪಮ್‌ ಪ್ರಿಯಾಗೆ ಮುಖಭಂಗ

  • ಕಾಂಗ್ರೆಸ್ ಚುನಾವಣಾ ಆಯೋಗವನ್ನು ಟೀಕಿಸುತ್ತದೆ, ಮತ ಚೋರಿಯ ಬಗ್ಗೆ ದೂರು ನೀಡುತ್ತದೆ ಮತ್ತು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಕಾಂಗ್ರೆಸ್‌ಗೆ ದೇಶದ ಬಗ್ಗೆ ಯಾವುದೇ ಸಕಾರಾತ್ಮಕ ದೃಷ್ಟಿಕೋನವಿಲ್ಲ.
  • ಮುಂದಿನ 5 ವರ್ಷಗಳಲ್ಲಿ ಬಿಹಾರ ಮತ್ತಷ್ಟು ಪ್ರಗತಿ ಸಾಧಿಸಲಿದೆ. ಇಲ್ಲಿ ಹೊಸ ಕೈಗಾರಿಕೆಗಳು ಆರಂಭವಾಗಲಿವೆ. ಬಿಹಾರದ ಯುವಕರಿಗೆ ಇಲ್ಲಿ ಉದ್ಯೋಗಗಳು ಸಿಗಲಿವೆ; ನಾವು ಅದಕ್ಕಾಗಿ ಕೆಲಸ ಮಾಡುತ್ತೇವೆ. ಬಿಹಾರಕ್ಕೆ ಹೂಡಿಕೆ ಸಿಗಲಿದೆ. ಮತ್ತು ಹೆಚ್ಚಿನ ಉದ್ಯೋಗಗಳು ಬರಲಿವೆ. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ತೀರ್ಥಯಾತ್ರೆಗಳು ಅಭಿವೃದ್ಧಿ ಕಾಣಲಿವೆ.