ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election 2025 Results: ಗೆದ್ದರೆ ಮಾತ್ರ ಮಾಸ್ಕ್‌ ತೆಗೆಯುವೆ ಎಂದಿದ್ದ ಪುಷ್ಪಮ್‌ ಪ್ರಿಯಾಗೆ ಮುಖಭಂಗ

ಮುಖ ಮುಚ್ಚಿಕೊಂಡು ಸಂಪೂರ್ಣ ಕಪ್ಪು ಧಿರಿಸಿನಲ್ಲಿ ನಾಮಪತ್ರ ಸಲ್ಲಿಸಲು ಬಂದು ಎಲ್ಲರ ಗಮನ ಸೆಳೆದಿದ್ದ ಮಾಜಿ ಶಾಸಕರ ಪುತ್ರಿ ಪುಷ್ಪಮ್ ಪ್ರಿಯಾ ಚೌಧರಿ (Pushpam Priya Choudhary) ಚುನಾವಣೆಯಲ್ಲಿ ಗೆದ್ದ ಮೇಲೆಯೇ ಮಾಸ್ಕ್‌ ತೆಗೆಯುವ ಪ್ರತಿಜ್ಞೆ ಮಾಡಿದ್ದರು. ಆದರೆ ಇದೀಗ ಅವರು ಚುನಾವಣೆಯಲ್ಲಿ 81,000 ಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ. ಹೀಗಾಗಿ ಅವರು ತಮ್ಮ ಮಾಸ್ಕ್‌ ಅನ್ನು ತೆಗೆಯುತ್ತಾರೆಯೇ ಇಲ್ಲವೇ ಎನ್ನುವ ಚರ್ಚೆಗಳು ಶುರುವಾಗಿದೆ.

ಮಾಸ್ಕ್‌ನಿಂದಲೇ ಫೇಮಸ್‌ ಆಗಿದ್ದ ಪುಷ್ಪಮ್ ಪ್ರಿಯಾ ಅವರ ರಿಸಲ್ಟ್‌ ಏನಾಯ್ತು?

ಪುಷ್ಪಮ್ ಪ್ರಿಯಾ ಚೌಧರಿ (ಸಂಗ್ರಹ ಚಿತ್ರ) -

ಬಿಹಾರ: ಧಾರ್ಮಿಕ, ಜಾತಿ ಗಡಿ ರೇಖೆಗಳನ್ನು ಮೀರಿ ಬಿಹಾರದಲ್ಲಿ (Bihar Election 2025 Results) ಹೊಸ ಬ್ರ್ಯಾಂಡ್‌ ರಾಜಕೀಯವನ್ನು ಪರಿಚಯಿಸಲು ವಿಧಾನ ಸಭಾ ಚುನಾವಣಾ ಕಣಕ್ಕೆ ಎಂಟ್ರಿ ಕೊಟ್ಟಿದ್ದ ದರ್ಭಾಂಗದ ಮಾಜಿ ಜೆಡಿಯು ಶಾಸಕ ವಿನೋದ್ ಕುಮಾರ್ ಚೌಧರಿ ಅವರ ಪುತ್ರಿ, ದಿ ಪ್ಲೂರಲ್ಸ್ ಪಾರ್ಟಿಯ ನಾಯಕಿ (Plurals Party chief) ಪುಷ್ಪಮ್ ಪ್ರಿಯಾ ಚೌಧರಿ (Pushpam Priya Choudhary) ಇದೀಗ ಭಾರಿ ಅಂತರದಿಂದ ಸೋತಿದ್ದಾರೆ. ನಾಮ ಪತ್ರ ಸಲ್ಲಿಕೆಯ ವೇಳೆ ಚುನಾವಣೆಯಲ್ಲಿ ಗೆದ್ದ ಮೇಲೆಯೇ ಮಾಸ್ಕ್‌ ತೆಗೆಯುವುದಾಗಿ ಪ್ರತಿಜ್ಞೆ ಮಾಡಿದ್ದ ಪುಷ್ಪಮ್ ಪ್ರಿಯಾ ಈಗ ಏನು ಮಾಡುತ್ತಾರೆ ಎನ್ನುವ ಕುತೂಹಲ ಶುರುವಾಗಿದೆ.

ಇಂಗ್ಲೆಂಡ್ ನಲ್ಲಿ ಓದಿ ಬಂದಿದ್ದ ಪುಷ್ಪಮ್ ಪ್ರಿಯಾ ಕಪ್ಪು ಉಡುಪು ಮತ್ತು ಮುಖವಾಡ ಧರಿಸಿಕೊಂಡು ನಾಮಪತ್ರ ಸಲ್ಲಿಸಲು ಬಂದಿದ್ದು, ಬಿಹಾರದ ರಾಜಕೀಯದಲ್ಲಿ ಉದಯೋನ್ಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: Chirag Paswan: ಬಿಹಾರದಲ್ಲಿ ಎನ್‌ಡಿಎಗೆ ಬಹುಮತ; ಚಿರಾಗ್‌ ಪಾಸ್ವಾನ್‌ಗೆ ಉಪಮುಖ್ಯಮಂತ್ರಿ ಪಟ್ಟ?

ಬಿಹಾರದ ಚುನಾವಣೆಯಲ್ಲಿ ಗೆಲ್ಲುವವರೆಗೆ ಮುಖವಾಡ ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದ ದಿ ಪ್ಲೂರಲ್ಸ್ ಪಾರ್ಟಿಯ ಮುಖ್ಯಸ್ಥೆ ಪುಷ್ಪಮ್ ಪ್ರಿಯಾ ಚೌಧರಿ ದರ್ಭಂಗಾ ಸ್ಥಾನದಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದರು. ಇದೀಗ ಅವರು ಭಾರಿ ಅಂತರದಿಂದ ಹಿನ್ನಡೆ ಅನುಭವಿಸಿದರೆ.

ಎರಡು ಹಂತದಲ್ಲಿ ನಡೆದಿದ್ದ ಬಿಹಾರ ವಿಧಾನ ಸಭಾ ಚುನಾವಣೆಯ ಮತಗಳ ಎಣಿಕೆ ಕಾರ್ಯ ಇನ್ನೂ ನಡೆಯುತ್ತಿದೆ. 2020ರಲ್ಲಿ ದರ್ಭಂಗಾದಲ್ಲಿ ಬಿಜೆಪಿಯ ಸಂಜಯ್ ಸರೋಗಿ ಗೆದಿದ್ದು, ಈ ಬಾರಿ 21 ಸುತ್ತಿನ ಎಣಿಕೆಯ ಅನಂತರ ಅವರು ಮುನ್ನಡೆ ಸಾಧಿಸಿದ್ದಾರೆ. ಇವರ ಬಳಿಕ 81,000ಕ್ಕೂ ಹೆಚ್ಚು ಮತ ಪಡೆದಿರುವ ಪುಷ್ಪಮ್ ಪ್ರಿಯಾ ಇದ್ದಾರೆ. ಇವರಿಬ್ಬರ ಅನಂತರ ವಿಕಾಸಶೀಲ ಇನ್ಸಾನ್ ಪಕ್ಷದ (ವಿಐಪಿ) ಉಮೇಶ್ ಸಹಾನಿ ಅವರು ಅತೀ ಹೆಚ್ಚಿನ ಅಂದರೆ 19,000ಕ್ಕೂ ಹೆಚ್ಚು ಮತಗಳಿಸಿದ್ದಾರೆ.

ಧಾರ್ಮಿಕ, ಜಾತಿ ರೇಖೆಗಳನ್ನು ಮೀರಿ ಹೊಸ ಬ್ರ್ಯಾಂಡ್ ರಾಜಕೀಯವನ್ನು ಬಿಹಾರಕ್ಕೆ ಪರಿಚಯಿಸಲು ಪುಷ್ಪಮ್ ಪ್ರಿಯಾ 2020 ರಲ್ಲಿ ದಿ ಪ್ಲೂರಲ್ಸ್ ಪಾರ್ಟಿಯನ್ನು ಸ್ಥಾಪಿಸಿದರು. ಈ ಪಕ್ಷವು ರಾಜ್ಯದ ಎಲ್ಲಾ 243 ಸ್ಥಾನಗಳಲ್ಲಿ 'ಶಿಳ್ಳೆ' ಯ ಚಿಹ್ನೆಯನ್ನು ಪಡೆದು ಸ್ಪರ್ಧಿಸುತ್ತಿದೆ.

ಜೆಡಿಯುನ ಮಾಜಿ ಶಾಸಕ ವಿನೋದ್ ಕುಮಾರ್ ಚೌಧರಿ ಅವರ ಮಗಳಾಗಿರುವ ಪುಷ್ಪಮ್ ಪ್ರಿಯಾ ಅವರ ಅಜ್ಜ ಪ್ರೊಫೆಸರ್ ಉಮಾಕಾಂತ್ ಚೌಧರಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತರಾಗಿದ್ದರು. ಸಮತಾ ಪಕ್ಷದ ಸ್ಥಾಪಕ ಸದಸ್ಯರೂ ಆಗಿದ್ದರು. ಇವರ ಚಿಕ್ಕಪ್ಪ ವಿನಯ್ ಕುಮಾರ್ ಚೌಧರಿ ಅವರು 2020 ರ ವಿಧಾನಸಭಾ ಚುನಾವಣೆಯಲ್ಲಿ ಬೇಣಿಪುರದಿಂದ ಗೆದ್ದ ಜೆಡಿಯು ನಾಯಕರಾಗಿದ್ದಾರೆ.

ಇದನ್ನೂ ಓದಿ: Bihar Election 2025 Results: ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿಗೆ ಅಭಿನಂದನೆ: ಆರ್‌.ಅಶೋಕ್‌ ವ್ಯಂಗ್ಯ

ಇಂಗ್ಲೆಂಡ್ ನಲ್ಲಿ ಓದಿ ಬಂದಿರುವ ಪುಷ್ಪಮ್ ಪ್ರಿಯಾ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಬಿಹಾರದ ಪ್ರವಾಸೋದ್ಯಮ ಮತ್ತು ಆರೋಗ್ಯ ಇಲಾಖೆಗಳಲ್ಲಿ ಸಲಹೆಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2020ರಲ್ಲಿ ಇವರ ಪಕ್ಷವು 148 ಸ್ಥಾನಗಳಲ್ಲಿ ಸ್ಪರ್ಧಿಸಿ ಸೋತಿದೆ.