ಕಾಂಗ್ರೆಸ್ ಎಂದರೆ 3 ಸಿ: ಕೈ ಪಕ್ಷಕ್ಕೆ ಹೊಸ ವ್ಯಾಖ್ಯಾನ ನೀಡಿದ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ
Chalavadi Narayanaswamy: ಕಾಂಗ್ರೆಸ್ ಎಂದರೆ 3 ಸಿ. ಅಂದರೆ, ಕರಪ್ಶನ್ ಅಂದರೆ ಭ್ರಷ್ಟಾಚಾರ. ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ ನಿಪುಣರು. ಮೋದಿ ಅವರ ಸರ್ಕಾರ 12 ವರ್ಷ ಪೂರೈಸುತ್ತಿದ್ದು, ಈ 12 ವರ್ಷಗಳಲ್ಲಿ ಭ್ರಷ್ಟಾಚಾರದ ಆರೋಪಗಳಿಲ್ಲ. ಕಾಂಗ್ರೆಸ್ಸೆಂದರೆ ಕಮಿಷನ್; ಟೆಂಡರ್ ಹಾಕು ಕಮಿಷನ್ ಹೊಡಿ ಎಂಬ ನೀತಿ. ಅದಾದ ಮೇಲೆ ಕನ್ನಿಂಗ್, ಕಮ್ಯುನಲ್, ಕಾಸ್ಟಿಸಂ, ಓಲೈಕೆಗಳು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ (ಸಂಗ್ರಹ ಚಿತ್ರ) -
ದೊಡ್ಡಬಳ್ಳಾಪುರ, ಫೆ. 6: ಈ ಬಾರಿ ಕೇಂದ್ರ ಬಜೆಟ್‍ನಲ್ಲಿ 3 ಸಿಗಳಿವೆ. ಒಂದನೆಯದು ಕಂಟಿನ್ಯೂಯಿಟಿ, ಕಳೆದ ಬಜೆಟ್‍ನ ಮುಂದುವರಿಕೆ ಇದರಲ್ಲಿದೆ. ಯಾವ ಬೆಲೆಯೂ ಹೆಚ್ಚಾಗಿಲ್ಲ, ತೆರಿಗೆಯೂ ಹೆಚ್ಚು ಕಡಿಮೆ ಆಗಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಶುಕ್ರವಾರ ಮಾತನಾಡಿದ ಅವರು, ಕಳೆದ ಬಾರಿ 12 ಲಕ್ಷ ರುಪಾಯಿಗೆ ತೆರಿಗೆ ವಿನಾಯಿತಿ ನೀಡಿದ್ದರು. ಅದರಲ್ಲಿ ವ್ಯತ್ಯಾಸ ಮಾಡಿಲ್ಲ. ಜನರಿಗೆ ಸೌಲಭ್ಯ ಕೊಡಲು ಒತ್ತು ಕೊಟ್ಟಿದ್ದಾರೆ. 2ನೇ ಸಿ ಕ್ರೆಡಿಬಿಲಿಟಿ. ಆ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದ್ದೇವೆ. 3ನೇ ಸಿ- ಕಮಿಟ್‍ಮೆಂಟ್. ನಾವು ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳಿಲ್ಲ. ನಾವು ಬದ್ಧತೆಯನ್ನು ಪ್ರದರ್ಶಿಸಿದ್ದೇವೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷದ 3 ಸಿ. ಅಂದರೆ, ಕರಪ್ಶನ್ ಅಂದರೆ ಭ್ರಷ್ಟಾಚಾರ. ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ ನಿಪುಣರು. ಮೋದಿ ಅವರ ಸರ್ಕಾರ 12 ವರ್ಷ ಪೂರೈಸುತ್ತಿದ್ದು, ಈ 12 ವರ್ಷಗಳಲ್ಲಿ ಭ್ರಷ್ಟಾಚಾರದ ಆರೋಪಗಳಿಲ್ಲ. ಕಾಂಗ್ರೆಸ್ಸೆಂದರೆ ಕಮಿಷನ್; ಟೆಂಡರ್ ಹಾಕು ಕಮಿಷನ್ ಹೊಡಿ ಎಂಬ ನೀತಿ. ಅದಾದ ಮೇಲೆ ಕನ್ನಿಂಗ್, ಕಮ್ಯುನಲ್, ಕಾಸ್ಟಿಸಂ, ಓಲೈಕೆಗಳು ಎಂದು ಅವರು ಆರೋಪಿಸಿದರು.
ಈ ಸಾರಿಯ ಕೇಂದ್ರ ಬಜೆಟ್‍ನಲ್ಲಿ ಇಲ್ಲಿ ಯಾರನ್ನೂ ಓಲೈಕೆ ಮಾಡುವ ಕೆಲಸವನ್ನು ನಿರ್ಮಲಾ ಸೀತಾರಾಮನ್ ಅವರು ಮಾಡಿಲ್ಲ. ಅದು ಬಿಜೆಪಿಯ ನೀತಿ ಎಂದು ತಿಳಿಸಿದರು. ಕಾಂಗ್ರೆಸ್ ಬಜೆಟ್ ಇದಾಗಿದ್ದರೆ ತಾರತಮ್ಯ ಮತ್ತು ಓಲೈಕೆಗಳನ್ನು ಬಹಳಷ್ಟು ಕಾಣಬಹುದಾಗಿತ್ತು ಎಂದು ಟೀಕಿಸಿದರು.
ಬೇರೆಯವರೆಲ್ಲ ಪಾಪಿಗಳೇ? ಎಂಥ ಸರ್ಕಾರ ಇದು?
ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಒಂದು ತೀರ್ಮಾನ ಮಾಡಿದ್ದಾರೆ. ಮುಸಲ್ಮಾನರಿಗೆ ಮಾತ್ರ ಅವರ ಸಾಲದ ಮೇಲೆ ಬಡ್ಡಿ ವಜಾ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಬೇರೆಯವರೆಲ್ಲ ಪಾಪಿಗಳೇ? ಎಂಥ ಸರ್ಕಾರ ಇದು? ಈ ಸರ್ಕಾರ ಮುಸ್ಲಿಮರಿಗಾಗಿಯೇ ಹುಟ್ಟಿದೆ ಎಂದು ಕಾಣುತ್ತದೆ ಎಂದು ಆರೋಪಿಸಿದರು.
ನಾವು ಮುಸ್ಲಿಮರ, ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಆದರೆ ಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಎಲ್ಲರೂ ಒಂದೇ. ಹಿಂದೂಗಳು ಹೇಗೋ ಅಲ್ಪಸಂಖ್ಯಾತರೂ ಹಾಗೇ. ಎಲ್ಲರನ್ನೂ ಜತೆಯಲ್ಲಿ ಒಯ್ಯಬೇಕು. ಅವರನ್ನು ಪ್ರತ್ಯೇಕವಾಗಿ ನೋಡಬಾರದು. ಬೆಂಗಳೂರಿನಲ್ಲಿ ಜಿಬಿಎ ಚುನಾವಣೆ ಬರುತ್ತಿದೆ. ಅವರನ್ನು ಓಲೈಕೆ ಮಾಡಲು ಅವರ 700 ಕೋಟಿ ರುಪಾಯಿ ಸಾಲದ ಬಡ್ಡಿ ವಜಾ ನಿರ್ಧಾರ ಮಾಡಿದ್ದಾರೆ. ಅದು ಓಲೈಕೆ ಎಂದು ದೂರಿದರು.
ಇದು ಯುವಜನತೆಯ ಬಜೆಟ್ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಈ ಬಜೆಟ್ ಅನ್ನು ಯುವಕರಿಗೆ ಒಪ್ಪಿಸಿದ್ದಾರೆ. ಕಳೆದ ವರ್ಷ ದೇಶದಲ್ಲಿ ಎಂಎಸ್‍ಎಂಇಗಳು 2.30 ಕೋಟಿ ಜನರಿಗೆ ಉದ್ಯೋಗ ನೀಡಿವೆ. ಆ ಉದ್ದೇಶದಲ್ಲಿ ಇನ್ನೂ ಹೆಚ್ಚು ಎಂಎಸ್‍ಎಂಇ, ಕಾರ್ಖಾನೆ ನಡೆಸುವವರಿಗೆ ಉತ್ತೇಜನ ಕೊಟ್ಟಿದ್ದಾರೆ. ಇದು ಯುವಜನತೆಗೆ ಅವಕಾಶ ಹೆಚ್ಚಿಸುವ ಯುವ ಬಜೆಟ್ ಎಂದು ತಿಳಿಸಿದರು.
ಕಾಂಗ್ರೆಸ್ ಕಾಲದಲ್ಲಿ ಎಷ್ಟು ಸಾರಿ ಹೆಸರು ಬದಲಿಸಿಲ್ಲ ?
ವಿಬಿ ಜಿ ರಾಮ್ ಜಿ ನಲ್ಲಿ ಗಾಂಧಿ ಹೆಸರು ತೆಗೆದುದೇಕೆ ಎಂದು ಪ್ರಶ್ನಿಸುತ್ತಾರೆ. ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣ ಈಗ ಡಾ.ಪರಮೇಶ್ವರ್ ಕ್ರೀಡಾಂಗಣವಾಗಿದೆ. ಹಾಗಿದ್ದರೆ ನೀವ್ಯಾಕೆ ತೆಗೆದಿರಿ? ಗಾಂಧೀಜಿ ಹೆಸರು ತೆಗೆದು ಪರಮೇಶ್ವರ್ ಎಂದು ಬದಲಿಸಿದಾಗ ನಿಮಗೇನೂ ಅನಿಸಿಲ್ಲ. ನರೇಗಾ, ಗ್ರಾಮೀಣ ಉದ್ಯೋಗ, ಕೂಲಿಗಾಗಿ ಕಾಳು, ರೋಜ್‍ಗಾರ್ ಯೋಜನೆ, ನೆಹರೂ ರೋಜ್‍ಗಾರ್ ಯೋಜನೆ, 2009ಕ್ಕೆ ಮನ್‍ರೇಗಾ ಆಗಿದೆ. ನಿಮ್ಮ ಕಾಂಗ್ರೆಸ್ ಕಾಲದಲ್ಲಿ ಎಷ್ಟು ಸಾರಿ ಹೆಸರು ಬದಲಿಸಿಲ್ಲ ಎಂದು ಪ್ರಶ್ನಿಸಿದರು.
ಹಾಸನ ಮೆಗಾ ಡೇರಿ ವಿಸ್ತರಣೆಗೆ 150 ಕೋಟಿ ಸಾಲ ನೀಡಲು ಕೇಂದ್ರ ಸಮ್ಮತಿ
ಕಾಂಗ್ರೆಸ್ಸಿನವರದು ಸ್ಕೀಂ ಅಲ್ಲ; ಅದು ಸ್ಕ್ಯಾಮ್ ಆಗಿತ್ತು
ಹೆಸರನ್ನು ಜೋಡಿಸಿದ್ದಕ್ಕೆ ಮನ್‍ರೇಗಾ ಆಗಿದೆ. ನಾವು ಅದೇ ಯೋಜನೆಯನ್ನು ಇನ್ನಷ್ಟು ಉನ್ನತೀಕರಿಸಿ, ಜನರಿಗೆ ಒಳ್ಳೆಯದಾಗಲೆಂದು 100 ದಿನ ಇದ್ದುದನ್ನು 125 ದಿನಕ್ಕೆ ಏರಿಸಿದ್ದೇವೆ. 3 ತಿಂಗಳಾದರೂ ದುಡ್ಡೇ ಕೊಡುತ್ತಿರಲಿಲ್ಲ. ಅಂಥದ್ದನ್ನು ಒಂದೇ ವಾರದಲ್ಲಿ ಕೊಡಬೇಕೆಂದು ಮಾಡಿದ್ದೇವೆ. ಹಿಂದೆ, ಯಂತ್ರಗಳಲ್ಲಿ ಕೆಲಸ, ವಿವಿಧ ಹೆಸರಿನ ಬ್ಯಾಂಕ್ ಖಾತೆ ತೆರೆದು ಡೆಬಿಟ್ ಕಾರ್ಡ್ ತೆಗೆದುಕೊಂಡು ದುಡ್ಡು ಪಡೆಯುವ ಕಾರ್ಯ ನಡೆಯುತ್ತಿತ್ತು. ಕಾಂಗ್ರೆಸ್ಸಿನವರದು ಸ್ಕೀಂ ಅಲ್ಲ; ಅದು ಸ್ಕ್ಯಾಮ್ ಆಗಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ.