ಬಿಹಾರ: ನನ್ನ ವಿರುದ್ದ ಪಿತೂರಿ (conspiracy) ನಡೆಸಲಾಗುತ್ತಿದೆ. ಇದರಲ್ಲಿ ಐವರು ಜೈಚಂದ್ (Jaichands) ಗಳಾದ ಮುಖೇಶ್ ರೌಶನ್, ಸಂಜಯ್ ಯಾದವ್, ಶಕ್ತಿ ಸಿಂಗ್ ಯಾದವ್, ರಮೀಜ್ ಮತ್ತು ಸುನಿಲ್ ಸಿಂಗ್ ಸೇರಿದ್ದಾರೆ. ಇವರ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಬಿಹಾರದ (Bihar) ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ (Tej Pratap Yadav) ಹೇಳಿದರು. ನಾನು ಇತ್ತೀಚೆಗೆ ಖಿನ್ನತೆಯಿಂದ ಬಳಲುತ್ತಿದ್ದೇನೆ. ಜೈಚಂದ್ ಗಳು ಕೆಲವು ತಿಂಗಳಿನಿಂದ ನನಗೆ ಸಂಬಂಧ ಹೊಂದಿರುವ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನುವ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಜೆಜೆಡಿ ಮುಖ್ಯಸ್ಥ ಮತ್ತು ಲಾಲು ಪ್ರಸಾದ್ ಯಾದವ್ ಅವರಿಂದ ದೂರವಾಗಿರುವ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಈ ಹಿಂದೆ ಬಿಹಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಮಾಜಿ ಸಚಿವರಾಗಿದ್ದರು. ಕೆಲವು ತಿಂಗಳುಗಳ ಹಿಂದೆ ಇವರು ಸಂಬಂಧ ಹೊಂದಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು. ಇದು ತಮ್ಮ ಮಾನಹಾನಿ ಮಾಡುವ ಪಿತೂರಿ ಎಂದು ತೇಜ್ ಪ್ರತಾಪ್ ತಿಳಿಸಿದರು.
Bengaluru Hotels: ಇನ್ಮುಂದೆ ಹೋಟೆಲಲ್ಲಿ ಗಂಟೆಗಟ್ಟಲೆ ಮಾತಾಡ್ತಾ ಕುಳಿತಿರುವಂತಿಲ್ಲ! ಅದಕ್ಕೂ ಟೇಬಲ್ ಚಾರ್ಜ್!
ಈ ಪಿತೂರಿಯಲ್ಲಿ ಐವರು ಜೈಚಂದ್ ಗಳು ಸೇರಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಇತ್ತೀಚೆಗೆ ನಾನು ಮಕರ ಸಂಕ್ರಾಂತಿ ಸಂದರ್ಭದಲ್ಲಿ ಔತಣಕೂಟವನ್ನು ಆಯೋಜಿಸಿದ್ದೆ. ಇದು ನನ್ನ ಪ್ರತಿಸ್ಪರ್ಧಿಗಳಿಗೆ ಸವಾಲೊಡ್ಡಿದ್ದು, ನನ್ನ ಪಕ್ಷದ ಭವಿಷ್ಯದ ಬಗ್ಗೆ ಎಚ್ಚರದಿಂದಿರುವಂತೆ ಮಾಡಿದೆ ಎಂದು ತಿಳಿಸಿದರು.
ತೇಜ್ ಪ್ರತಾಪ್ ಯಾದವ್ ಅವರ ಗೆಳತಿ ಎಂದು ಹೇಳಲಾಗುವ ಮಹಿಳೆಯೊಂದಿಗೆ 12 ವರ್ಷಗಳಿಂದ ಸಂಬಂಧ ಹೊಂದಿದ್ದಾರೆಂದು ಹೇಳುವ ಪೋಸ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಅವರನ್ನು ರಾಷ್ಟ್ರೀಯ ಜನತಾ ದಳದಿಂದ ಹೊರಹಾಕಲಾಯಿತು. ಇದರಲ್ಲಿ ಐವರು ಜೈಚಂದ್ ಗಳ ಕೈವಾಡವಿದ್ದು, ಅವರು ತಮ್ಮ ಪ್ರೊಫೈಲ್ ಅನ್ನು ಹ್ಯಾಕ್ ಮಾಡಿ ಇದನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.
ಡಾರ್ಕ್ ಚಾಕೊಲೇಟ್ ಇಲ್ಲ ವೈಟ್ ಚಾಕೋಲೇಟ್ ಯಾವುದು ಆರೋಗ್ಯಕ್ಕೆ ಸೂಕ್ತ?
ವದಂತಿಗಳಿಂದ ತಾನು ವಿಚಲಿತನಾಗಿದ್ದು, ಮಾನಸಿಕ ಒತ್ತಡದಿಂದ ಬಳಲುತ್ತಿದ್ದೇನೆ. ಈ ಕುರಿತು ನ್ಯಾಯಾಲಯದ ಮೊರೆ ಹೋಗುತ್ತೇನೆ. ಆ ಮಹಿಳೆ ಯಾರೊಂದಿಗೆ ಸಂಬಂಧ ಹೊಂದಿದ್ದಾರೆಂದು ನನಗೆ ತಿಳಿದಿದೆ ಮತ್ತು ಮಗುವಿನ ತಂದೆ ಯಾರು ಎಂದು ಕೂಡ ಹೇಳಬಲ್ಲೆ. ಆದರೆ ಅವರ ಹೆಸರನ್ನು ನನ್ನ ಹೆಸರಿನೊಂದಿಗೆ ಜೋಡಿಸಿ ಮಾನಸಿಕ ಯಾತನೆ ಉಂಟು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.