ಕೊಟ್ಟಾಯಂ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತ್ಯಂತ ಕಿರಿಯ ಪುರಸಭೆ ಅಧ್ಯಕ್ಷೆಯಾಗಿ ( india's youngest municipal chairperson) ಕೇರಳದಲ್ಲಿ (kerala) ದಿಯಾ ಬಿನು ಪುಲ್ಲಿಕ್ಕಕಂಡಮ್ (Diya Binu Pullikkakandam) ಆಯ್ಕೆಯಾಗಿದ್ದಾರೆ. ಪಾಲಾ ಪುರಸಭೆಯ (Pala municipality) 15ನೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ (independent candidate) ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ 21 ವರ್ಷದ ದಿಯಾ ಬಿನು ಅವರನ್ನು ಕೇರಳದ ಮೊದಲ ಜನರಲ್ ಝಡ್ ಅಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಅವರು ದೇಶದ ಅತ್ಯಂತ ಕಿರಿಯ ಪುರಸಭೆಯ ಅಧ್ಯಕ್ಷೆಯಾಗಿ ಗುರುತಿಸಲ್ಪಟ್ಟಿದ್ದಾರೆ.
ಚುನಾವಣೆಯಲ್ಲಿ ಬಂದ ತೀರ್ಪು ಗೊಂದಲಮಯವಾಗಿದ್ದರಿಂದ ಉಂಟಾದ ರಾಜಕೀಯ ಅನಿಶ್ಚಿತತೆಯ ಬಳಿಕ ಕೊಟ್ಟಾಯಂ ಜಿಲ್ಲೆಯ ಪಾಲಾ ಪುರಸಭೆಯ ಅಧ್ಯಕ್ಷೆಯಾಗಿ ದಿಯಾ ಬಿನು ಪುಲ್ಲಿಕ್ಕಕಂಡಮ್ ಅವರನ್ನು ನೇಮಕ ಮಾಡಲಾಗಿದೆ. ದಿಯಾ ಅವರು ಪಾಲಾ ಪುರಸಭೆಯ 15 ನೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ 131 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದರು. ಇವರ ತಂದೆ ಬಿನು ಪುಲ್ಲಿಕ್ಕಕಂಡಮ್ ಮತ್ತು ಚಿಕ್ಕಪ್ಪ ಬಿಜು ಪುಲ್ಲಿಕ್ಕಕಂಡಮ್ ಕೂಡ ಸ್ವತಂತ್ರ ಅಭ್ಯರ್ಥಿಗಳಾಗಿ ಜಯಗಳಿಸಿದರು. ಇದರಿಂದ ಪುಲ್ಲಿಕ್ಕಕಂಡಮ್ ಕುಟುಂಬಕ್ಕೆ ಆಡಳಿತ ಮಂಡಳಿಯ ರಚನೆಯಲ್ಲಿ ಪ್ರಮುಖ ಸ್ಥಾನ ನೀಡಲಾಯಿತು.
ಶಿಕ್ಷಣ ಪಡೆದವರಿಗೆ ನರಕವಾಗ್ತಿದೆಯಾ ಪಾಕಿಸ್ತಾನ? ಪ್ರತಿ ವರ್ಷ ವಲಸೆ ಹೋಗುವವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ!
ದೇಶದ ಅತ್ಯಂತ ಕಿರಿಯ ಪುರಸಭಾ ಅಧ್ಯಕ್ಷೆಯಾಗಿ ಆಯ್ಕೆಯಾದ ದಿಯಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆಯ ಮೂಲಭೂತ ಅಭಿವೃದ್ಧಿ ಮತ್ತು ದೀರ್ಘಾವಧಿಯ ಯೋಜನೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪುರಸಭಾ ಚುನಾವಣೆಯಲ್ಲಿ ತಮ್ಮ ತಂದೆ ಸತತ ಐದನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ. ಅವರು ಮೊದಲು ಕೌನ್ಸಿಲರ್ ಆದಾಗ ನನಗೆ ಒಂದು ವರ್ಷವಷ್ಟೇ ಆಗಿತ್ತು. ಅವರ ಕೆಲಸವನ್ನು ನೋಡುತ್ತಾ ಬೆಳೆದುದರಿಂದ ನನಗೆ ಅದು ಸ್ಫೂರ್ತಿಯಾಯಿತು ಎಂದು ತಿಳಿಸಿದರು.
ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಅರ್ಥಶಾಸ್ತ್ರ ಪದವೀಧರೆಯಾಗಿರುವ ದಿಯಾ, ಪುರಸಭೆಯ ಅಧ್ಯಕ್ಷೆಯಾಗಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸಿದ್ದೇನೆ ಎಂದು ತಿಳಿಸಿದರು.
ದಿಯಾ ಬಿನು ಆಯ್ಕೆಯಾಗಿದ್ದು ಹೇಗೆ?
ಕೊಟ್ಟಾಯಂ ಜಿಲ್ಲೆಯ ಪಾಲಾ ಪುರಸಭೆಯು 26 ಸದಸ್ಯರ ಮಂಡಳಿಯನ್ನು ಹೊಂದಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯಲಿಲ್ಲ. ಇದರಿಂದ ಸ್ವತಂತ್ರ ಅಭ್ಯರ್ಥಿಗಳು ಕಿಂಗ್‌ಮೇಕರ್ ಆಗಿ ಹೊರಹೊಮ್ಮಿದರು.
KAR vs KER: ದೇವದತ್ ಪಡಿಕ್ಕಲ್, ಕರುಣ್ ನಾಯರ್ ಭರ್ಜರಿ ಶತಕ, ಕೇರಳ ಎದುರು ಕರ್ನಾಟಕಕ್ಕೆ ಭರ್ಜರಿ ಜಯ!
ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ 12 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 10 ಸ್ಥಾನಗಳನ್ನು ಪಡೆದುಕೊಂಡಿತು. ನಾಲ್ಕು ಸ್ಥಾನಗಳು ಸ್ವತಂತ್ರ ಅಭ್ಯರ್ಥಿಗಳು ಗೆದ್ದುಕೊಂಡರು. ಇದರಲ್ಲಿ ಪುಲ್ಲಿಕ್ಕಕಂಡಂ ಕುಟುಂಬದ ಮೂವರು ಮತ್ತು ಕಾಂಗ್ರೆಸ್ ಬಂಡಾಯಗಾರ ಮಾಯಾ ರಾಹುಲ್ ಸೇರಿದ್ದಾರೆ. ಹೀಗಾಗಿ ಪುಲಿಕ್ಕಕಂಡಂ ಕುಟುಂಬವು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರಿಂದ ಅಂತಿಮವಾಗಿ ಆಡಳಿತ ಮಂಡಳಿ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.