ಶಿಕ್ಷಣ ಪಡೆದವರಿಗೆ ನರಕವಾಗ್ತಿದೆಯಾ ಪಾಕಿಸ್ತಾನ? ಪ್ರತಿ ವರ್ಷ ವಲಸೆ ಹೋಗುವವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ!
ಪಾಕಿಸ್ತಾನದ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿರುವಾಗಲೇ, ಭಯೋತ್ಪಾದಕ ದೇಶಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೇಶದ ಯುವಕರು ಪಾಕ್ ತೆರೆದು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಕಳೆದ 24 ತಿಂಗಳುಗಳಲ್ಲಿ ಪಾಕಿಸ್ತಾನವು 5,000 ವೈದ್ಯರು, 11,000 ಎಂಜಿನಿಯರ್‌ಗಳು ಮತ್ತು 13,000 ಲೆಕ್ಕಪರಿಶೋಧಕರನ್ನು ಕಳೆದುಕೊಂಡಿದೆ ಎಂದು ವರದಿಯೊಂದು ಬಹಿರಂಗ ಪಡಿಸಿದೆ.
ಸಾಂದರ್ಭಿಕ ಚಿತ್ರ -
ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿರುವಾಗಲೇ, ಭಯೋತ್ಪಾದಕ (Pakistan) ದೇಶಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೇಶದ ಯುವಕರು ಪಾಕ್ ತೆರೆದು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಕಳೆದ 24 ತಿಂಗಳುಗಳಲ್ಲಿ ಪಾಕಿಸ್ತಾನವು 5,000 ವೈದ್ಯರು, 11,000 ಎಂಜಿನಿಯರ್‌ಗಳು ಮತ್ತು 13,000 ಲೆಕ್ಕಪರಿಶೋಧಕರನ್ನು ಕಳೆದುಕೊಂಡಿದೆ ಎಂದು ವರದಿಯೊಂದು ಬಹಿರಂಗ ಪಡಿಸಿದೆ. ಇದು ಕೆಲವು ತಿಂಗಳ ಹಿಂದೆ ಪಾಕಿಸ್ತಾನಿ ವಲಸೆಗಾರರನ್ನು "ಮೆದುಳಿನ ಲಾಭ" ಎಂದು ಕರೆದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಹಲವಾರು ಪಾಕಿಸ್ತಾನಿಗಳು ಅಪಹಾಸ್ಯ ಮಾಡಲು ಕಾರಣವಾಗಿದೆ.
ಅಂಕಿಅಂಶಗಳ ಪ್ರಕಾರ, 2024 ರಲ್ಲಿ ಕನಿಷ್ಠ 727,381 ಪಾಕಿಸ್ತಾನಿಗಳು ಅಧಿಕೃತವಾಗಿ ವಿದೇಶ ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ, ಆದರೆ 2025 ರ ನವೆಂಬರ್ ಅಂತ್ಯದ ವೇಳೆಗೆ 687,246 ವ್ಯಕ್ತಿಗಳು ವಿದೇಶಕ್ಕೆ ಹೋಗಿದ್ದಾರೆ. ಅವರಲ್ಲಿ ಹೆಚ್ಚಿನವರು ಶಿಕ್ಷಣವಂತರು ಎಂದು ವರದಿ ಹೇಳುತ್ತದೆ. 2011 ಮತ್ತು 2024 ರ ನಡುವೆ ಅತೀ ಹೆಚ್ಚು ನರ್ಸ್‌ಗಳು ಪಾಕಿಸ್ತಾನವನ್ನು ತೊರೆದಿದ್ದಾರೆ.
ವಿದೇಶ ವಲಸೆಗೆ ಕಾರಣವೇನು?
ವರದಿಯ ಪ್ರಕಾರ, ಅತಿರೇಕದ ಹಣದುಬ್ಬರ, ಆರ್ಥಿಕ ಅಸ್ಥಿರತೆ, ರಾಜಕೀಯ ಅನಿಶ್ಚಿತತೆ, ದುರ್ಬಲ ಆಡಳಿತ, ಸೀಮಿತ ತಾಂತ್ರಿಕ ವೃತ್ತಿ ಮಾರ್ಗಗಳು ಮತ್ತು ಅಭಿವೃದ್ಧಿಯಾಗದ ಸಂಶೋಧನೆ ಪಾಕಿಸ್ತಾನಿ ಕಾರ್ಮಿಕರನ್ನು ವಿದೇಶಕ್ಕೆ ತಳ್ಳಿವೆ. ಸ್ಪರ್ಧಾತ್ಮಕ ವೇತನ ಮತ್ತು ವಿದೇಶಗಳಲ್ಲಿನ ಉತ್ತಮ ಜೀವನ ಮಟ್ಟಗಳು ಪ್ರತಿಭೆಗಳನ್ನು ವಿದೇಶಕ್ಕೆ ಎಳೆದಿವೆ ಎಂದು ತಜ್ಞರು ಹೇಳುತ್ತಾರೆ. ಡಿಜಿಟಲ್ ಅಸ್ಥಿರತೆಯು ಪಾಕಿಸ್ತಾನವನ್ನು ತೀವ್ರವಾಗಿ ಬಾಧಿಸಿದೆ. 2024 ರಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯಿಂದ ಉಂಟಾದ ಆರ್ಥಿಕ ನಷ್ಟದಲ್ಲಿ ಪಾಕಿಸ್ತಾನವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.
ಗಲ್ಫ್ ರಾಷ್ಟ್ರಗಳ ಒತ್ತಡ ಮಣಿದ ಪಾಕಿಸ್ತಾನ; ಭಿಕ್ಷಕರು, ದಾಖಲೆ ಇಲ್ಲದವರಿಗೆ ದೇಶದಿಂದ ಹೊರಹೋಗಲು ಇಲ್ಲ ಅನುಮತಿ
ಆರ್ಥಿಕತೆ ಕುಸಿತ
ಪಾಕಿಸ್ತಾನದಲ್ಲಿ ತಲಾ ವ್ಯಕ್ತಿಯ ಆದಾಯ ಕುಸಿತವಾಗಿದೆ. ಅವರ ದಿನದ ಸರಾಸರಿ ಆದಾಯವು 372.50 ರೂ. ಆಗಿದೆ. ಅಲ್ಲಿ ಹಣದುಬ್ಬರ ಅಧಿಕವಾಗಿದ್ದು ದಿನನಿತ್ಯದ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಒಂದು ಕಡೆ ಆದಾಯ ಕುಸಿತ, ಮತ್ತೊಂದು ಕಡೆ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಅಲ್ಲಿನ ಜನಜೀವನದ ಅಯೋಮಯವಾಗಿದೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಇವ್ಯಾವುದೂ ಅಲ್ಲಿ ಇಲ್ಲ. ಐದು ವರ್ಷಕ್ಕಿಂತ ಕಡಿಮೆಯಿರುವ ಮಕ್ಕಳಲ್ಲಿ ಶೇ. 40 ಮಕ್ಕಳಲ್ಲಿ ಅಪೌಷ್ಠಿಕತೆಯ ಸಮಸ್ಯೆ ಕಾಡುತ್ತಿದೆ.