ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sugriva's Cave: ಹಂಪಿಯ ಐತಿಹಾಸಿಕ ʼಸುಗ್ರೀವ ಗುಹೆʼ ವೀಕ್ಷಿಸಿದ ರಾಜ್ಯಪಾಲ ಗೆಹ್ಲೋಟ್

Sugriva's Cave: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಭೇಟಿ ವೇಳೆ ಅವರೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಇದ್ದರು. ಇಂದಿನ ಹಂಪಿಯ ಸುಗ್ರೀವ ಗುಹೆಯಲ್ಲೇ ಶ್ರೀರಾಮನು ಹನುಮ೦ತ ಮತ್ತು ಸುಗ್ರೀವನನ್ನು ಭೇಟಿಯಾದ ಎ೦ದು ಹೇಳಲಾಗಿದೆ.

ಹಂಪಿಯ ಐತಿಹಾಸಿಕ ʼಸುಗ್ರೀವ ಗುಹೆʼ ವೀಕ್ಷಿಸಿದ ರಾಜ್ಯಪಾಲ ಗೆಹ್ಲೋಟ್

Profile Prabhakara R Apr 4, 2025 7:22 PM

ಹೊಸಪೇಟೆ: ಕರ್ನಾಟಕದ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು ಶುಕ್ರವಾರ ಹಂಪಿಯಲ್ಲಿರುವ ಐತಿಹಾಸಿಕ ಸುಗ್ರೀವ ಗುಹೆಗೆ (Sugriva's Cave) ಭೇಟಿ ನೀಡಿ ವೀಕ್ಷಿಸಿದರು. ರಾಜ್ಯಪಾಲರೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಇದ್ದರು. ಭೇಟಿಯ ಸಮಯದಲ್ಲಿ ರಾಮಾಯಣದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ಮತ್ತು ಕರ್ನಾಟಕದ ಅಮೂಲ್ಯ ಪರಂಪರೆಯ ಹೆಗ್ಗುರುತಾಗಿರುವ ಈ ಸ್ಥಳದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಕುರಿತು ರಾಜ್ಯಪಾಲರು ಮಾಹಿತಿ ಪಡೆದರು.

Sugriva Cave

ಸುಗ್ರೀವನು, ಸೀತೆಯನ್ನು ಅಪಹರಿಸಿದ್ದ ರಾವಣನನ್ನು ತಲುಪಲು ರಾಮನಿಗೆ ಸಹಾಯ ಮಾಡುವ ವಾನರ ರಾಜ. ಈತನ ರಾಜ್ಯ ಕಿಷ್ಕಿಂದೆ. ಇಂದಿನ ಹಂಪಿಯ ಸುತ್ತಮುತ್ತಲಿನ ಪ್ರದೇಶವನ್ನೇ ರಾಮಾಯಣದ ಕಾಲದ ಕಿಷ್ಕಿಂದೆ ಎಂದು ನಂಬಲಾಗಿದೆ. ಸುಗ್ರೀವ, ರಾಮನ ಸಹಾಯ ಪಡೆದು ತನ್ನನ್ನು ಗಡಿಪಾರು ಮಾಡಿದ್ದ ಅಣ್ಣ ವಾಲಿಯನ್ನು ಸದೆಬಡಿಯುತ್ತಾನೆ. ಅಲ್ಲದೆ ತನಗೆ ಸಹಾಯ ಮಾಡಿದ್ದರಿಂದ ವಾನರ ಸೇನೆಯೊಂದಿಗೆ ರಾಮನಿಗೆ ಸಹಾಯವಾಗಿ ಲಂಕೆಗೆ ಹೋಗುತ್ತಾನೆ. ಇನ್ನು ಹಂಪಿಯ ಸುಗ್ರೀವ ಗುಹೆಯಲ್ಲೇ ಶ್ರೀರಾಮನು ಹನುಮ೦ತ ಮತ್ತು ಸುಗ್ರೀವನನ್ನು ಭೇಟಿಯಾದ ಎ೦ದು ಹೇಳಲಾಗಿದೆ.