ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಕುರಿತು ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ; ಕಾಮಗಾರಿ ತ್ವರಿತಗೊಳಿಸಲು ಸೂಚನೆ

N Chaluvarayaswamy: ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಮಹತ್ವಾಕಾಂಕ್ಷಿ ಬೇಡ್ತಿ-ವರದಾ (ಹಿರೇವಡ್ಡಟ್ಟಿ) ನದಿ ಜೋಡಣೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು ಕೃಷ್ಣಾ ಭಾಗ್ಯ ಜಲ ನಿಗಮದ ಕೇಂದ್ರ ಕಚೇರಿಯಲ್ಲಿ ಜರುಗಿತು.

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಕುರಿತು ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ

-

Profile
Siddalinga Swamy Nov 17, 2026 4:34 PM

ಬೆಂಗಳೂರು, ನ.17: ರಾಜ್ಯದ ಮಹತ್ವಾಕಾಂಕ್ಷಿ ಬೇಡ್ತಿ-ವರದಾ (ಹಿರೇವಡ್ಡಟ್ಟಿ) ನದಿ ಜೋಡಣೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು ಕೃಷ್ಣಾ ಭಾಗ್ಯ ಜಲ ನಿಗಮದ ಕೇಂದ್ರ ಕಚೇರಿಯಲ್ಲಿ, ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರ (N Chaluvarayaswamy) ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು, ರಾಜ್ಯ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳು, ಹಾಗೂ KNNL, VJNL, CNNL, KBJNL ನಿಗಮಗಳ ಎಲ್ಲಾ ವ್ಯವಸ್ಥಾಪಕ ನಿರ್ದೇಶಕರು, ಸಚಿವರ ಆಪ್ತ ಕಾರ್ಯದರ್ಶಿಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಯೋಜನೆಯ ವಿಸ್ತೃತ ಮಾಹಿತಿ

ಬೃಹತ್ ಮೊತ್ತದ ಯೋಜನೆ: ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ - NWDA ಸಿದ್ಧಪಡಿಸುತ್ತಿರುವ ಈ ವಿಸ್ತೃತ ನದಿ ಜೋಡಣೆ ಯೋಜನೆಗೆ ಬರೋಬ್ಬರಿ 9,652.73 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ನೀರಿನ ಸದ್ಬಳಕೆ: ಪಶ್ಚಿಮಕ್ಕೆ ಹರಿಯುವ ಬೇಡ್ತಿ ನದಿಯ 524 Mm3 (ಸುಮಾರು 18.5 TMC) ಹೆಚ್ಚುವರಿ ನೀರನ್ನ ಮುಂಗಾರು ಹಂಗಾಮಿನಲ್ಲಿ ಪೈಪ್‌ಲೈನ್ ಮತ್ತು ಲಿಫ್ಟ್ ಮೂಲಕ ತುಂಗಭದ್ರಾ ಉಪ-ಕಣಿವೆಗೆ ತಿರುಗಿಸಲಾಗುತ್ತದೆ.

ಹಂಚಿಕೆ ವಿವರ: ಲಭ್ಯವಾಗುವ ನೀರಿನಲ್ಲಿ 77 Mm3 ಕುಡಿಯುವ ಉದ್ದೇಶಕ್ಕೆ, 131 Mm3 ಕೈಗಾರಿಕೆಗಳಿಗೆ ಹಾಗೂ 316 Mm3 ನೀರನ್ನ ಕೃಷಿ ಮತ್ತು ನೀರಾವರಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಕೃಷಿ ಹಾಗೂ ಜನತೆಗೆ ಲಾಭ: ಈ ಯೋಜನೆಯಿಂದ ಒಟ್ಟು 70,053 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಸುಮಾರು 20.21 ಲಕ್ಷ ಜನರಿಗೆ ನೇರ ಪ್ರಯೋಜನವಾಗಲಿದೆ.

ಫಲಾನುಭವಿ ಜಿಲ್ಲೆಗಳು: ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ನೀರಿನ ಬವಣೆ ಈ ಯೋಜನೆಯಿಂದ ನೀಗಲಿದೆ.

ಗೋದಾವರಿ-ಕಾವೇರಿ ಜೋಡಣೆ ಲಾಭ: ಬೇಡ್ತಿ-ವರದಾ ಯೋಜನೆಯನ್ನ ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಯೊಂದಿಗೆ ಸಂಯೋಜಿಸಲಾಗಿದ್ದು, ಪರ್ಯಾಯ ವ್ಯವಸ್ಥೆಯಡಿ ಆಲಮಟ್ಟಿ ಜಲಾಶಯದ ಮೂಲಕ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 15.89 TMC ನೀರು ಲಭ್ಯವಾಗಲಿದೆ.

ಸ್ಥಳ ಗುರುತಿಸುವಿಕೆಗೆ ಮತ್ತು ಅರಣ್ಯ ಇಲಾಖೆ ಅನುಮತಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ

ಯೋಜನೆಯ ಮಾರ್ಗಮಧ್ಯೆ ಹಾವೇರಿ ಜಿಲ್ಲೆಯಲ್ಲಿ ನೀರಿನ ಶೇಖರಣಾ ಘಟಕ ನಿರ್ಮಿಸಲು ಸೂಕ್ತ ಸ್ಥಳವನ್ನ ಕೂಡಲೇ ಗುರುತಿಸುವಂತೆ ಹಾಗೂ ನೀರಾವರಿ ಅಚ್ಚುಕಟ್ಟು ಪ್ರದೇಶವನ್ನ ತ್ವರಿತವಾಗಿ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಯೋಜನೆಯ ಸಮೀಕ್ಷೆ ಮತ್ತು ತನಿಖಾ ಕಾರ್ಯಗಳಿಗಾಗಿ ಅರಣ್ಯ ಇಲಾಖೆಯಿಂದ ಅಗತ್ಯವಿರುವ ಅನುಮತಿಗಳನ್ನ ಆದ್ಯತೆಯ ಮೇರೆಗೆ ಶೀಘ್ರವಾಗಿ ಪಡೆದುಕೊಳ್ಳಲು ಸಮನ್ವಯತೆಯಿಂದ ಕೆಲಸ ಮಾಡುವಂತೆಯು ಸಹ ಸಚಿವರು ಸಲಹೆ ನೀಡಿದರು.

ಪತ್ರಿಕೋದ್ಯಮದಲ್ಲಿ ಜನಪ್ರಿಯತೆ ಎಷ್ಟು ಮುಖ್ಯವೋ, ಜವಾಬ್ದಾರಿಯೂ ಅಷ್ಟೇ ಮುಖ್ಯ: ಡಿಸಿಎಂ ಡಾ.ಜಿ.ಪರಮೇಶ್ವರ್‌

ಡಿಪಿಆರ್ ತ್ವರಿತಗೊಳಿಸಲು ಕಟ್ಟುನಿಟ್ಟು ಸೂಚನೆ

ಟೊಪೊಗ್ರಾಫಿಕಲ್ ಮತ್ತು ಜಿಯೋಲಾಜಿಕಲ್ ಸಮೀಕ್ಷೆಗಳು ಸಹ ಪ್ರಗತಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಿ ವಿಸ್ತೃತ ಯೋಜನಾ ವರದಿಯನ್ನ (DPR) ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.