Kodi Mutt Swamiji: ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಇಳಿಸುವುದು ಅಷ್ಟು ಸುಲಭವಲ್ಲ: ಕೋಡಿಮಠ ಶ್ರೀ ಭವಿಷ್ಯ
Kodi Mutt Swamiji: ಹಾಲು ಮತ ಸಮಾಜದವರಲ್ಲಿ ರಾಜ್ಯದ ಅಧಿಕಾರವಿದೆ. ಅವರ ಕೈಯಿಂದ ಅಧಿಕಾರ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸಿಎಂ ಸಿದ್ದರಾಮಯ್ಯ ಅವರು ಅವರಾಗಿಯೇ ಸಿಎಂ ಸ್ಥಾನ ಬಿಡಬೇಕು ಹೊರತು ಯಾರಿಂದಲೂ ಅವರನ್ನು ಇಳಿಸುವುದಕ್ಕೆ ಆಗುವುದಿಲ್ಲ ಎಂದು ಕೋಡಿಮಠದ ಶ್ರೀಗಳು ತಿಳಿಸಿದ್ದಾರೆ.


ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಕುರ್ಚಿಯಿಂದ ಇಳಿಸುವುದು ಸುಲಭವಲ್ಲ ಎಂದು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ ( Kodi Mutt Swamiji) ಭವಿಷ್ಯ ನುಡಿದಿದ್ದಾರೆ. ಯಾದಗಿರಿಯಲ್ಲಿ ಭಾನುವಾರ ಮಾತನಾಡಿರುವ ಅವರು, ಹಾಲು ಮತ ಸಮಾಜವು ಪ್ರಾಚೀನ ಕಾಲದಿಂದ ದೈವರಾಧನೆ ಮಾಡುವ ಸಮಾಜವಾಗಿದೆ. ಹಾಲು ಕೆಟ್ಟರು ಹಾಲು ಸಮಾಜ ಕೆಡದು, ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು. ಹಾಲು ಮತ ಸಮಾಜದವರಲ್ಲಿ ರಾಜ್ಯದ ಅಧಿಕಾರವಿದೆ. ಅವರ ಕೈಯಿಂದ ಅಧಿಕಾರ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸಿಎಂ ಸಿದ್ದರಾಮಯ್ಯ ಅವರು ಅವರಾಗಿಯೇ ಸಿಎಂ ಸ್ಥಾನ ಬಿಡಬೇಕು ಹೊರತು ಯಾರಿಂದಲೂ ಅವರನ್ನು ಇಳಿಸುವುದಕ್ಕೆ ಆಗುವುದಿಲ್ಲ ಎಂದು ಕೋಡಿಮಠದ ಶ್ರೀಗಳು ತಿಳಿಸಿದ್ದಾರೆ.
ಮುಂದೆ ಏನಾಗುತ್ತದೆಂದು ಯುಗಾದಿ ಆದ ಮೇಲೆ ಹೇಳುತ್ತೆನೆ. ನಮ್ಮ ಪ್ರಕಾರ ಬರುವಂತ ದಿನಗಳಲ್ಲಿ ಕರ್ನಾಟಕಕ್ಕೆ ತೊಂದರೆ ತಾಪತ್ರಯಗಳಿಲ್ಲ. ಯುಗಾದಿ ಬಳಿಕ ಮಳೆ ಬೆಳೆ ಚೆನ್ನಾಗಿದೆ, ಯಾವುದೇ ತೊಂದರೆಗಳು ಕಾಣುತ್ತಿಲ್ಲ. ಮತ್ತೆ ಜಾಗತಿಕ ಬಗ್ಗೆ ಬಹಳ ಅಜಾಗರೂಕತೆಯಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಇನ್ನು ಭೀಕರತೆ ಕಾಡುವ ಲಕ್ಷಣಗಳಿವೆ. ಭೂಮಿ ನಡುಗುವುದು, ಸಾವು-ನೋವು ಸಂಭವಿಸೋದು, ಕಟ್ಟಡಗಳು ನೆಲಕ್ಕುರುಳುವುದು ಮುಂದುವರಿಯುತ್ತದೆ.
ಭೂ ಸುನಾಮಿ, ಜಲ ಸುನಾಮಿ, ಬಾಹ್ಯ ಸುನಾಮಿ ಅಂತ ಹೇಳುತ್ತೇವೆ. ಇಲ್ಲಿವರೆಗೆ ಬರಿ ಜಲಸುನಾಮಿ ಆಗುತ್ತಿತ್ತು. ಈ ಬಾರಿ ಭೂಸುನಾಮಿ ಕೂಡ ಆಗುತ್ತದೆ. ಜತೆಗೆ ಭಾಹ್ಯಕಾಶದಲ್ಲೂ ಸುನಾಮಿ ಆಗುತ್ತೆ. ಅದನ್ನು ಯುಗಾದಿ ನಂತರ ಹೇಳುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | ಪತ್ರಿಕಾ ವೃತ್ತಿ ನಿತ್ಯ ಬೆಳಗ್ಗೆ ಆರಂಭವಾಗುವುದೇ ಪತ್ರಿಕಾ ವಿತರಕರಿಂದ: ಕೆ.ವಿ.ಪ್ರಭಾಕರ್
ಲೋಕಸಭಾ ಕ್ಷೇತ್ರಗಳನ್ನು ಕುಗ್ಗಿಸಿದರೆ ಕಾನೂನು ಹೋರಾಟ: ಡಿಕೆಶಿ ಎಚ್ಚರಿಕೆ
ಮಂಗಳೂರು: ಸಂಸತ್ತಿನಲ್ಲಿ ದಕ್ಷಿಣ ರಾಜ್ಯಗಳ ಸಂಖ್ಯಾಬಲವನ್ನು ಕಡಿಮೆ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದ್ದು, ಕಾಂಗ್ರೆಸ್ ಇದರ ವಿರುದ್ಧ ಹೋರಾಟ ಮಾಡಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಮಂಗಳೂರು ವಿಮಾನ ನಿಲ್ದಾಣದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮಾಡಲು ಮುಂದಾಗಿರುವ ಬಗ್ಗೆ ಕೇಳಿದಾಗ, ಕೇಂದ್ರ ಸರ್ಕಾರ ಸಂಸತ್ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲು ಮುಂದಾಗಿರುವುದನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ. ಇದು ಸರಿಯಲ್ಲ. ಇದರ ವಿರುದ್ಧ ಚುನಾವಣಾ ಆಯೋಗ, ನ್ಯಾಯಾಲಯಗಳ ಮೂಲಕ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | HD Kumarswamy : ICAR-IHR ಗೆ ಡೀಮ್ಡ್ ವಿವಿ ಸ್ಥಾನಮಾನ ನೀಡುವ ಬಗ್ಗೆ ಪ್ರಧಾನ್ ಜೊತೆ ಚರ್ಚೆ; HD ಕುಮಾರಸ್ವಾಮಿ