ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳು ಯಾರು ಗೊತ್ತೇ? ಇವರೇ ನೋಡಿ

ಜೆಡಿಯು ನಾಯಕ ನಿತೀಶ್ ಕುಮಾರ್ ಬಿಹಾರದಲ್ಲಿ ಹತ್ತನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರು ದೇಶದಲ್ಲಿ ಅತೀ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳ ವಿವರ ಇಲ್ಲಿದೆ.

ನಿತೀಶ್ ಕುಮಾರ್‌, ಪವನ್ ಕುಮಾರ್ ಚಾಮ್ಲಿಂಗ್, ನವೀನ್ ಪಟ್ನಾಯಕ್, ಜ್ಯೋತಿ ಬಸು

ನವದೆಹಲಿ: ಜೆಡಿಯು ನಾಯಕ ನಿತೀಶ್ ಕುಮಾರ್ (JDU leader Nitish Kumar) ರಾಜ್ಯದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (National Democratic Alliance) ಮತ್ತೆ ಬಿಹಾರದಲ್ಲಿ ಸರ್ಕಾರ ರಚನೆಯ ಸಿದ್ಧತೆ ಮಾಡಿಕೊಂಡಿದೆ. ನಿತೀಶ್ ಕುಮಾರ್ (Bihar cm Nitish Kumar) ಅವರು ಬಿಹಾರದಲ್ಲಿ ಗುರುವಾರ ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪಾಟ್ನಾದ (Patna) ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಹಾರದ ವಿಧಾನ ಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯ ಸಾಧಿಸಿದ್ದು, 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆದ್ದುಕೊಂಡಿದೆ.

ಜೆಡಿಯು ನಾಯಕ ನಿತೀಶ್ ಕುಮಾರ್ ಮಾತ್ರವಲ್ಲ ದೇಶದಲ್ಲಿ ಇನ್ನು ಹಲವು ನಾಯಕರು ಅತೀ ಹೆಚ್ಚು ಕಾಲ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾಗಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: India defense deal: ಭಾರತಕ್ಕೆ ಜಾವೆಲಿನ್, ಎಕ್ಸಾಲಿಬರ್ ಕ್ಷಿಪಣಿಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ

ಪವನ್ ಕುಮಾರ್ ಚಾಮ್ಲಿಂಗ್

ಸಿಕ್ಕಿಂ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸತತ ಐದು ಬಾರಿಗೆ ಗೆಲುವು ದಾಖಲಿಸಿದ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಪವನ್ ಕುಮಾರ್ ಚಾಮ್ಲಿಂಗ್ ಭಾರತದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರು 1994 ರಿಂದ 2019 ರವರೆಗೆ ಅಂದರೆ ಒಟ್ಟು 24 ವರ್ಷ ಮತ್ತು 165 ದಿನಗಳವರೆಗೆ ಅಧಿಕಾರದಲ್ಲಿದ್ದರು.

ನವೀನ್ ಪಟ್ನಾಯಕ್

ಒಡಿಶಾದ ಬಿಜು ಜನತಾದಳದ ನಾಯಕ ನವೀನ್ ಪಟ್ನಾಯಕ್ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದರು. ಇವರು 2000ರಲ್ಲಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದು, 2024ರವರೆಗೆ ಅಧಿಕಾರದಲ್ಲಿದ್ದರು. 2024ರ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ ಸೋಲಿನೊಂದಿಗೆ ಇವರ ಅಧಿಕಾರಾವಧಿ ಕೊನೆಗೊಂಡಿತು.

ಜ್ಯೋತಿ ಬಸು

ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ನಾಯಕ ಜ್ಯೋತಿ ಬಸು 1977ರಿಂದ 2000 ರವರೆಗೆ ಎರಡು ದಶಕಗಳಿಗೂ ಹೆಚ್ಚು ಕಾಲ ಬಂಗಾಳದ ಮುಖ್ಯಮಂತ್ರಿಯಾಗಿದ್ದರು. ಇವರು ಬಂಗಾಳದ ಆರನೇ ಮತ್ತು ದೀರ್ಘಾವಧಿಯವರೆಗೆ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಿದ್ದು, ಭಾರತದ ಪ್ರಧಾನಿಯಾಗುವ ಅವಕಾಶವಿದ್ದರೂ ಅದನ್ನು ತಿರಸ್ಕರಿಸಿದ್ದರು.

ಗೆಗಾಂಗ್ ಅಪಾಂಗ್

ಅರುಣಾಚಲ ಪ್ರದೇಶದ 3 ನೇ ಮುಖ್ಯಮಂತ್ರಿಯಾಗಿದ್ದ ಗೆಗಾಂಗ್ ಅಪಾಂಗ್ ಎರಡು ಪ್ರತ್ಯೇಕ ಅವಧಿಗಳಲ್ಲಿ ಸುಮಾರು 23 ವರ್ಷಗಳ ಕಾಲ ಅಧಿಕಾರದಲ್ಲಿದ್ದರು. 1980ರಿಂದ 1999 ರವರೆಗೆ ಮೊದಲ ಬಾರಿಗೆ ಮತ್ತು 2003 ರಿಂದ 2007 ರವರೆಗೆ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದರು.

ಲಾಲ್ ತನ್ಹಾವ್ಲಾ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಲಾಲ್ ತನ್ಹಾವ್ಲಾ ಅವರು ಮಿಜೋರಾಂನಲ್ಲಿ ಮೂರು ಪ್ರತ್ಯೇಕ ಅವಧಿಗಳಿಗೆ ಮುಖ್ಯಮಂತ್ರಿಯಾಗಿದ್ದರು. ಈಶಾನ್ಯದಲ್ಲಿ ಅತೀ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ನಾಯಕರಾಗಿ ಇವರು ಗುರುತಿಸಿಕೊಂಡಿದ್ದಾರೆ.

ವೀರಭದ್ರ ಸಿಂಗ್

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹಿರಿಯ ನಾಯಕ ವೀರಭದ್ರ ಸಿಂಗ್ ಅವರು ಹಿಮಾಚಲ ಪ್ರದೇಶದಲ್ಲಿ ಮೊದಲ ಬಾರಿಗೆ 1983ರಲ್ಲಿ ಅಧಿಕಾರಕ್ಕೇರಿದರು. ರಾಜ್ಯದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡ ಇವರು ಎರಡು ದಶಕಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರು.

ಮಾಣಿಕ್ ಸರ್ಕಾರ್

ತ್ರಿಪುರದಲ್ಲಿ 1998 ರಿಂದ 2018 ರವರೆಗೆ ಸಿಪಿಐ(ಎಂ)ನ ಮಾಣಿಕ್ ಸರ್ಕಾರ್ ಸತತ ನಾಲ್ಕು ಬಾರಿ ತ್ರಿಪುರದ ಮುಖ್ಯಮಂತ್ರಿಯಾಗಿದ್ದಾರೆ.

ಇದನ್ನೂ ಓದಿ: ಇಂದು ತಾಜ್‍ಮಹಲ್ ಭೇಟಿ ನೀಡಲಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ!

ನಿತೀಶ್ ಕುಮಾರ್

ಬಿಹಾರದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಕೀರ್ತಿ ನಿತೀಶ್ ಕುಮಾರ್ ಅವರದ್ದಾಗಿದೆ. ಸುಮಾರು 20 ವರ್ಷಗಳ ಕಾಲ ಇವರು ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರೆ. 2005ರಿಂದ ಜನತಾದಳ (ಯುನೈಟೆಡ್) ನಾಯಕನಾಗಿರುವ ಇವರು 2014ರಲ್ಲಿ ಒಂದು ವರ್ಷದ ವಿಶ್ರಾಂತಿಯನ್ನು ಪಡೆದಿದ್ದರು.

ವಿದ್ಯಾ ಇರ್ವತ್ತೂರು

View all posts by this author