ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಮ್ಮನ್ನು ಪ್ರೀತಿಸಿ, ಮೋದಿಯವರನ್ನು ಮದುವೆಯಾದಿರಿ: ದೇವೇಗೌಡರಿಗೆ ಟಾಂಗ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ನಕ್ಕ ಪ್ರಧಾನಿ ಮೋದಿ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಅವರು ಬುಧವಾರ ತಮ್ಮ ವಿದಾಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಬಗ್ಗೆ ಮಾತನಾಡಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಸಂಗ್ರಹ ಚಿತ್ರ

ನವದೆಹಲಿ: ಎಚ್‌ಡಿ ದೇವೇಗೌಡ (H.D. Deve Gowda) ಅವರು ಮಾಜಿ ಪ್ರಧಾನಿಯಾಗಿದ್ದವರು. ಹಲವಾರು ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ನಾನು ಅವರನ್ನು 54 ವರ್ಷಗಳಿಂದ ತಿಳಿದಿದ್ದೇನೆ. ಅವರೊಂದಿಗೆ ಕೆಲಸ ಕೂಡ ಮಾಡಿದ್ದೇನೆ. ಆದರೆ ಏನಾಯಿತು ಗೊತ್ತಿಲ್ಲ. ನಮ್ಮೊಂದಿಗೆ ಡೇಟಿಂಗ್ ಮಾಡಿ, ನಮ್ಮನ್ನು ಪ್ರೀತಿಸಿ ಬಳಿಕ ಪ್ರಧಾನಿ ನರೇಂದ್ರ ಮೋದಿಯವರನ್ನು ವಿವಾಹವಾದರು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ (Congress president) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದರು. ಇದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಅಲ್ಲಿದ್ದವರೆಲ್ಲನ್ನೆಲ್ಲ ನಗೆಗಡಲಲ್ಲಿ ತೇಲಿಸಿತ್ತು.

ಗದ್ದಲ, ಪ್ರತಿಭಟನೆ, ರಾಷ್ಟ್ರೀಯ ಖಜಾನೆ, ವಿರೋಧ ಪಕ್ಷದ ಪೀಠಗಳ ನಡುವಿನ ತೀವ್ರ ವಾಗ್ವಾದದ ಬಳಿಕ ರಾಜ್ಯ ಸಭೆಯಲ್ಲಿ ಅಧಿಕಾರಾವಧಿ ಕೊನೆಯಾಗುತ್ತಿರುವುದಕ್ಕೆ ಬುಧವಾರ ವಿದಾಯ ಭಾಷಣ ಮಾಡಿದ ಅವರು, ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಬಗ್ಗೆ ಮಾತನಾಡಿದರು.

ಶಾಂತಿ ಪುನಃಸ್ಥಾಪನೆಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ: ಯುಎಇ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ

ಈ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಕಳೆದ ಸಮಯವನ್ನು ಮೆಲುಕು ಹಾಕಿದ ಅವರು, ಇದು ತನ್ನನ್ನು ಹೇಗೆ ಶ್ರೀಮಂತಗೊಳಿಸಿದೆ ಎಂಬುದನ್ನು ವಿವರಿಸಿದರು. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಬಗ್ಗೆ ಮಾತನಾಡಿ, ದೇವೇಗೌಡ ಅವರ ರಾಜ್ಯಸಭೆಯ ಅವಧಿ ಕೊನೆಗೊಳ್ಳಲಿದೆ. ಆದರೆ ಪವಾರ್ ಮತ್ತೆ ಬರುತ್ತಾರೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣ:



1996ರ ಲೋಕಸಭಾ ಚುನಾವಣೆ ಬಳಿಕ ದೇವೇಗೌಡ ಅವರು ಕೆಲವು ತಿಂಗಳಿಗೆ ಪ್ರಧಾನಿಯಾಗಿದ್ದರು. ಅವರು ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರವನ್ನು ಕಾಂಗ್ರೆಸ್ ಬೆಂಬಲಿಸಿತ್ತು. 2018ರ ರಾಜ್ಯ ಚುನಾವಣೆಗೆ ಎಚ್‌ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತು. ಈ ಮೈತ್ರಿಕೂಟ ಗೆದ್ದಿತು. ದೇವೇಗೌಡ ಅವರ ಮಗ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಂಡಾಯವೆದ್ದಿದ್ದು, ಇದರಿಂದ 2019 ರಲ್ಲಿ ರಾಜ್ಯ ಸರ್ಕಾರ ಪತನಗೊಂಡಿತು. ಬಳಿಕ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತು ಎಂದು ಹೇಳಿ ಖರ್ಗೆ ದೇವೇಗೌಡರನ್ನು ಟೀಕಿಸಿದರು.

ಶರದ್ ಪವಾರ್ ಮತ್ತು ಡಿಎಂಕೆಯ ತಿರುಚಿ ಶಿವ ಅವರೊಂದಿಗೂ ತಮ್ಮ ದೀರ್ಘ ಕಾಲದ ಸಂಬಂಧದ ಬಗ್ಗೆ ಮಾತನಾಡಿದ ಅವರು, ಅವರಿಬ್ಬರೂ ಕೂಡ ರಾಜ್ಯಸಭೆಗೆ ಮರಳಲಿದ್ದಾರೆ ಎಂದರು.

ಕೇಂದ್ರ ಸಚಿವ ಮತ್ತು ಆರ್‌ಪಿಐ (ಎ) ಮುಖ್ಯಸ್ಥ ರಾಮದಾಸ್ ಅಠಾವಳೆ ಅವರನ್ನು ಟೀಕಿಸಿದ ಖರ್ಗೆ, ಅವರು ಯಾವಾಗಲೂ ತಮ್ಮ ಕವಿತೆಗಳಲ್ಲಿ ಮೋದಿಜಿಯನ್ನು ಹೊಗಳುತ್ತಾರೆ. ಅವರಿಗೆ ಬೇರೆ ಯಾವುದೇ ಕವಿತೆ ತಿಳಿದಿಲ್ಲ ಎಂದರು.

ಖರ್ಗೆ ಅವರ ಮಾತಿಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ನಿವೃತ್ತಿ ಹೊಂದುತ್ತಿರುವ ರಾಜ್ಯಸಭಾ ಸಂಸದರಿಗೆ ಅವರ ಕೊಡುಗೆಗಳಿಗಾಗಿ ಧನ್ಯವಾದ ಹೇಳಿ, ಶುಭ ಹಾರೈಸಿದರು.

ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ ಎಂದ ಅವರು, ಭವಿಷ್ಯವು ನಿಮಗಾಗಿ ಕಾಯುತ್ತಿದೆ. ನಿಮ್ಮ ಅನುಭವ ಮತ್ತು ಕೊಡುಗೆ ಯಾವಾಗಲೂ ಸ್ಮರಣೀಯವಾಗಿರುತ್ತದೆ. ಹೊಸದಾಗಿ ಆಯ್ಕೆಯಾದ ಸಂಸದರು ದೇವೇಗೌಡ, ಖರ್ಗೆ ಮತ್ತು ಪವಾರ್ ಅವರಂತಹ ಅನುಭವಿಗಳಿಂದ ಕಲಿಯುವಂತೆ ಸಲಹೆ ನೀಡಿದರು.

ಎಚ್‌ಡಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್ ಪವಾರ್ ಅವರು ಹಿರಿಯ ನಾಯಕರು. ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಸಂಸದೀಯ ಕೆಲಸದಲ್ಲಿ ಕಳೆದಿದ್ದಾರೆ. ಹೊಸದಾಗಿ ಆಯ್ಕೆಯಾದ ಸಂಸದರು ಅವರಿಂದ ಕಲಿಯಬೇಕು ಎಂದ ಅವರು, ಕೆಲವೊಮ್ಮೆ ಸದನದಲ್ಲಿ ಹಾಸ್ಯ ಮತ್ತು ವಿಡಂಬನೆಗೆ ಸಾಕಷ್ಟು ಅವಕಾಶವಿದೆ ಎಂದು ನಾವು ಕೇಳುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ, ಬಹುಶಃ ಅದು ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ನಮ್ಮ ಅಠಾವಳೆ ನಿತ್ಯಹರಿದ್ವರ್ಣ ಎಂದರು.

ವಾಯುಪ್ರದೇಶ ನಿರ್ಬಂಧದ ನಡುವೆ ಕತಾರ್ ಏರ್‌ವೇಸ್‌ನಲ್ಲಿ ತವರಿಗೆ ಮರಳಿದ 1,600 ಭಾರತೀಯರು

ರಾಜ್ಯಸಭೆಯಲ್ಲಿ 37 ಸ್ಥಾನಗಳು ಈ ವರ್ಷದಲ್ಲಿ ಖಾಲಿಯಾಗಿದ್ದು, ಇದರಲ್ಲಿ 26 ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಉಳಿದ ಸ್ಥಾನಗಳನ್ನು ಸೋಮವಾರ ನಡೆದ ಚುನಾವಣೆ ಬಳಿಕ ಆಯ್ಕೆ ಮಾಡಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author