Pralhad Joshi: ಕಾಂಗ್ರೆಸ್ಸಿಗರ ಅಪಪ್ರಚಾರದ ನಡುವೆಯೂ ರಾಜ್ಯದಲ್ಲಿ 518 ಆರೆಸ್ಸೆಸ್ ಪಥಸಂಚಲನ ಯಶಸ್ವಿ: ಪ್ರಲ್ಹಾದ್ ಜೋಶಿ
ಆರ್‌ಎಸ್‌ಎಸ್ ಸಂಘಟನೆಗೆ ಪಥಸಂಚಲನಕ್ಕೆ ಅನುಮತಿ ನೀಡಿದರೆ ಗಲಾಟೆ, ದೊಂಬಿ ಹಾಗೂ ಕೋಮು ಗಲಭೆಗಳಿಗೆ ದಾರಿಯಾಗುತ್ತದೆ ಎಂಬ ಕಾಂಗ್ರೆಸ್ ನಾಯಕರ ಅಪಪ್ರಚಾರದ ನಡುವೆಯೂ ಧೃತಿಗೆಡದೆ ರಾಜ್ಯದಲ್ಲಿ ಬರೋಬ್ಬರಿ 518 ರಾಷ್ಟ್ರೀಯ ಪಥಸಂಚಲನ ಕಾರ್ಯಕ್ರಮಗಳನ್ನು ನಡೆಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ) -
ನವದೆಹಲಿ, ಡಿ.11: ಆರ್‌ಎಸ್‌ಎಸ್ (RSS) ಶಬ್ದ ಕೇಳಿದರೆ ಸಾಕು ಉರಿದುಬಿಡುತ್ತಿದ್ದ ಕಾಂಗ್ರೆಸ್ಸಿಗರಿಗೆ ಇದೀಗ ಅವರ ಸರ್ಕಾರದಿಂದಲೇ ತಕ್ಕ ಉತ್ತರ ಸಿಕ್ಕಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ. ಕರ್ನಾಟಕದಲ್ಲಿ ಬೃಹತ್ತಾಗಿ 518 ಆರೆಸ್ಸೆಸ್ ಪಥಸಂಚಲನ ಕಾರ್ಯಕ್ರಮಗಳು ಅತ್ಯಂತ ಶಿಸ್ತುಬದ್ಧವಾಗಿ ಯಶಸ್ವಿಗೊಂಡಿವೆ. ಕಾಂಗ್ರೆಸ್ಸಿಗರು ಮಾಡಿದ ಅಪಪ್ರಚಾರಕ್ಕೆ ಇದು ತಕ್ಕ ಉತ್ತರವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕರ ಪಥಸಂಚಲನಕ್ಕೆ ಅವಕಾಶ ಕೊಟ್ಟರೆ ಗದ್ದಲ, ಗಲಾಟೆ, ಕೋಮು ಗಲಭೆಗೆ ಕಾರಣವಾಗುತ್ತದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಲೇ ಇತ್ತು. ಆದರೆ, ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪಥಸಂಚಲನ ನಡೆಸಿದ್ದರೂ ಅಂತಹ ಯಾವುದೇ ಅಹಿತಕರ ವಾತಾವರಣ ಉಂಟಾಗಿಲ್ಲ ಎಂಡಿದ್ದಾರೆ ಜೋಶಿ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಸರು ಕೇಳಿದರೆ ಸಾಕು ಕಾಂಗ್ರೆಸ್ ನಾಯಕರಿಗೆ ಮೈ ಉರಿಯುತ್ತದೆ. ಇಂಥವರಿಗೆ ಇದೀಗ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವೇ ತಕ್ಕ ಉತ್ತರ ನೀಡಿದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಆರ್‌ಎಸ್‌ಎಸ್ ಸಂಘಟನೆಗೆ ಪಥಸಂಚಲನಕ್ಕೆ ಅನುಮತಿ ನೀಡಿದರೆ ಗಲಾಟೆ, ದೊಂಬಿ ಹಾಗೂ ಕೋಮು ಗಲಭೆಗಳಿಗೆ ದಾರಿಯಾಗುತ್ತದೆ ಎಂಬ ಕಾಂಗ್ರೆಸ್ ನಾಯಕರ ಅಪಪ್ರಚಾರದ ನಡುವೆಯೂ ಧೃತಿಗೆಡದೆ ರಾಜ್ಯದಲ್ಲಿ ಬರೋಬ್ಬರಿ 518 ರಾಷ್ಟ್ರೀಯ ಪಥಸಂಚಲನ ಕಾರ್ಯಕ್ರಮಗಳನ್ನು ನಡೆಸಿದೆ. ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿಗೆ ಪ್ರತೀಕವಾಗಿದೆ ಮತ್ತು 'ದೇಶ ಮೊದಲು, ದೇಶ ಸೇವೆಯೇ ಪರಮೋಚ್ಚ' ಎಂಬ ಆರ್‌ಎಸ್‌ಎಸ್ ಸಿದ್ಧಾಂತವನ್ನು ಮತ್ತಷ್ಟು ಬಲವಾಗಿ ಪ್ರತಿಪಾದಿಸಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ಸಿಗರು ಇನ್ನಾದರೂ ಪಾಠ ಕಲಿಯಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಅಧಿವೇಶನ ಇದ್ದಾಗಲೆಲ್ಲ ರಾಹುಲ್ ವಿದೇಶದಲ್ಲೇ ಹೆಚ್ಚಿರ್ತಾರೆ: ಜೋಶಿ ಟೀಕೆ
ಕಾಂಗ್ರೆಸ್ ಪಕ್ಷದೊಳಗೇ ಮೊದಲು SIR ನಡೆಯಬೇಕಿದೆ: ಪ್ರಲ್ಹಾದ್ ಜೋಶಿ ಕಿಡಿ
ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲೇ SIR (ವಿಶೇಷ ತೀವ್ರ ಪರಿಷ್ಕರಣೆ) ಅಗತ್ಯತೆ ಹೆಚ್ಚಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಸಂಸತ್ ಚಳಿಗಾಲದ ಅಧಿವೇಶನದ ಈ ಸಂದರ್ಭದಲ್ಲಿ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣಾ ಆಯೋಗಕ್ಕಿಂತ ಕಾಂಗ್ರೆಸ್ ಪಕ್ಷದಲ್ಲೇ SIR ತುಂಬಾ ಅವಶ್ಯಕತೆ ಇದೆ ಎಂದು ಹೇಳಿದರು.
ಸೌರಶಕ್ತಿಗೆ 3ನೇ ಅತಿದೊಡ್ಡ ಕೊಡುಗೆದಾರ ರಾಷ್ಟ್ರ ಭಾರತ: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಪಕ್ಷದಲ್ಲಿ ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹೀಗೆ ಬರೀ ನಕಲಿ ಗಾಂಧಿಗಳದ್ದೇ ಅಧಿಕಾರ ಮುಂಚೂಣಿಯಲ್ಲಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದೊಳಗೇ ಮೊದಲು SIR ನಡೆಯಬೇಕಿದೆ ಎಂದು ಜೋಶಿ ಅಭಿಪ್ರಾಯಿಸಿದ್ದಾರೆ.